ಬಳ್ಳಾರಿ: ಖಾಸಗಿ ಕಾಲೇಜುಗಳಲ್ಲಿ ಸಿಇಟಿ/ನೀಟ್ ತರಬೇತಿ ತಡೆಗೆ ಒತ್ತಾಯ
ಲೋಕದರ್ಶನ ವರದಿ
ಬಳ್ಳಾರಿ 17: ನಗರವೂ ಸೇರಿದಂತೆ ವಿವಿಧ ಖಾಸಗಿ ಕಾಲೇಜುಗಳಲ್ಲಿ ಕಾನೂನು ಬಾಹಿರ ಸಿ.ಇ.ಟಿ ಮತ್ತು ನೀಟ್ ಕೋಚಿಂಗ್ ತರಗತಿಗಳನ್ನು ನಿರಂತರವಾಗಿ ನಡೆಸುತ್ತಿರುವುದನ್ನು ತಡೆ ಗಟ್ಟುವಂತೆ ಒತ್ತಾಯಿಸಿ ನವಕರ್ನಾಟಕ ಯುವಶಕ್ತಿ ಸಂಘಟನೆಯ ಬಳ್ಳಾರಿ ಜಿಲ್ಲಾ ಘಟಕವು ನಗರದ ಮುನಿಸಿಪಲ್ ಹೈಸ್ಕೂಲ್ ಮೈದಾನದಲ್ಲಿರುವ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ನಾಗರಾಜ್ ಅವರಿಗೆ ಮನವಿ ಪತ್ರವನ್ನು ಬುಧವಾರದಂದು ಸಲ್ಲಿಸಿದೆ.
ನಗರದಲ್ಲಿರುವ ಡಿಡಿಪಿಯು ಕಛೇರಿಗೆ ನವಕನರ್ಾಟಕ ಯುವಶಕ್ತಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಸಿದ್ಮಲ್ ಮಂಜುನಾಥ ನೇತೃತ್ವದಲ್ಲಿ ಧಾವಿಸಿದ ಕಾರ್ಯಕರ್ತರು ಮನವಿ ಪತ್ರವನ್ನು ಸಲ್ಲಿಸಿ, ಖಾಸಗಿ ಕಾಲೇಜುಗಳು ಸಿ.ಇ.ಟಿ. ನೀಟ್ ತರಬೇತಿ ನೀಡುತ್ತೇವೆ ಎಂದು ಹೇಳಿ ವಿದ್ಯಾರ್ಥಿಗಳ ಪೋಷಕರಿಂದ ಹಣ ಸುಲಿಯುವ ಕೆಲಸಕ್ಕೆ ಇಳಿದಿದ್ದಾರೆ ಎಂದು ಆರೋಪಿಸಿ ಖಾಸಗಿ ಕಾಲೇಜುಗಳ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿನ ಕೆಲವು ಖಾಸಗಿ ಕಾಲೇಜುಗಳು ಅನಿಯಮಿತವಾದ ಕಾಲೇಜು ವೇಳಾಪಟ್ಟಿಯನ್ನು ಸೃಷ್ಟಿಮಾಡಿಕೊಂಡು ಬೆಳಿಗ್ಗೆ 8.00 ಗಂಟೆಯಿಂದ ರಾತ್ರಿ ಏಳು ಅಥವಾ ಎಂಟು ಗಂಟೆಯವರೆಗೆ ವಿದ್ಯಾರ್ಥಿಗಳನ್ನು ತರಗತಿ ಕೊಠಡಿಗಳಲ್ಲಿ ಕೂಡಿ ಹಾಕಿ ವಿದ್ಯಾರ್ಥಿಗಳ ಮೇಲೆ ಒತ್ತಡವನ್ನು ಹಾಕುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗದಂತೆ ಆಗಿದ್ದು, ಅವರ ಪ್ರತಿಭೆ ಕುಂಠಿತವಾಗಲಿದೆ.
ಸರ್ಕಾರಿ ಆದೇಶದ ಪ್ರಕಾರ ಎಷ್ಟು ಗಂಟೆಗಳ ಕಾಲ ಕಾಲೇಜನ್ನು ನಿರ್ವಹಿಸಬೇಕು. ಅಷ್ಟು ಗಂಟೆಗಳು ಮಾತ್ರ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿ ಅವರನ್ನು ಮನೆಗೆ ಕಳುಹಿಸಬೇಕಾಗಿದೆ. ಆದರೆ ಈ ಕಾಲೇಜುಗಳು ತಮಗೆ ಇಷ್ಟಬಂದ ರೀತಿಯಲ್ಲಿ ವತರ್ಿಸುವುದಕ್ಕೆ ಅನುಮತಿ ನೀಡಿದವರ್ಯಾರು ಎಂಬುದೇ ತಿಳಿಯುತ್ತಿಲ್ಲ. ಈ ಬಗ್ಗೆ ಕೂಡಲೇ ಕ್ರಮಜರುಗಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ವಿವಿಧ ಪದಾಧಿಕಾರಿಗಳಾದ ಕೆ.ರಮೇಶ್, ಮುಂಡಾಸದ ಮಲ್ಲಿಕಾರ್ಜುನ, ಎಂ.ದೇವೇಶ್, ಡಿ.ಮಹೇಶ್ ಕುಮಾರ್, ಯಮುನಪ್ಪ, ಎಂ.ಮಂಜುನಾಥ ಮುಂತಾದವರು ಹಾಜರಿದ್ದರು.