ಚಿಕ್ಕೋಡಿ

ಬ್ಯಾಂಕಿನ ಲಾಭಗಳನ್ನು ಗ್ರಾಹಕರು ಸಮರ್ಪಕವಾಗಿ ಪಡೆದುಕೊಳ್ಳಬೇಕು: ಗಾಯತ್ರಿ ಆರ್

ಬ್ಯಾಂಕಿನ ಲಾಭಗಳನ್ನು ಗ್ರಾಹಕರು ಸಮರ್ಪಕವಾಗಿ ಪಡೆದುಕೊಳ್ಳಬೇಕು: ಗಾಯತ್ರಿ ಆರ್

ಚಿಕ್ಕೋಡಿ 29: ಗ್ರಾಮೀಣ ಪ್ರದೇಶದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ಕ್ರಾಂತಿ ಮಾಡುತ್ತಿದ್ದು, ಗ್ರಾಹಕರ ವಿಶ್ವಾಸದ ಅನುಗುಣವಾಗಿ ಬ್ಯಾಂಕುಗಳು ಸೇವೆ ಸಲ್ಲಿಸುತ್ತಿದ್ದು, ಬ್ಯಾಂಕಿನ ಲಾಭಗಳನ್ನು ಗ್ರಾಹಕರು ಸಮರ​‍್ಕವಾಗಿ ಪಡೆದುಕೊಳ್ಳಬೇಕು ಎಂದು ಬ್ಯಾಂಕ್ ಆಫ್ ಬರೋಡಾದ ಮಂಗಳೂರು ವಲಯದ ಮುಖ್ಯಸ್ಥೆ ಗಾಯತ್ರಿ ಆರ್ ಹೇಳಿದರು.  

ನಗರದ ಡಾ, ಪ್ರಭಾಕರ ಕೋರೆ ನಗರದಲ್ಲಿ ಹೊಸದಾಗಿ ಸ್ಥಳಾಂತರಗೊಂಡ ಬ್ಯಾಂಕ್ ಆಫ್ ಬರೋಡಾದ ಚಿಕ್ಕೋಡಿ ಶಾಖೆಯ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಇಷ್ಟು ದಿನಗಳ ಕಾಲ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕೇಂದ್ರೀಕತವಾಗಿರುವ ರಾಷ್ಟ್ರೀಕೃತ ಬ್ಯಾಂಕುಗಳು ಪ್ರದಾನ ಮಂತ್ರಿ ನರೇಂದ್ರ ಮೋದಿ ಅವರ ಆಲೋಚನೆಯಿಂದ ಗ್ರಾಮೀಣ ಭಾಗದ ಜನರಿಗೆ ತಮ್ಮ ಸೇವೆಯನ್ನು ಬ್ಯಾಂಕುಗಳು ಒದಗಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ"ಎಂದರು.  

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಸಹಕಾರಿ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಜಗದೀಶ ಕವಟಗಿಮಠ ಅವರು ಮಾತನಾಡಿ, ಗ್ರಾಹಕರೇ ಬ್ಯಾಂಕುಗಳಿಗೆ ಆಧಾರವಾಗಿದ್ದು, ಗ್ರಾಹಕರಿಗೆ ಬ್ಯಾಂಕುಗಳು ಉತ್ತಮ ಸೇವೆಯನ್ನು ನೀಡುವುದರೊಂದಿಗೆ ಗ್ರಾಹಕ ಸ್ನೇಹಿಯಾಗಬೇಕು. ಇದೀಗ ತಂತ್ರಜ್ಞಾನ ಬ್ಯಾಂಕಿಂಗ್ ನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಿಬ್ಬಂದಿ ರಹಿತವಾಗಿ ಬ್ಯಾಂಕ್‌ಗಳು ಗ್ರಾಹಕರಿಗೆ ಸೇವೆಯನ್ನು ಒದಗಿಸುವ ಕಾಲ ದೂರವಿಲ್ಲ ಎಂದರು. 

ಕಾರ್ಯಕ್ರಮದ ಸಾನಿಧ್ಯವನ್ನು ಚರಮೂರ್ತಿಮಠದ ಸಂಪಾದನ ಸ್ವಾಮೀಜಿ ವಹಿಸಿದ್ದರು. 

ಕಾರ್ಯಕ್ರಮದಲ್ಲಿ ಗ್ರಾಹಕರಿಗೆ ಸಾಲ ಮಂಜೂರಾತಿ ಪತ್ರಗಳನ್ನು ನೀಡಲಾಯಿತು.  

ಈ ಸಂದರ್ಭದಲ್ಲಿ ಸಿಬಿ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ, ಹುಬ್ಬಳ್ಳಿಯ ಪ್ರಾದೇಶಿಕ ವ್ಯವಸ್ಥಾಪಕ ವಡ್ಡೆ ಶ್ರೀ ಹರಿ, ದೇವೇಂದ್ರ ಕರೋಶಿ, ಸವೀದ್ದ ಆರ್, ಶಿವಲೀಲಾ ಆರ್, ಶಕುಂತಲಾ ಭಜಂತ್ರಿ ಮುಂತಾದವರು ಉಪಸ್ಥಿತರಿದ್ದರು.  

ಚಿಕ್ಕೋಡಿ ಶಾಖೆಯ ಬ್ಯಾಂಕ್ ಮ್ಯಾನೇಜರ್ ಈರಣ್ಣ ಜವಳಿ ಸ್ವಾಗತಿಸಿದರು. ಉಪ ಪ್ರಾದೇಶಿಕ ವ್ಯವಸ್ಥಾಪಕ ಪ್ರಶಾಂತ ಕಡಾಲೆ ವಂದಿಸಿದರು. ವಿನಾಯಕ ಖೋತ ನಿರೂಪಿಸಿದರು. 


ಸುದ್ದಿ ಓದಿ