ಬೈಲಹೊಂಗಲ

ವೀರ ಜ್ಯೋತಿಗೆ ಅದ್ದೂರಿ ಸ್ವಾಗತ

ವೀರ ಜ್ಯೋತಿಗೆ ಅದ್ದೂರಿ ಸ್ವಾಗತ

ಬೈಲಹೊಂಗಲ 28: ವೀರ ವನಿತೆ ಬೆಳವಡಿ ಮಲ್ಲಮನ ಉತ್ಸವ-2021 ಅಂಗವಾಗಿ ಮಲ್ಲಮ್ಮಳ ತವರು ಮನೆ ಶಿರಸಿ ತಾಲೂಕಿನ ಸೊಂದ ಗ್ರಾಮದಿಂದ ಯಲ್ಲಾಪೂರ, ಖಾನಾಪೂರ, ಬೆಳಗಾಂವ ಮಾರ್ಗವಾಗಿ ಪಟ್ಟಣದ ಚನ್ನಮ್ಮ ಸಮಾಧಿ ಸ್ಥಳಕ್ಕೆ ಶನಿವಾರ ಸಂಜೆ ಆಗಮಿಸಿದ ವೀರ ಜ್ಯೋತಿಗೆ ಪೂಜೆ ಸಲ್ಲಿಸಿ, ಅದ್ದೂರಿಯಾಗಿ  ಬರಮಾಡಿಕೊಂಡು, ಮೆರವಣಿಗೆ ಮೂಲಕ ಬಿಳ್ಕೊಡಲಾಯಿತು.

ಶಾಸಕರಾದ ಮಹಾಂತೇಶ ಕೌಜಲಗಿ, ಮಹಾಂತೇಶ ದೊಡಗೌಡರ ವೀರಜ್ಯೋತಿಗೆ ಪೂಜೆ ಸಲ್ಲಿಸಿ ಮಾತನಾಡಿ, ಮಲ್ಲಮ್ಮಳ ಶೌರ್ಯಗಾಥೆಯನ್ನು ಅಚ್ಚಳಿಯದೆ ಉಳಿಸಲು, ಯುವಕರು ಅವಳ ದೇಶಪ್ರೇಮ, ಶೂರತನ ಅಳವಡಿಸಿಕೊಳ್ಳಲಿ ಎಂದು ಸರಕಾರ ಮಲ್ಲಮ್ಮಳ ಉತ್ಸವ ಹಮ್ಮಿಕೊಂಡಿದ್ದು, ಈ ಬಾರೀ ಉತ್ಸವವನ್ನು ಕರೊನಾ ಹಿನ್ನಲೆಯಲ್ಲಿ ಸರಳವಾಗಿ ಆಚರಿಸಲಾಗುತ್ತಿದ್ದು, ಮುಂದಿನ ವರ್ಷ ಅದ್ದೂರಿಯಾಗಿ ಉತ್ಸವ ಆಚರಿಲಾಗುವದು ಎಂದರು.

ಪ್ರಕಾಶ ಹುಂಬಿ ಮಾತನಾಡಿದರು.ಎಸಿ ಶಶಿಧರ ಬಗಲಿ, ತಹಶೀಲ್ದಾರ ಬಸವರಾಜ ನಾಗರಾಳ, ಉದ್ಯಮಿ ವಿಜಯ ಮೆಟಗುಡ್ಡ, ಸಮಾಜ ಕಲ್ಯಾಣ ಅಧಿಕಾರಿ ಮಹೇಶ ಉಣ್ಣಿ, ಕಂದಾಯ ನಿರೀಕ್ಷಕ ಸುರೇಶ ಮಾಳಗಿ,  ಬುಡ್ಡೆಸಾಬ ಶಿರಸಂಗಿ, ಮನೋಹರ ಬೊಂಗಾಳೆ ಮುಂತಾದವರು ಇದ್ದರು.

ಸುದ್ದಿ ಓದಿ