ವ್ಯಕ್ತಿಯ ಸಾಧನೆ ಹಿಂದೆ ಗುರುವಿನ ಆಶೀರ್ವಾದವಿರುತ್ತದೆ: ಮಾಮನಿ
ಲೋಕದರ್ಶನ ವರದಿ
ಸವದತ್ತಿ 05: ಸಮಾಜದಲ್ಲಿ ಒಬ್ಬ ವ್ಯಕ್ತಿ ಉತ್ತುಂಗಕ್ಕೆ ಬೆಳೆಯುತ್ತಿದ್ದಾನೆ ಎಂದರೆ ಆ ವ್ಯಕ್ತಿಯ ಹಿಂದೆ ಒಬ್ಬ ಗುರುವಿನ ಪ್ರೋತ್ಸಾಹ ಮತ್ತು ಆಶೀರ್ವಾದ ಪ್ರಮುಖವಾಗಿರುತ್ತದೆ ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.
ಸ್ಥಳೀಯ ಮಾಮನಿ ಕಲ್ಯಾಣ ಮಂಟಪದಲ್ಲಿ ಜರುಗಿದ ಜಿ.ಪಂ.ಬೆಳಗಾವಿ, ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ ಮತ್ತು ತಾಲೂಕಾ ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಪ್ರತಿಭಾ ಕಾರಂಜಿ, ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗುರುವಿನ ಮಾರ್ಗದರ್ಶನ ಮತ್ತು ಆಶ್ರಯದಲ್ಲಿ ಬೆಳೆದ ನಾವೆಲ್ಲರೂ ಇಂದು ಶಿಕ್ಷಕ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕಿದೆ ಎಂದರು. ಸಾಮಾಜಿಕ ವ್ಯವಸ್ಥೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಶಿಕ್ಷಕಕರ ಪಾತ್ರ ಬಹುಮುಖ್ಯವಾಗಿದ್ದು, ಶಿಕ್ಷಕರ ಮಾರ್ಗದರ್ಶನವಿಲ್ಲದೆ ಯಾವುದೆ ವ್ಯಕ್ತಿಗೆ ಉನ್ನತ ಹುದ್ದೆ ದೊರಕಲು ಸಾಧ್ಯವಿಲ್ಲ ಎಂದರು. ಅದೇ ಒಬ್ಬ ಶಿಕ್ಷಕ ದಕ್ಷ ರಾಜಕಾರಣಿಯಾಗಿ ಉತ್ತಮವಾದ ಆಡಳಿತ ನಡೆಸಲು ಸಾಧ್ಯ ಎಂದರು. ಶಿಕ್ಷಕರು ತಮ್ಮ ನಿವೃತ್ತಿಯ ನಂತರವೂ ಮಾರ್ಗದರ್ಶನ ನೀಡುವ ಪ್ರವೃತ್ತಿಯನ್ನು ರೂಢಿಸಿಕೊಳ್ಳಬೇಕೆಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರೀಕಟ್ಟಿ ಪ್ರಾಸ್ಥಾವಿಕವಾಗಿ ಮಾತನಾಡಿ ಶಿಕ್ಷಕರು ಪವಿತ್ರವಾಗಿರುವ ಗುರುವಿನ ಸ್ಥಾನಕ್ಕೆ ಚ್ಯುತಿ ಬರದಂತೆ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಿ ಅವರ ಭವಿಷ್ಯವನ್ನು ಉಜ್ವಲಗೊಳಿಸಬೇಕೆಂದರು.
ತಾ.ಪಂ ಇಓ ಯಶವಂತಕುಮಾರ ಮಾತನಾಡಿ ಸರಕಾರಗಳು ಗ್ರಾಮಗಳ ಅಭಿವೃದ್ದಿಗೆ ಹೆಚ್ಚಿನ ಅನುದಾನವನ್ನು ಗ್ರಾಂ.ಪಂಗಳಿಗೆ ನೀಡುತ್ತಿರುವದರಿಂದ ಹೆಚ್ಚಿನ ಸಂಖ್ಯೆಯಲ್ಲಿನ ಗ್ರಾಮಗಳು ಅಭಿವೃದ್ದಿಯನ್ನು ಕಾಣುತ್ತಿವೆ ಎಂದರು.
ಮೂಲಿಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿದ್ದರು.
ನಿವೃತ್ತ ಶಿಕ್ಷಕರಾದ ವಾಯ್.ಎಮ್.ಶಿಂಧೆ, ಎಮ್.ಬಿ.ಬಿರಾದಾರಗೌಡರ, ಎಮ್.ಸಿ.ಬಡಿಗೇರ, ವಿ.ಆರ್.ಲೋಹಾರ, ಡಿ.ಎಫ್.ಜಾಬನ್ನವರ, ಎಸ್.ಜೆ.ಲಮಾಣಿ, ಎಸ್.ಎ.ಖಾಜಿ, ಎಸ್.ಎಸ್.ಲಿಂಗನಗೌಡರ, ಎಸ್.ಡಿ.ಬಸ್ಸಾಪೂರಿ, ಎಸ್.ಬಿ.ಹೆಬ್ಬಳ್ಳಿ, ಬಸಪ್ಪ ವೀರ್ಪ ಪಂಪನವರ, ಮಲ್ಲಿಕಾರ್ಜುನ ಮಲಗೌಡರ, ಶ್ರೀಕಾಂತ ವಿಜಾಪೂರ, ರವೀಂದ್ರ ಇತಾಪ, ಬಸನಗೌಡ ಪಾಟೀಲ, ಗುರುಪಾದಪ್ಪ ಯರಗಟ್ಟಿ, ಆರ್.ಎಸ್.ಗದಗ, ಬಸವರಾಜ ಗುರನಗೌಡ್ರ, ನೂರುದ್ದೀನ್ ಮೊಖಾಶಿ, ಶಿದ್ರಾಮಪ್ಪ ಜಗುನ್ನವರ ಇವರನ್ನು ಸನ್ಮಾನಿಸಲಾಯಿತು.
ಪುರಸಭೆ ಉಪಾಧ್ಯಕ್ಷ ದೀಪಕ ಜಾನ್ವೇಕರ, ಯಲ್ಲಮ್ಮಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ, ಜಗದೀಶ ಶಿಂತ್ರಿ, ಬಸವರಾಜ ಕಾರದಗಿ, ಐ.ಪಿ.ಪಾಟೀಲ, ಬಾಬು ಕಾಳೆ, ಅರ್ಜುನ ಅಮ್ಮೋಜಿ, ಡಾ.ಮಹೇಶ ಚಿತ್ತರಗಿ, ಸಿಡಿಪಿಓ ಕಾಂಚನಾ ಅಮಠೆ, ನೌಕರರ ಸಂಘದ ಅಧ್ಯಕ್ಷ ಆನಂದ ಮೂಗಬಸವ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನಮಂತ ಪೆಟ್ಲೂರ, ನಿಕಟಪೂರ್ವ ಅಧ್ಯಕ್ಷ ಸುರೇಶ ಬೆಳವಡಿ ಹಾಗೂ ಪುರಸಭೆ ಸದಸ್ಯರು ಉಪಸ್ಥಿತರಿದ್ದರು.
ಎಮ.ಪಿ.ಪಾಟೀಲ ನಿರೂಪಿಸಿದರು. ಎಮ್.ಡಿ.ಹುದ್ದಾರ ವಂದಿಸಿದರು.