ಸೌಂದತ್ತಿ

ಬಸವಾದಿ ಶರಣರ ದರ್ಶನ ನಾಟಕ ತರಬೇತಿ ಪ್ರದರ್ಶನ ಉದ್ಘಾಟನೆ

ಬಸವಾದಿ ಶರಣರ ದರ್ಶನ ನಾಟಕ ತರಬೇತಿ ಪ್ರದರ್ಶನ ಉದ್ಘಾಟನೆ

ಸವದತ್ತಿ: ಸಂಸ್ಕೃತದ ಗೀಳನ್ನು ಬದಿಗೊತ್ತಿ ಸಾಮಾನ್ಯರ ಭಾಷೆಯಲ್ಲಿ ಶರಣರು ವಚನ ಸಾಹಿತ್ಯ ರಚಿಸಿ ತಮ್ಮ ಅನುಭವ ಮತ್ತು ವಾಸ್ತವತೆಯನ್ನು ವಚನ ರೂಪದಲ್ಲಿ ರಚಿಸಿ ನವೀನ ಚಿಂತನೆಗಳ ಮೂಲಕ ಸಮಾಜದ ಹೊಸ ಕ್ರಾಂತಿಗೆ ಮುನ್ನುಡಿ ಬರೆದರು ಎಂದು ಉಪನ್ಯಾಸಕ ಎ.ಬಿ. ವಗ್ಗರ ಹೇಳಿದರು.

ಇಲ್ಲಿನ ರಂಗ ಆರಾಧನ ನಾಟಕ ಮನೆಯಲ್ಲಿ ಸಾಣೇಹಳ್ಳಿಯ ಶಿವಕುಮಾರ ಕಲಾಸಂಘ ಹಾಗೂ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯಿಂದ ಬಸವಾದಿ ಶರಣರ ದರ್ಶನ ನಾಟಕ ತರಬೇತಿ ಮತ್ತು ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸ್ತ್ರೀ ಅಸಮಾನತೆ ಮತ್ತು ಭಾವಚಿತ್ರ-ವಿಗ್ರಹ ಪೂಜೆಗಳನ್ನು ಅಂದಿನ ಕಾಲದಲ್ಲಿಯೇ ತಿರಸ್ಕರಿಸಿದ್ದರು. ಶಿವ ಸಂಚಾರ ಬೆಳ್ಳಿ ಹಬ್ಬದ ಪ್ರಯುಕ್ತ 31 ಜಿಲ್ಲೆಗಳಲ್ಲಿ ಸೆ. 15 ರಿಂದ ನ. 15 ರವರೆಗೆ ಶರಣರ ನಾಟಕ ತರಬೇತಿ ಮತ್ತು ಪ್ರದರ್ಶನ ನಡೆಯಲಿದೆ. ರಂಗ ಆರಾಧನ ಸಂಸ್ಥೆಯಿಂದ ನ. 17 ರಂದು ಬೆಳ್ಳುಬ್ಬಿ ಕಾಲೇಜಿನಲ್ಲಿ ಸಾವಿಂಗೆ ಸಂಗಡಂ ನಾಟಕ ಪ್ರದರ್ಶನವಾಗಲಿದೆ ಎಂದರು.

ವಕೀಲ ರಾಜಶೇಖರ ನಿಡವಣಿ ಮಾತನಾಡಿ, ಶರಣರ ವಚನಗಳಲ್ಲಿ ಸರಳತೆ, ಸ್ಪಷ್ಟತೆ ಹಾಗೂ ನೈಜತೆಯ ಅಂಶಗಳು ಅಡಗಿಕೊಂಡಿವೆ. ಶರಣರು ತಮ್ಮ ವಚನಗಳಿಂದ ಸಮಾಜದ ನ್ಯೂನ್ಯತೆಗಳ ವಿರುದ್ಧ ಹೋರಾಡಿದವರು. ಇದೀಗ ರಂಗ ಸಂಸ್ಥೆ ಅದೇ ವಚನ ಸಾಹಿತ್ಯವನ್ನಾಧರಿಸಿ ನಾಟಕಗಳ ಮೂಲಕ ಸಮಾಜ ಸಂಘಟಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ಈ ವೇಳೆ ನಾಗರಾಜ ಹೂಲಿ, ವಕೀಲ ಎಮ್.ಜಿ. ವಟ್ನಾಳ, ಶಿವಾನಂದ ತಾರಿಹಾಳ ಸೇರಿ ಸಂಘಟನಾಕಾರರು ಇದ್ದರು.

 

ಸುದ್ದಿ ಓದಿ