ಶಿಗ್ಗಾವ್

ಕರಡಿ ದಾಳಿಗೆ ಗಂಭೀರ ಗಾಯ: ಶಾಸಕ ಅಜ್ಜಂಪಿರ್ ಖಾದ್ರಿ ಸಾಂತ್ವಾನ

ಕರಡಿ ದಾಳಿಗೆ ಗಂಭೀರ ಗಾಯ: ಶಾಸಕ ಅಜ್ಜಂಪಿರ್ ಖಾದ್ರಿ ಸಾಂತ್ವಾನ

ಶಿಗ್ಗಾವಿ 03:  ತಾಲೂಕಿನ ಬಸವನಕಟ್ಟಿಯಲ್ಲಿ ಕರಡಿ ದಾಳಿಗೆ ಒಳಗಾಗಿ ಗಂಭೀರ ಗಾಯಗಳಿಂದ ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗ್ರಾಮದ ಬಶೀರ್ ಸಾಬ್ ಹಾಗೂ ರಜಾಕ್‌ಸಾಬ್ ಗಾಯಾಳುಗಳಿಗೆ ಬೇಟಿ ನೀಡಿ ಆತ್ಮ ಸ್ತೈರ್ಯ ತುಂಬಿ ಮಾಜಿ ಶಾಸಕ ಅಜ್ಜಂಪಿರ್ ಖಾದ್ರಿ ಸಾಂತ್ವಾನ  ಹೇಳಿದರು.  

ನಂತರ ತಾಲೂಕಿನ ದುಂಡಸಿ ಅರಣ್ಯ ವಲಯ ಅಧಿಕಾರಿಗಳಿಗೆ ದೂರುವಾಣಿ ಮೂಲಕ  ಮಾತನಾಡಿ ಗಾಯಾಳುಗಳಿಗೆ ತಕ್ಷಣ ಸರಕಾರದಿಂದ ಬರುವ ಪರಿಹಾರವನ್ನು ಘೋಷಣೆ ಮಾಡಬೇಕು ಎಂದು ಒತ್ತಾಯ ಮಾಡಿದರು. ಅರಣ್ಯ ವಲಯ ಅಧಿಕಾರಿಗಳು ಸ್ಪಂದಿಸಿ ತಕ್ಷಣ ಪರಿಹಾರ ಘೋಷಣೆ ಮಾಡುತ್ತೇವೆ ಎಂದು ಭರವಸೆ ನೀಡಿದರು. 

ಈ ಸಂದರ್ಭದಲ್ಲಿ ಹೊಸೂರ್ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಅಣ್ಣಪ್ಪ  ಲಮಾಣಿ, ಮುಕ್ತಾರ್ ಹುರುಳಿಕೊಪ್ಪಿ, ಅಕ್ಷಯ ಲಮಾಣಿ, ಬಿರೇಶ್  ಜಟ್ಟೆಪ್ಪನವರ್, ಡಿ ಎಂ ಹುಬ್ಬಳ್ಳಿ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ