ಬಳ್ಳಾರಿ: 3ನೇ ವರ್ಷದ ತುಂಗಭದ್ರ ಹೂಳಿನ ಜಾತ್ರೆ
ಬಳ್ಳಾರಿ 02: ಈ ತಿಂಗಳ ಕೊನೆಯೆ ವಾರದಲ್ಲಿ ತುಂಗಭದ್ರ ಜಲಾಶಯದಲ್ಲಿ ಹೂಳಿನ ಜಾತ್ರೆ ನಡೆಸುವುದಾಗಿ ತುಂಗಭದ್ರ ರೈತಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ತಿಳಿಸಿದರು. ಈ ಕುರಿತು ಪತ್ರಿಕಾಗೋಷ್ಟಿ ನಡೆಸಿ ಮಾತನಾಡುತ್ತಾ ಅತೀ ಶೀಗ್ರದಲ್ಲೇ ಮಠಾದೀಶರು, ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ದಿನಾಂಕ ನಿಗದಿಮಾಡಲಾಗುವುದು ಎಂದರು.
ತುಂಗಭದ್ರ ಜಲಾಶಯದಿಂದ ಬಳ್ಳಾರಿ, ಕೊಪ್ಪಳ ಜಿಲ್ಲೆಯ ಅನೇಕ ಕಾಖರ್ಾನೆಗಳು ಈ ಜಲಾಶಯದ ನೀರನ್ನು ಪಡೆಯುತ್ತಿವೆ. ಅದಕ್ಕಾಗಿ ಕಾಖರ್ಾನೆಗಳು ಪಡೆಯುತ್ತಿರುವ ನೀರಿನ ಪ್ರಮಾಣದಷ್ಟು ಹೂಳನ್ನು ಪ್ರತೀ ವರ್ಷ ತೆಗೆಯಬೇಕೆಂದರು. ಇಲ್ಲದಿದ್ದಲ್ಲಿ ಕಾರ್ಖಾನೆಗಳ ವಿರುದ್ದ ಹೋರಾಟ ನಡೆಸಬೇಕಾಗುತ್ತದೆ ಎಂದರು. ಡಿಸೆಂಬರ್ ಅಂತ್ಯದೊಳಗೆ ನೀರು ಪಡೆಯಬೇಕೆಂದು ನಿಯಮಗಳಿದ್ದರೂ ಅವೆಲ್ಲವನ್ನು ಗಾಳಿಗೆ ತೂರಿ ಕಾಖರ್ಾನೆಯವರು ಇಲ್ಲಿಯವರೆಗೂ ನೀರು ಪಡೆಯುತ್ತಾದ್ದಾರೆಂದು ಆರೋಪಿಸಿದರು.
ಬರಗಾಲ ತಿವ್ರವಾಗಿದ್ದು ಜಾನುವಾರುಗಳ ಸಾಗಾಣಿಕೆ ಕಷ್ಟಕರವಾಗಿದೆ. ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಗೋಶಾಲೆಗಳನ್ನು ತೆರೆಯಬೇಕೆಂದ ಅವರು ಸ್ವತಹ ಪಶುಸಂಗೋಪನಾ ಸಚಿವ ಸಿಂದನೂರಿನವರಾದರೂ ಗೋ ಶಾಲೆಗಳನ್ನು ಜವಳಗೆರೆ, ಕಾರಟಗಿ, ದಡೆಸುಗೂರು, ಹಗರಿಫಾರ್ಮ, ಮೊದಲಾದ ಕಡೆ ಗೋಶಾಲೆಗಳನ್ನು ಆರಂಭಿಸ ಬೇಕೆಂದರು. ಕೃಷಿ ನದಿಯನ್ನು ಹಿರೆಹಳ್ಳಕ್ಕೆ ಜೋಡಣೆ ಮಾಡಿ ಆ ಮೂಲಕ ತುಂಗಭದ್ರ ಜಲಾಶಯಕ್ಕೆ ನೀರು ಹರಿಸಬಹುದಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಕೆ.ಗೋವಿಂದಪ್ಪ, ಕೆ.ಮಲ್ಲಪ್ಪ, ಶಿವಯ್ಯ, ವೀರೇಶ ಗಂಗಾವತಿ, ಕರೂರು ರಾಮನಗೌಡ, ಮಸಿದಿಪುರು ಬಸವನಗೌಡ, ಶ್ರೀಧರ್ ಜಾಳಿಹಾಳ್, ಕೆ.ಎಂ.ಹನುಮಗೌಡ, ಭೀಮನಗೌಡ, ಮಲ್ಲಿಕಾರ್ಜುನ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.