ಹೊಸಪೇಟೆ

ಉದ್ಯಾನವನಕ್ಕೆ ಕಂಬಿಯ ಚೌಕಟ್ ಇಲ್ಲದ ತಡೆಗೋಡೆ

ಉದ್ಯಾನವನಕ್ಕೆ ಕಂಬಿಯ ಚೌಕಟ್ ಇಲ್ಲದ ತಡೆಗೋಡೆ

ಹೊಸಪೇಟೆ,20: 24ನೇ ವಾರ್ಡ್‌, ಬಳ್ಳಾರಿ ರಸ್ತೆ, ಕೃಷ್ಣಾನಗರದ ಗಾಯಿತ್ರಿ ದೇವಸ್ಥಾನದ ಪಕ್ಕ ಉದ್ಯಾನವನಕ್ಕೆ ಅನುದಾನ ನಗರಾಭಿವೃದ್ಧಿ ಇಲಾಖೆಯಿಂದ ಬಿಡುಗಡೆಯಾಗಿ ಈಗ ಅಭಿವೃದ್ಧಿಗೊಳಿಸುತ್ತಿದ್ದಾರೆ.  ಆದರೆ ಉದ್ಯಾನವನದ ತಡೆಗೋಡೆಯ ವಿನ್ಯಾಸ ಹೊರತುಪಡಿಸಿ ಕಂಬಿಯ ಚೌಕಟ್ GRILL  ಇಲ್ಲದ ತಡೆಗೋಡೆ ನಿರ್ಮಿಸಿದ್ದಾರೆ.  ನಾವುಗಳು ಅಂದರೆ ಇಲ್ಲಿಯ ನಿವಾಸಿಗಳು ಇದರ ಬಗ್ಗೆ ವಿಚಾರಿಸಿದಾಗ ಗುತ್ತಿಗೆದಾರರು ನಗರಾಭಿವೃದ್ಧಿ ಇಲಾಖೆಯಿಂದ ಇದೆ ರೀತಿ ಅಂದರೆ ಕಂಬಿಯ ಚೌಕಟ್ GRILL  ಇಲ್ಲದೆ ಇಟ್ಟಿಗೆಯಿಂದ ನಿರ್ಮಿಸಲು ಯೋಜನೆ PLAN ಕೊಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ.   

ಹೊಸಪೇಟೆ ನಗರದಲ್ಲಿ ಬಹುತೇಕ ನಗರಾಬಿವೃದ್ಧಿ ಇಲಾಖೆಯಿಂದ ನಿರ್ಮಿತವಾದ ಉದ್ಯಾನವನದ ತಡೆಗೋಡೆಗಳು GRILL ಕಂಬಿಯ ಚೌಕಟ್ಟುನಿಂದ ಕೂಡಿರುತ್ತದೆ.  ಆದರೆ ನಮ್ಮ ಉದ್ಯಾನವನದ ತಡೆಗೋಡೆಯು ಇಟ್ಟಿಗೆ BRICKS ನಿಂದ ಕೂಡಿದೆ.  

ನಂತರ ನಾವುಗಳು ರಸ್ತೆ ಪಕ್ಕದ ತಡೆಗೋಡೆಯನ್ನಾದರೂ  GRILL ನಿಂದ ಕೂಡಿದ ತಡೆಗೋಡೆ ನಿರ್ಮಿಸಲು ವಿನಂತಿಸುತ್ತಿದ್ದೇವೆ.  ಅದಕ್ಕೂ ಅವರು ಸಮ್ಮತಿ ಮಾಡುತ್ತಿಲ್ಲ.  ದಯಮಾಡಿ ತಾವುಗಳು ಗುತ್ತಿಗೆದಾರರಿಗೆ ಕನಿಷ್ಠ ರಸ್ತೆ ಪಕ್ಕದಲ್ಲಿಯಾದರೂ ಕಂಬಿಯ ಚೌಕಟ್ GRILL ನಿಂದ ಕೂಡಿದ ತಡೆಗೋಡೆ ನಿರ್ಮಿಸಲು ಅವರಿಗೆ ತಿಳಿಸಲು ತಮ್ಮಲ್ಲಿ ವಿನಂತಿಸುತ್ತೇವೆ. 


ಸುದ್ದಿ ಓದಿ