ನಾಗರ ಪಂಚಮಿ ಅಂಗವಾಗಿ ಬಸವ ಪಂಚಮಿ ಆಚರಣೆ
ಬಳ್ಳಾರಿ 21: ನಗರದ ಹತ್ತಿರವಿರುವ ಸಂಗನಕಲ್ಲು ಗ್ರಾಮದಲ್ಲಿ ಇಂದು ನಾಗರಪಂಚಮಿ ಅಂಗವಾಗಿ ಬಸವ ಪಂಚಮಿಯನ್ನು ಇಲ್ಲಿನ ಗ್ರಾಮದ ಜನರು ಸಂಭ್ರಮದಿಂದ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿ ಮಾತನಾಡುತ್ತಾ ಮಾನವ ಬಂಧುತ್ವದ ವೇದಿಕೆಯ ಜಿಲ್ಲಾ ಸಂಚಾಲಕರು ಸಂಗನಕಲ್ಲು ವಿಜಯಕುಮಾರ್ ಪ್ರಾಸ್ತಾವಿಕ ನುಡಿಗಳನ್ನು ಮಾತನಾಡಿದರು.
ಸಚಿವರು ಹಾಗೂ ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಸತೀಶ್ ಜಾರಕಿಹೊಳಿಯರವರು ಮತ್ತು ಮಾನವ ಬಂದುತ್ವ ವೇದಿಕೆಯ ರಾಜ್ಯ ಸಂಚಾಲಕರ ಸೂಚನೆಯ ಮೇರೆಗೆ ರಾಜ್ಯದ್ಯಂತ ಬಸವ ಪಂಚಮಿಯನ್ನು ಆಚರಿಸಲು ಸೂಚಿಸಿರುತ್ತಾರೆ.
ಅದರ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ನಿವೃತ್ತಿ ಪ್ರಾಧ್ಯಾಪಕರಾದ ಮೌಲ್ಯ ಮಾಪನ ಪರೀಕ್ಷಾ ನಿಯಂತ್ರಕರು ಸನ್ಮಾನ್ಯ ಬಿ.ಶ್ರೀನಿವಾಸ್ ಮೂರ್ತಿರವರು ಬುದ್ಧ ಬಸವ ಅಂಬೇಡ್ಕರ್ ಮತ್ತು ಸತೀಶ್ ಜಾರಕಿಹೊಳಿಯ ಹೋರಾಟ ದೂರದೃಷ್ಟಿಯ ಕಲ್ಪನೆಯ ಕುರಿತು ಮಾತನಾಡಿದರು.
ಇನ್ನೊಬ್ಬ ದಲಿತ ಸಂಘರ್ಷ ರಾಜ್ಯ ಸಮಿತಿಯ ಮುಖಂಡರು ಹೋರಾಟಗಾರರಾದ ಗಂಗಾಧರ ರವರು ಮೌಡ್ಯ ಮತ್ತು ವೈಜ್ಞಾನಿಕ ವಿಚಾರಗಳನ್ನು ಅಳವಡಿಸಿಕೊಂಡರೆ ನಾವುಗಳು ನೆಮ್ಮದಿಯ ಜೀವನ ಅನುಭವಿಸುವುದಕ್ಕೆ ಸಾಕಾರಗೊಳ್ಳುತ್ತದೆಂದು ಮಾತನಾಡಿದರು.ದೇವರಾಜ ಮತ್ತು ಹಿಂದುಳಿದ ವರ್ಗಗಳ ಚಿಂತಕರು ಈಶ್ವರ್ಪನವರು ಬಸವಣ್ಣನವರ ವಿಚಾರಧಾರೆಗಳನ್ನು ಅಳವಡಿಸಿಕೊಂಡರೆ ರಾಜ್ಯ ಮತ್ತು ದೇಶ ಶಾಂತಿ ಮತ್ತು ನೆಮ್ಮದಿಂದಿರಲು ಸಾಧ್ಯ ಹಾಗೂ ಸತೀಶ್ ಜಾರಕಿಹೊಳಿ ರವರು ವಿಚಾರ ಮತ್ತು ಸಿದ್ದಾಂತ ತುಂಬಾ ಅಪರೂಪದ ರಾಜಕಾರಣಿಯಾಗಿದ್ದಾರೆ.
ಜನಪರ,ಜನಹಿತಕ್ಕಾಗಿ ಶ್ರಮಿಸುವ ರಾಜಕಾರಣದಲ್ಲಿ ಇವರು ಒಬ್ಬರು ಎಂದು ಜಾರಕಿಹೊಳಿರವರ ಬಗ್ಗೆ ಅವರ ಗುಣಗಾನ ಮಾಡಿದರು.ಈ ಸಂದರ್ಭದಲ್ಲಿ ಊರಿನ ಮುಖಂಡರಾದ ಟಿ ಬಸವನಗೌಡರವರು ಕರಡಳ್ಳಿ ಶಂಕರ್ಪ ರವರು ಹಾಗೂ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ವಿಶ್ವನಾಥ ಗೌಡ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಹನುಮಂತ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸಣ್ಣ ಭೀಮಪ್ಪ, ಗ್ರಾಮ ಪಂಚಾಯತಿಯ ಹಾಲಿ ಅಧ್ಯಕ್ಷ ಪ್ರಮೀಳಾ ವೀರೇಶ್( ಪುನೀತ್) ಗ್ರಾಮ ಪಂಚಾಯತಿ ಸದಸ್ಯರಾದ ನಾಗಿರೆಡ್ಡಿ, ಜೋಗಿನಾ ವಿಜಯ್ ಕುಮಾರ್, ಆಂಜನೇಯಲು,ರಂಜಾನ್ ಬಾಷಾ, ಯು.ತಿಪ್ಪೇರುದ್ರ ಆಟೋ ಚಾಲಕರಾದ ಈಶ್ವರ್ ಕನೆಕಲ್ಲ, ಮಾನವ ಬಂದತ್ವ ವೇದಿಕೆ ತಾಲೂಕು ಸಂಚಾಲಕರು ಕಾರ್ಯಕರ್ತರು ಕಟ್ಟೆ ಬಸವಗೌಡ, ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಜಂಬನಗೌಡ .ಮಾಚರೆಡ್ಡಿ ಬಸವನಗೌಡ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಭೋವಿ ಸಮಾಜದ ಪರ್ವತಯ್ಯ, ಕರ್ಕಮುಕಲ ವೆಂಕಟೇಶ.ಯು.ಚೆನ್ನ ,ಚಲವಾದಿ ಮಲ್ಲಿಕಾರ್ಜುನ. ಹರಿಜನ ನೀಲಕಂಠಪ್ಪ.ಯು.ರಮೇಶ್ ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿ ನೌಕರ ವರ್ಗದ ಅನೇಕ ಗಣ್ಯಮಾನ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.