ಶಿಗ್ಗಾವ್

ಜನ್ಮಕಿಂತ ಮೊದಲು ಇರುವ ಸಂಬಂಧ ತಾಯಿ ಸಂಬಂಧ: ಸಚಿವ ಬಸವರಾಜ

ಜನ್ಮಕಿಂತ ಮೊದಲು ಇರುವ ಸಂಬಂಧ ತಾಯಿ ಸಂಬಂಧ: ಸಚಿವ ಬಸವರಾಜ

ಶಿಗ್ಗಾವಿ 13: ಒಂದು ಹೆಣ್ಣು ಯಶಸ್ವಿಯಾದ ಗಂಡಿನ ಹಿಂದೆ ಇರುತ್ತಾಳೆಯೋ ಹಾಗೂ ಯಶಸ್ವಿಯಾದ ಹೆಣ್ಣಿನ ಹಿಂದೆ ಗಂಡನಿರಬೇಕು 'ಸ್ರ್ತೀ ಪುರುಷರಲ್ಲಿ ಸಮಾನತೆ ಮೂಡಿದಾಗ ಮಾತ್ರ ಬದುಕು ಗಟ್ಟಿಗೊಳ್ಳಲು ಸಾಧ್ಯ. ಹೆಣ್ಣು ಮಕ್ಕಳು ಪುರುಷರಿಗೆ ಸಮಾನವಾಗಿ ದುಡಿಯುವ ಸಾಮರ್ಥ್ಯ ಹೊಂದಿದ್ದಾರೆ' ಅವಳನ್ನು ಶಿಕ್ಷಣದಿಂದ ವಂಚಿತಳಾಗದೆ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ಪ್ರತಿಯೊಬ್ಬರು ನೀಡಬೇಕು ಎಂದು ರಂಗಕರ್ಮಿ ಬಿ.ಜಯಶ್ರೀ ಅಭಿಪ್ರಾಯಪಟ್ಟರು.

ತಾಲೂಕಿನ ಶಿಶುವಿನಾಳದ ಗುರುಗೋವಿಂದ ಭಟ್ಟ ಹಾಗೂ ಸಂತ ಶರೀಫ ವೇದಿಕೆಯಲ್ಲಿ ಹುಬ್ಬಳ್ಳಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್ ವತಿಯಿಂದ  ನಡೆದ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ಹೆಣ್ಣು ಮಕ್ಕಳಿಗೆ ಓದಿಸಲು ಹಿಂದೆ-ಮುಂದೆ ನೋಡುವ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಬೇಕು. ಹೆಣ್ಣು ಎಷ್ಟೇ ಓದಿದರು ಅವರಲ್ಲಿನ ತಾಯ್ತನ ಕಡಿಮೆಯಾಗಲಾರದು ಎಂಬುವುದನ್ನು ಮರೆಯಬಾರದು' ಎಂದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಜ್ಯೋತಿಯನ್ನು ಬೆಳಗಿಸಿ ಮಾತನಾಡಿ ಜನ್ಮಕಿಂತ ಮೊದಲು ಇರುವ ಸಂಬಂದ ಕೇವಲ ತಾಯಿ ಸಂಭಂದÀವಾಗಿದೆ ಇವೆಲ್ಲ ಸಂಭಂಧವು ಜನ್ಮದ ನಂತರದ ಸಂಭಂದವಾಗಿದೆ, ನಾವು ಭೂಮಿಗೆ ಬರುವದಕ್ಕಿಂತ ಮೊದಲಿನ ಸಂಭಂದ ತಾಯಿಯ ಸಂಬಂದವಾಗಿದೆ, ಪ್ರತಿಯೊಬ್ಬ ಮನುಷ್ಯನಲ್ಲಿಯೂ ಕೂಡಾ ತಾಯ್ತನವಿರುತ್ತದೆ ಎಂದು ಭಾವಿಸುತ್ತೆನೆ, ನಮ್ಮ ಜೊತೆಗೆ ಹಲವು ಗುಣಧರ್ಮಗಳು ಬಂದಿರುತ್ತವೆ ಅದನ್ನು ಆತ್ಮಲೋಕನ ಮಾಡುವದು ನಮ್ಮಲ್ಲಿಲ್ಲಾ 'ತಾಯಿ ನೋವನ್ನು ಸಹಿಸಿಕೊಂಡು ಮಕ್ಕಳಿಗಾಗಿ ಮಾಡುವ ಸೇವೆ ನಿಜಕ್ಕೂ ಶ್ರೇಷ್ಠವಾಗಿದೆ' ಎಂದರು.

ಎಚ್.ಆರ್. ಸುಜಾತಾ ಅವರ 'ನೀಲಿ ಮೂಗಿನ ನತ್ತು' ಕೃತಿಗೆ ಅಕ್ಕ ಪ್ರಶಸ್ತಿ, ಸನ್ನಿಧಿ ಟಿ.ರೈ ಪೆರ್ಲ ಅವರ 'ಅಮರಾವತಿ' ಕೃತಿಗೆ ಅರಳುಮೊಗ್ಗು ಪ್ರಶಸ್ತಿ ಹಾಗೂ ಡಾ.ಕೆ. ಶಶಿಕಾಂತ ಅವರ 'ಅವ್ವ ಹಾಡಿದ ಕಾಳಿಂಗರಾಯನ ಹಾಡು' ಕೃತಿಗೆ ಜಾನಪದ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಲೇಖಕ ಚಂದ್ರಶೇಖರ ವಸ್ತ್ರದ ಸಂಪಾದಿಸಿದ 'ನಾಟಕಗಳಲ್ಲಿ ಅವ್ವ' ಕೃತಿಯನ್ನು ಸಾಹಿತಿ ಡಾ.ವೀರಣ್ಣ ರಾಜೂರ ಬಿಡುಗಡೆ ಮಾಡಿ ಮಾತನಾಡಿದರು.

ಈ ಸಂದರ್ಭದಲ್ಲಿ ಚನ್ನಮ್ಮ ಬಸವರಾಜ ಬೊಮ್ಮಾಯಿ, ಸಂಸದ ಶಿವಕುಮಾರ ಉದಾಸಿ, ಮಾಜಿ ಸಂಸದ ಐ.ಜಿ. ಸನದಿ, ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಮನು ಬಳಿಗಾರ, ಚನ್ನಮ್ಮ ಬೊಮ್ಮಾಯಿ ಇದ್ದರು. 

ಪ್ರಾಸ್ತಾವಿಕವಾಗಿ ಚಂದ್ರಶೇಖರ ವಸ್ತ್ರದ ಪ್ರಾಸ್ಥಾವಿಕವಾಗಿ ಮಾತನಾಡಿದರು. ಸಾಹಿತಿ ಶಿವಾನಂದ ಮ್ಯಾಗೇರಿ ಕಾರ್ಯಕ್ರಮವನ್ನು ನಿರೂಪಿಸಿದರು.

ಸುದ್ದಿ ಓದಿ