ಹೆಮ್ಮೆಯ ಕಲಾವಿದರಾದ ಬೆಳಗಲ್ಲು ವೀರಣ್ಣನವರು ಇನ್ನಿಲಾ
ಬಳ್ಳಾರಿ 02 : ರಂದು ಅಂತರಾಷ್ಟ್ರೀಯ ಖ್ಯಾತಿಯ ತೊಗಲುಗೊಂಬೆ ಕಲಾವಿದರು, ನಾಡೋಜ ಪ್ರಶಸ್ತಿ ಪುರಸ್ಕೃತರು ಹಾಗೂ ಬಳ್ಳಾರಿ ಹೆಮ್ಮೆಯ ಕಲಾವಿದರಾದ ಬೆಳಗಲ್ಲು ವೀರಣ್ಣನವರು ಬೆಳಿಗ್ಗೆ ಚಳ್ಳಕೆರೆ ಬಳಿ ನಡೆದ ಭೀಕರ ಅಫಘಾತದಲ್ಲಿ ಸಾವನ್ನಪ್ಪಿದ್ದು, ಇದರ ಪ್ರಯುಕ್ತ ಬಳ್ಳಾರಿ ಆಮ್ ಆದ್ಮಿ ಪಾರ್ಟಿಯ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕೆ.ಎರ್ರಿಸ್ವಾಮಿ ಅವರ ನೇತೃತ್ವದಲ್ಲಿ ಪಕ್ಷದ ಕಛೇರಿಯಲ್ಲಿಂದು ಶ್ರದ್ಧಾಂಜಲಿ ಸಲ್ಲಿಸಲಾಯಿತು.ನಂತರ ಮಾತನಾಡಿದ ಕೆ.ಎರ್ರಿಸ್ವಾಮಿ ಅವರು, ಬೆಳಗಲ್ಲು ವೀರಣ್ಣನವರ ಅಗಲಿಕೆಯಿಂದ ಜಿಲ್ಲೆಯು ರಂಗಭೂಮಿಯು ಒಬ್ಬ ಹೆಸರಾಂತ ಕಲಾವಿದರನ್ನು ಕಳೆದುಕೊಂಡಿರುವುದು ಜಿಲ್ಲೆಗೆ ಅಪಾರ ನಷ್ಟವನ್ನುಂಟು ಮಾಡಿದೆ ಎಂದರು. ಬೆಳಗಲ್ಲು ವೀರಣ್ಣನವರು ಕೇವಲ ರಾಷ್ಟೊದಲ್ಲದೇ ವಿದೇಶಗಳಲ್ಲಿಯೂ ಕೂಡಾ ಹಲವಾರು ಪ್ರದರ್ಶನಗಳನ್ನು ನೀಡಿ ಹೆಸರುವಾಸಿಯಾಗಿದ್ದಾರೆ ಎಂದರು. ಇಂತಹ ಮಹಾನ್ ವ್ಯಕ್ತಿಯ ನಿಧನದಿಂದ ಬಳ್ಳಾರಿಗೆ ಆಘಾತ ಉಂಟಾಗಿದೆ ಎಂದು ನೋವನ್ನು ತೋಡಿಕೊಂಡು. ಈ ಸಂದರ್ಭದಲ್ಲಿ ಬೆಳಗಲ್ಲು ವೀರಣ್ಣನವರೊಂದಿಗಿನ ತಮ್ಮ ಹಲವಾರು ಮೆಲಕುಗಳನ್ನು ನೆನೆಸಿಕೊಂಡರು. ಈ ಹಿಂದಿ ತಾವು ಕರ್ನಾಟಕ ಜನಸೈನ್ಯದ ವತಿಯಿಂದ ಹಮ್ಮಿಕೊಂಡ ಹಲವಾರು ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಿ ಬೆನ್ನು ತಟ್ಟುತ್ತಾ, ಹಲವಾರು ಮಾರ್ಗದರ್ಶನ ನೀಡುತ್ತಾ ಬರುತ್ತಿದ್ದರು ಎಂದು. ಅವರೊಂದಿಗೆ ತಾವು ಸ್ವಾತಂತ್ರದ ಅಮೃತ ಮಹೋತ್ಸವದ ಭಾಗವಹಿಸಿದ್ದನ್ನು ಹೆಮ್ಮೆಯ ಸಂಗತಿ ಎಂದರು. ರಫೀಕ್, ಅಮಿತ್, ಫಯಾಜ್ ಭಾಷ, ಮುಷರತ್, ಹಸೇನ್, ಸುಹೇಲ್, ನಾಸಿರ್, ಆಯುಬ್, ಇಲಿಯಾಜ್, ಮಹಮ್ಮದ ಅಲಿ, ನಬಿ, ಹನುಮಂತು ಸೇರಿದಂತೆ ಆಮ್ ಆದ್ಮಿ ಪಕ್ಷದ ಸರ್ವ ಸದಸ್ಯರು ಉಪಸ್ಥಿತರಿದ್ದರು.