ಗ್ರಾಪಂ ಅಧ್ಯಕ್ಷರಾಗಿ ಬಸವನಗೌಡ ಅವಿರೋಧವಾಗಿ ಆಯ್ಕೆ
ಸಿರುಗುಪ್ಪ 29: ತಾಲ್ಲೂ ಮಣ್ಣೂರು ಸೂಗೂರು ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ಬಸವನಗೌಡ ಅವಿರೋಧವಾಗಿ ಆಯ್ಕೆ ಎಂದು ತಾಲ್ಲೂಕು ಪಂಚಾಯತ್ ಕಾರ್ಯನಿವರ್ಾಹಕ ಅಧಿಕಾರಿ ಹಾಗೂ ಚುನಾವಣಾಧಿಕಾರಿ ಮಡಗಿನ ಬಸಪ್ಪ ಘೋಷಿಸಿದರು.
ಗ್ರಾಪಂಚಾಯತ್ ಸರ್ವ ಸದಸ್ಯರ ಹಾಗೂ ಅಧಿಕಾರಿಗಳ ಸಹಕಾರದೊಂದಿಗೆ ಶ್ರಮಿಸಿ ಮತ್ತು ಸಾರ್ವಜನಿಕರ ಮೂಲ ಸೌಕರ್ಯ ಒದಗಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಬೇಕೆಂದು ಕರೆ ಕೊಟ್ಟರು ಪಿಡಿಒ ಗ್ರಾಮ ಪಂಚಾಯತ್ ಅಭಿವದ್ಧಿ ಅಧಿಕಾರಿ ಎಂ ವೀರನಗೌಡ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ನೀಲಮ್ಮ, ಸದಸ್ಯರಾದ ಕೊರವರ ಗಾದಿಲಿಂಗಪ್ಪ, ಮಲ್ಲಿಕಾಜರ್ುನ, ನಾಗಪ್ಪ, ಹುಲೆಪ್ಪ, ಚನ್ನಮ್ಮ, ಮಂಜಮ್ಮ, ಲಕ್ಷ್ಮೀ, ತಿಪ್ಪಮ್ಮ, ಶಾರದಾ, ಶಿವಮ್ಮ, ಫಕೀರಮ್ಮ, ಪಾರ್ವತಿ, ಶಾಸಕರ ಪುತ್ರ ಎಂ ಎಸ್ ಸಿದ್ಧಪ್ಪ ನೂತನ ಅಧ್ಯಕ್ಷರಿಗೆ ಸನ್ಮಾನಿಸಿದರು. ಮುಖಂಡ ರವಿ ಭೂಷಣ, ಎಸ್ಎಂ ಬಸವಣ್ಣಯ್ಯ ಸ್ವಾಮಿ, ಪಕ್ಕೀರಪ್ಪ ದಳಪತಿ, ಎಸ್ ಎಲ್ ಪಂಪನಗೌಡ, ಸತ್ಯನಾರಾಯಣಬಾಬು (ಕೆ.ಬಾಬು), ಪಂಪನಗೌಡ, ಕೊಮಾರೆಪ್ಪ, ಮಂಜುನಾಥ, ಶ್ರೀನಿವಾಸ, ಮಾರೇಶ ಇತರರಿದ್ದರು ನೂತನ ಅಧ್ಯಕ್ಷ ಬಸನಗೌಡ ಅವರ ಯಶಸ್ಸಿಗೆ ದೊರೆತಿರುವ ಗೌರವಕ್ಕೆ ಬಳ್ಳಾರಿ ಜಿಲ್ಲಾ ಸಾಕ್ಷರತಾ ಕಾರ್ಯಕಾರಿ ಸಮಿತಿ ಸದಸ್ಯ ಜನಾಭಿಪ್ರಾಯ ಮುಖಂಡ ಎ ಅಬ್ದುಲ್ ನಬಿ ಅವರು ಅಭಿನಂದಿಸಿದ್ದಾರೆ.