ಬಳ್ಳಾರಿ: ಆರೋಗ್ಯವಂತ ಕರ್ನಾಟಕದ ನಿರ್ಮಾಣಕ್ಕೆ ಡಾ.ರಾಜಕುಮಾರ: ರಮೇಶ
ಬಳ್ಳಾರಿ 24: ಡಾ. ರಾಜಕುಮಾರ್ ಅವರ ವ್ಯಕ್ತಿತ್ವ ಹಾಗೂ ಅವರು ಅಭಿನಯಿಸಿದ ಸಿನಿಮಾಗಳ ಅಧ್ಯಯನದಿಂದ ಆರೋಗ್ಯವಂತ ಕನರ್ಾಟಕ ಮತ್ತು ಸಮಾಜದ ನಿರ್ಮಾಣ ಸಾಧ್ಯ ಎಂದು ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಯವರಾದ ಡಾ. ಸ.ಚಿ. ರಮೇಶ ಅವರು ತಿಳಿಸಿದರು.ನಾಡೋಜ ಡಾ. ರಾಜಕುಮಾರ್ ಅಧ್ಯಯನ ಪೀಠವು 24ನೇ ಏಪ್ರಿಲ್ 2019ರಂದು ಮಂಟಪ ಸಭಾಂಗಣದಲ್ಲಿ ಆಯೋಜಿಸಿದ್ದ, ಡಾ. ರಾಜಕುಮಾರ್ ಅವರ 90ನೇ ಹುಟ್ಟು ಹಬ್ಬದ ಪ್ರಯುಕ್ತ ನಾನು ಕಂಡಂತೆ ಡಾ. ರಾಜಕುಮಾರ್ ವಿಶೇಷ ಉಪನ್ಯಾಸವನ್ನು ಹಾಗೂ ಕವಿರತ್ನ ಕಾಳಿದಾಸ ಸಿನಿಮಾ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾನ್ಯ ಕುಲಪತಿಯವರು ಮಾತನಾಡಿದರು.
ಮುಂದುವರೆದು ಮಾತನಾಡುತ್ತಾ ಡಾ. ರಾಜ್ ಎಂದರೆ ರೋಮಾಂಚನವಾಗುತ್ತದೆ. ರಂಗಭೂಮಿ, ಸಿನಿಮಾ ಕ್ಷೇತ್ರ ಮಾತ್ರವಲ್ಲ ಅವರು ಎಲ್ಲಾ ಸಮುದಾಯಗಳ ಐಡೆಂಟಿಟಿ ಆಗಿದ್ದರು ಎಂದರೆ ತಪ್ಪಾಗುವುದಿಲ್ಲ. ಅಣ್ಣ, ತಮ್ಮ, ತಂದೆ, ಪತಿಯಾಗಿ, ರಾಜನಾಗಿ, ಪುರಾಣ ಪುರುಷನಾಗಿ, ದೈವವಾಗಿ, ಆದರ್ಶ ಪುರುಷನಾಗಿ ಅವರ ನಟನೆಯನ್ನು ಚಲನಚಿತ್ರಗಳಲ್ಲಿ ಕಾಣುತ್ತೇವೆ. ಕನ್ನಡ ನಾಡಿನ ಸಾಂಸ್ಕೃತಿಕ ಅಂತರಂಗವು ರಾಜ್ಕುಮಾರ್ ಅವರಿಂದ ಅನಾವರಣಗೊಳ್ಳುತ್ತದೆ. ಮೇರು ವ್ಯಕ್ತಿತ್ವದ ಇವರು ಹಣದ ಬಗ್ಗೆ ವೈರಾಗ್ಯದಿಂದ ಇದ್ದರು ಎಂದು ತಿಳಿಸುತ್ತಾ ಸಂದರ್ಭ ಒಂದರಲ್ಲಿ ಭಿಕ್ಷುಕಿ ಒಬ್ಬಳಿಗೆ ರಾಜ್ ಅವರು 500 ರೂಪಾಯಿ ಭಿಕ್ಷೆ ಕೊಡಿಸಿದರಂತೆ. ನಂತರ ನಾನು 500 ರೂಪಾಯಿ ಭಿಕ್ಷೆ ಕೊಡಲು ತಿಳಿಸಿದರೆ ನೀವು ನೂರು ರೂಪಾಯಿ ಕೊಟ್ಟಿರಲ್ಲಾ ಎಂದರಂತೆ. ಹೀಗೆ ರಾಜ್ ಅವರಿಗೆ 500 ಮತ್ತು 100 ರೂಪಾಯಿಗಳ ನಡುವೆ ವ್ಯತ್ಯಾಸ ತಿಳಿದಿರಲಿಲ್ಲ ಎಂದು ಉದಾಹರಣೆ ಮೂಲಕ ತಿಳಿಸಿದರು. ರಾಜಕುಮಾರ್ ಅವರು ಕನ್ನಡ ನಾಡಿನ ಆತ್ಮಸಾಕ್ಷಿಯಾಗಿದ್ದರು. ಚಲನಚಿತ್ರ ನಿದರ್ೇಶಕರಾದ ಆದಿತ್ಯಚಿಕ್ಕಣ್ಣ ಅವರು ನಾನು ಕಂಡಂತೆ ಡಾ. ರಾಜಕುಮಾರ್ ಕುರಿತು ವಿಶೇಷ ಉಪನ್ಯಾಸ ನೀಡುತ್ತಾ, ಡಾ. ರಾಜ್ ಅವರನ್ನು ಕುರಿತು ಮಾತನಾಡಲು ಯಾರಿಂದಲೂ ಸಾಧ್ಯವಿಲ್ಲ. ಅವರು ಹಿಮಾಲಯ ಪರ್ವತವಿದ್ದಂತೆ. ಕನ್ನಡ ನಾಡಿನ ಸಂಸ್ಕೃತಿ, ಸಂಸ್ಕಾರವೆಲ್ಲಾ ಅವರಲ್ಲಿತ್ತು. ಕುಟುಂಬ ಸಂಸಾರದ ಬಗ್ಗೆ ಅವರು ಎಂದೂ ಯೋಚಿಸಲಿಲ್ಲ. ಮೂರು ಹೊತ್ತು ಹೊಟ್ಟೆ ತುಂಬ ಊಟ ಮಾಡಬೇಕು ಅದಕ್ಕೆ ಸದಾ ದುಡಿಯುವ ಶಕ್ತಿ ಕೊಡು ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದರು. ದೈಹಿಕ ಸ್ವಚ್ಚತೆಗಿಂತ ಅಂತರಂಗವನ್ನು ಶುದ್ಧವಾಗಿಟ್ಟುಕೊಳ್ಳಬೇಕು ಎಂದು ಹೇಳುತ್ತಿದ್ದ ಅವರು ಜಾತಿ, ಮತ, ಧಮರ್ಾತೀತವಾಗಿದ್ದರು. ದ್ವೇಷದಿಂದ ಸಾಧಿಸಲಾಗದ್ದನ್ನು ಪ್ರೀತಿಯಿಂದ ಸಾಧಿಸಬಹುದು ಎಂದು ಹೇಳುತ್ತಿದ್ದರು. ಇವರನ್ನು ಕುರಿತು ಪಠ್ಯಕ್ರಮದಲ್ಲಿ 7ನೇ ತರಗತಿಯ ಮಕ್ಕಳಿಗೆ ಮಹಾರಾಷ್ಟ್ರ ಸಕರ್ಾರವು ಪಾಠವನ್ನು ಅಳವಡಿಸಿದೆ ಎಂದು ಆದಿತ್ಯಚಿಕ್ಕಣ್ಣ ಅವರು ವಿಶೇಷ ಉಪನ್ಯಾಸದಲ್ಲಿ ತಿಳಿಸಿದರು.