ಬಳ್ಳಾರಿ; ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಗೆ ಆಯ್ಕೆಯಾದ ಕ್ರೀಡಾ ಪಟುಗಳು

ಬಳ್ಳಾರಿ; ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಗೆ ಆಯ್ಕೆಯಾದ ಕ್ರೀಡಾ ಪಟುಗಳು

ಲೋಕದರ್ಶನ ವರದಿ

ಬಳ್ಳಾರಿ 24: ಇಲ್ಲಿನ ಟ್ರೇಡಿಷನಲ್ ಶೊಟಾಕಾನ್ ಕರಾಟೆ ಪಟುಗಳು ಮೇ1 ರಿಂದ 6 ರವರೆಗೆ ನಡೆಯಲಿರುವ ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿಯು ಮಲೇಶಿಯಾ ದೇಶದಲ್ಲಿ ನಡೆಯಲಿದೆ. ಈಸ್ಪರ್ಧೆಯಲ್ಲಿ  ಕರ್ನಾಟಕದ ಬಳ್ಳಾರಿ ಜಿಲ್ಲಾ ಕರಾಟೆ ಸ್ಪೋರ್ಟ ಅಸೋಸಿಯನ್ ಕ್ರೀಟಾ ಪಟುಗಳು ಆಯ್ಕೆಯಾಗಿದ್ದಾರೆ. 

ಒಟ್ಟು 23 ಕ್ರೀಡಾ ಪಟುಗಳಲ್ಲಿ 19 ಬಾಲಕರು, 4 ಬಾಲಕಿಯರು ಭಾಗವಹಿಸಲಿದ್ದಾರೆ. ಈ ಪಂದ್ಯಾವಳಿಯು ಕುಮತೆ ಮತ್ತು ಕಟಾ ವಿಭಾಗದಲ್ಲಿ ಕಲರ್ ಬೇಲ್ಟ ಮತ್ತು ಬ್ಲಾಕ್ ಬೇಲ್ಟನ ತೂಕ ಮತ್ತು ವಯೋಮಿತಿಯ ವಿಭಾಗದಲ್ಲಿ ಭಾಗವಹಿಸಲಿದ್ದಾರೆ. 

ಬ್ಲಾಕ್ ಬೇಲ್ಟ ಕರಾಟೆ ವಿಭಾಗದಲ್ಲಿ ರವಿಕುಮಾರ್ ರೋಹಿಲ್ಲ, ವಂದನಾ ರಾವತ್, ಅಮಲ್, ಸಾಯಿ ಕೃಷ್ಣ, ಅಥುಲ್ ಕೃಷ್ಣ, ಯಶಸ್ ಹೆಗಡೆ, ಹರ್ಷವರ್ದನ್, ನಭಿಸಾಹೇಬ್, ರವಿತೇಜ, ಜಡೆಶಾ, ಹುಲುಗಣ್ಣ, ಬಸವರಾಜ, ನಾಗರಾಜ್, ಕಟ್ಟೇಸ್ವಾಮಿ, ಸುಭಾಷ ಚಂದ್ರ ಆಯ್ಕೆಯಾಗಿದ್ದಾರೆ, 

ಕಲರ್ ಬೇಲ್ಟ ವಿಭಾಗದಲ್ಲಿ ಅನೂಪ್ ಪಿಸಾ, ನಿಷ್ಟಯ ಕುಮಾರ, ವೈಶಾಲಿ, ಸೃಷ್ಠಿ, ಸಾನಿಯಾ ಹಸ್ಮಿ, ಚಿನ್ಮಯದಾಸ, ಅದಿಪ್ ಕುಮಾರ, ದ್ರುವ ಪಾಟೀಲ ಆಯ್ಕೆಯಾಗಿದ್ದಾರೆ ಎಂದು ಕರಾಟೆ ಅಕಾಡಮಿಯ ಹಿರಿಯ ತರಭೇತುದಾರರಾದ ಕಟ್ಟೇಸ್ಮಾಮಿ ಪತ್ರಿಕಾ ಪ್ರಕಟನೆಗೆ ತಿಳಿಸಿದ್ದಾರೆ. 

ಸಂಸ್ಥೆಯ ಗೌರವಾಧ್ಯಕ್ಷ ಆನಂದ ಪೊಲಾ ಹಾಗೂ ಅಧ್ಯಕ್ಷ ಹರಿ ಶಂಕರ ಅಗವರ್ಾಲ್, ಕನರ್ಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ರಾಮಾಂಜಿನಿ, ಸೇರಿದಂತೆ ಚಂದ್ರ, ರಾಜು, ಬಿಎಲ್ಆರ್ ಸಿನಾ, ಅಬ್ದುಲ್ ಹಜಿಜ ಉಪಸ್ಥಿತರಿದ್ದರು. ಕಟ್ಟೆಸ್ವಾಮಿಯವರು ದಕ್ಷಿಣ ಭಾರತ ತಂಡದ ವ್ಯವಸ್ಥಾಪಕರು ಹಾಗೂ ತರಬೇತುದಾರರನ್ನಾಗಿ ಸುಭಾಷ ಚಂದ್ರ ಅವರನ್ನು ನೇಮಕಮಾಡಿದ್ದಾರೆ.


ಸುದ್ದಿ ಓದಿ