ಶಿಗ್ಗಾವ್

ಬಸವ ಪಂಚಮಿ ಆಚರಣೆ : ಮಕ್ಕಳಿಗೆ ಹಾಲು ಹಣ್ಣು ವಿತರಣೆ

ಬಸವ ಪಂಚಮಿ ಆಚರಣೆ : ಮಕ್ಕಳಿಗೆ ಹಾಲು ಹಣ್ಣು ವಿತರಣೆ

ಶಿಗ್ಗಾವಿ 08: ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಹಾಗಾಗಿ ನಾವು ನಮ್ಮ ಸಂಸ್ಕೃತಿಯಲ್ಲಿ ಬರುವ ಎಲ್ಲಾ ಮೌಢ್ಯಗಳನ್ನು ಕಿತ್ತೆಸೆಯಬೇಕಿದೆ ಎಂದು ಜನಪದ ಕಲಾವಿದ ಶರೀಫ ಮಾಕಪ್ಪನವರ ಹೇಳಿದರು. 

ತಾಲೂಕಿನ ಶ್ಯಾಡಂಬಿ ಗ್ರಾಮದಲ್ಲಿ ತಾಲೂಕ ಮಾನವ ಬಂದುತ್ವ ವೇದಿಕೆಯ ವತಿಯಿಂದ ನಡೆದ ಬಸವ ಪಂಚಮಿ ನಿಮಿತ್ತ ಬಡ ಮಕ್ಕಳಿಗೆ ಹಾಲು ಹಣ್ಣು ವಿತರಿಸಿ ಮಾತನಾಡಿದ ಅವರು  ಮಾನವ ಬಂಧುತ್ವ ವೇದಿಕೆಯು ನಾಗರಪಂಚಮಿ ಕಲ್ಲು ನಾಗರಕ್ಕೆ ಮತ್ತು ಮಣ್ಣಿನ ಹುತ್ತಗಳಿಗೆ  ಹಾಲನ್ನು ಎರೆಯುವ ಮೂಲಕ ಅಮೂಲ್ಯವಾದ ಹಾಲನ್ನು ವ್ಯರ್ಥಮಾಡುವ ಮಾನವನ ಮೂರ್ಖತನವನ್ನು ನಿವಾರಿಸಿ ಪಂಚಮಿ ಹಬ್ಬವನ್ನು ವೈಜ್ಞಾನಿಕ ಪ್ರತಿ ವರ್ಷ ಮಾನವ ಬಂದುತ್ವ ವೇದಿಕೆಯ ಜಿಲ್ಲಾ ಸಂಚಾಲಕರಾಗಿದ್ದ ದಿವಂಗತ ಪ್ರಕಾಶ ಹಾದಿಮನಿಯವರ ಜೊತೆ ಇಂತಹ ವೈಚಾರಿಕ ಕಾರ್ಯಕ್ರಮ ಮಾಡುತ್ತಿದ್ದೆವು ಆದರೆ ಈ ಭಾರಿ ಅವರು ನಮ್ಮ ಜೊತೆ ಇಲ್ಲದಿರುವುದು ಬೇಸರ ತರಿಸಿದೆ ಎಂದರು. 

ತಾಲೂಕು ಸಂಚಾಲಕ ವಿಶಾಲ ಮರಾಠೆ ಮಾತನಾಡಿ ನಾಗರ ಪಂಚಮಿ ಹಬ್ಬಕ್ಕೆ ವೈಜ್ಞಾನಿಕವಾದ ಮತ್ತು ತನ್ನದೆ ಆದ ಇತಿಹಾಸವಿದೆ ಮಳೆಗಾಲದಲ್ಲಿ ಬಿಟ್ಟುಬಿಡದ ಕೃಷಿ ಚಟುವಟಿಕೆಗಳಿಂದ ಹಳ್ಳಿಗಾಡಿನ ರೈತಾಪಿ ಜನರಿಗೆ ಸ್ವಲ್ಪ ಬಿಡುವಿನ ಕಾಲವಿದು. ಹೊಲಗಳನ್ನು ಉತ್ತು, ಬಿತ್ತು ದಣಿದ ದೇಹಕ್ಕೆ ಒಂದಷ್ಟು ವಿಶ್ರಾಂತಿ ಹಾಗು ಮನರಂಜನೆ ನೀಡುವ ಹಿನ್ನೆಲೆಯಲ್ಲಿ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ ಮಾನವ ಬಂಧುತ್ವ ವೇದಿಕೆಯು ಪ್ರತಿ ವರ್ಷ ಬಡ ಮಕ್ಕಳಿಗೆ ಹಾಲು ಹಣ್ಣು ವಿತರಿಸಿ ಹಾಲಿನ ಮಹತ್ವದ ಕುರಿತು ಜನರಲ್ಲಿ ಜಾಗ್ರತಿ ಮೂಡಿಸುತ್ತಾ ಬರುತ್ತಿದೆ ಎಂದರು. 

ಯುವ ಮುಖಂಡ ಮನೋಜ ಹಾದಿಮನಿ ಮಾತನಾಡಿ ನಾನು ನಮ್ಮ ಚಿಕ್ಕಪ್ಪನವರಾದ ದಿ.ಪ್ರಕಾಶ ಹಾದಿಮನಿ ಅವರ ಜೊತೆ ನಿರಂತರವಾಗಿ ಇರುತ್ತಿದೆ ಅವರ ಎಲ್ಲ ಸಾಮಾಜಿಕ ಧಾರ್ಮಿಕ ರಾಜಕೀಯ ಚಟುವಟಿಕೆಗಳನ್ನು ಬಹಳ ಹತ್ತಿರದಿಂದ ನೋಡುತ್ತ ಬಂದಿದ್ದೆನೆ ಪ್ರತಿ ವರ್ಷ ನಾಗರ ಪಂಚಮಿಯಂದು ಬಡ ಕೂಲಿ ಕಾರ್ಮಿಕರ ಮಕ್ಕಳಿಗೆ ಹಾಲು ಹಣ್ಣು ವಿತರಿಸಿ ಇಂದು ನಮ್ಮ ಜೊತೆ ಇಲ್ಲದಿರುವುದು ಬೇಸರ ತರಿಸಿದೆ ಎಂದರು. 

ಈ ಸಂದರ್ಭದಲ್ಲಿ ಮಾನವ ಬಂದತ್ವ ವೇದಿಕೆಯ ಸುನೀಲ ಬಂಡಿವಡ್ಡರ, ಅರುಣ ಕಮ್ಮಾರ, ಸುಜಯ ಗೊನೆಪ್ಪನವರ, ಅನಿಲ ಬಾಳಿಕಾಯಿ, ಮನೋಜ ಪಾಟೀಲ, ಚಮನ ನದಾಫ, ಅಭಿಷೇಕ ಹೂಗಾರ ,ಸಾದಿಕ ಭಾಗವಾನ ಗ್ರಾಮಸ್ಥರಾದ ನೀಲಪ್ಪ ಮಾಕಪ್ಪನವರ ಸರಸ್ವತಿ ಓಲೇಕಾರ ಹಾಗೂ ಇತರರು ಇದ್ದರು. 


ಸುದ್ದಿ ಓದಿ