ಮುಗಳಿ ಗ್ರಾಮದಲ್ಲಿ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ
ಚಿಕ್ಕೋಡಿ: ಬಸವಣ್ಣವರ ತತ್ವಗಳನ್ನು ಇಂದಿನ ಯುವಕರಿಗೆ ತಿಳಿಸುವ ಕಾರ್ಯ ಮಾಡಬೇಕಾಗಿದೆ. ನಾವೆಲ್ಲಾ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾ ಶಿವ ಶರಣ ಬಸವಣ್ಣವರಿಗೆ ನಿಜವಾದ ಗೌರವ ಸಮರ್ಪಣೆ ಮಾಡಿದಂತಾಗುತ್ತದೆ ಎಂದು ಬಸವಬೆಳವಿ ಚರಂತೇಶ್ವರ ಮಠದ ಶರಣ ಬಸವ ದೇವರು ಹೇಳಿದರು.ತಾಲೂಕಿನ ಮುಗಳಿ ಗ್ರಾಮದಲ್ಲಿ ಗುರುವಾರ ಶಿವರಾತ್ರಿ ನಿಮಿತ್ಯವಾಗಿ ಸರ್ಕಲನಲ್ಲಿ ಬಸವಣ್ಣವರ ಮೂರ್ತಿ ಪ್ರತಿಷ್ಠಾಪನೆ ಮಾಡಿ ಮಾತನಾಡಿದ ಅವರು, ಮುಗಳಿ ಗ್ರಾಮದಲಿ ಹಾಲಿನ ಹೊಳೆ ಹರಿದಂತೆ ಭಕ್ತಿ ಹೊಳೆ ಹರಿಯಲ್ಲಿದೆ ಎಂದರು. ರಾಜಕೀಯ ಮುತ್ಸದಿ ಮಹಾವೀರ ಮೋಹಿತೆ ಅವರು ಬಸವಣ್ಣವರ ಮೂರ್ತಿ ಪ್ರತಿಷ್ಠಾಪನೆಗೆ 1 ಲಕ್ಷ ರೂಗಳ ಹಣ ನೀಡಿರುವದು ಹೇಮ್ಮೆ ಸಂಗತಿ ಎಂದರು.ಮುಂಬರುವ ಯುಗಾದಿಗೆ ಬಸವಣ್ಣವರ ಮೂರ್ತಿ ಅನಾವರಣ ಕಾರ್ಯಕ್ರಮ ಹಮ್ಮಿಕೊಂಡು ಗ್ರಾಮದಲ್ಲಿ ಪ್ರವಚನ ನಡೆಸಲಾಗುವದು. ಈ ಕಾರ್ಯಕ್ರಮದಲ್ಲಿ ನಾಡಿಸ ಹೆಸರಾಂತ ಶರಣರು ಹಾಗೂ ವಿಧ್ವಾಂಸವರು ಭಾಗವಹಿಸಲಿದ್ದಾರೆ ಎಂದರು. ಕೊರೊನಾದಿಂದ ಒಬ್ಬರು ಒಬ್ಬರಿಗೆ ಮುಖ ನೋಡದಂತಹ ಪರಸ್ಥಿತಿ ಎದುರಾಗಿತ್ತು. ಕೆಟ್ಟ ರೋಗಗಳು ಸುಟ್ಟು ಹೋಗಿ ಉತ್ತಮವಾದ ದಿನಗಳು ಬರಲಿ ಎಂದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಕೆಆರ್ಡಿಸಿಎಲ್ ಮಾಜಿ ಉಪಾಧ್ಯಕ್ಷ ಮಹಾವೀರ ಮೋಹಿತೆ, ತಾ.ಪಂ ಸದಸ್ಯ ರಾಜು ಪಾಟೀಲ, ಗ್ರಾಮ ಪಂಚಾಯತ ಅಧ್ಯಕ್ಷ ರಮೇಶ ಪಾಟೀಲ,ಬಾಬಾಜಿ ಪಾಟೀಲ,ಈರಭದ್ರಯ್ಯ ಗೋಟುರೆ, ಬಿ.ಕೆ.ಪಾಟೀಲ, ತಮ್ಮಣ್ಣ ಬಂಬಲವಾಡೆ,ಸುಭಾಷ ಬಂಬಲವಾಡೆ, ಅಜೀತ ಪಾಟೀಲ,ಪ್ರಲ್ಹಾದ ದೇಶಪಾಂಡೆ, ಶೇಖರ ಬಂಬಲವಾಡೆ, ಲಗಮಣ್ಣ ಹಂಚಿನಾಳೆ, ಕುಮಾರ ಭೂಪಾಲ ಕವಳಿಕಟ್ಟಿ,ಭೀಮರಾವ ಶಿವಮೂರ್ತಿ ಕಾಂಬಳೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.