ಮನರಂಜನೆ

ಸ್ಯಾಂಡಲ್ ವುಡ್ ನ ಗಮನ ಸೆಳೆಯಲಿದೆ ಬ್ಯಾಂಗ್ ಬ್ಯಾಂಗ್..

ಸ್ಯಾಂಡಲ್ ವುಡ್ ನ ಗಮನ ಸೆಳೆಯಲಿದೆ ಬ್ಯಾಂಗ್ ಬ್ಯಾಂಗ್..

  ಬೆಂಗಳೂರು: ಡಿ 1   ಇದೊಂದು ರೋಚಕತೆ ಹೊಂದಿರುವ ಕಥೆ.. ಹಾಗೆಂದು ಹೇಳಿಕೊಂಡ ಚಿತ್ರತಂಡ ಏನು ಮಾಡಿದರೂ ಅದರ ತಿರುಳನ್ನು ಮಾತ್ರ ಬಿಟ್ಟುಕೊಡಲಿಲ್ಲ..
 
ಇಲ್ಲಿ ಸ್ಟಾರ್ ಗಿರಿ ಇಲ್ಲ. ಒಂದು ಗುಂಪು ಮತ್ತೊಂದು ಗುಂಪನ್ನು ಎದುರಿಸುತ್ತದೆ. ಶಾನ್ವಿ ಶ್ರೀವತ್ಸ ಮುಖ್ಯ ಪಾತ್ರದಲ್ಲಿದ್ದರೂ ರಘು ದೀಕ್ಷಿತ್, ಸಾತ್ವಿಕಾ (ಶ್ರಾವ್ಯ) ಅವರ ಪಾತ್ರಗಳು ಗಮನ ಸೆಳೆಯುತ್ತವೆ.
 
ಅಂದ ಹಾಗೆ ಚಿತ್ರದ ಹೆಸರು 'ಬ್ಯಾಂಗ್' ಇದರ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಒಂದು ರೀತಿಯಲ್ಲಿ ಅಬ್ಬರವನ್ನೇ ಮಾಡಿತು ಚಿತ್ರತಂಡ. ನಾವು ಬೇರೆ ಏನೋ ಹೇಳಲು ಹೊರಟಿದ್ದೇವೆ ಹಾಗಾಗಿ ಇಲ್ಲಿ ವಿಭಿನ್ನತೆಯನ್ನು ನೀವು ಗಮನಿಸಬಹುದು ಎಂದು ಹೇಳಿಕೊಂಡಿತು ಚಿತ್ರತಂಡ.
 
ನಿರ್ದೇಶಕ ಶ್ರೀ ಗಣೇಶ್ ಪರಶುರಾಮ್ ಅವರೂ ಸೇರಿದಂತೆ ಎಲ್ಲರೂ ಇದೊಂದು ಪರಿಚಯಾತ್ಮಕ ಕಾರ್ಯಕ್ರಮ ಎಂದೇ ಭಾವಿಸಿದ್ದರಿಂದ ಪರಸ್ಪರ ಹೊಗಳಿಕೆಯೇ ಮುಖ್ಯವಾಯ್ತು..
 
ರಘದೀಕ್ಷಿತ್ ಒತ್ತಾಯಪೂರ್ವಕವಾಗಿ ಅಭಿನಯ ಮಾಡಿದ್ದಾಗಿ ಹೇಳಿಕೊಂಡರು. ಅವರ ಸಂಬಂಧಿ ಋತ್ವಿಕ್ ಒಂದು ಮುಖ್ಯ ಪಾತ್ರದ ಜೊತೆಗೆ ಸಂಗೀತವನ್ನೂ ನೀಡಿದ್ದಾರೆ. ಉದಯಲೀಲಾ ಅವರ ಕ್ಯಾಮೆರಾ ಕೈಚಳಕ ಅತ್ಯುತ್ತಮ ಎಂಬ ಹೊಗಳಿಕೆಯ ಮಾತುಗಳು ಬಂದವು.
 
ಪೂಜಾ ವಸಂತ್ ಕುಮಾರ್ ಹಾಗೂ ವಸಂತ್ ಕುಮಾರ್  ಈ ಚಿತ್ರದ ನಿರ್ಮಾಪಕರು. ಒಂದು ಹೊಸ ತಂಡದ ಮೇಲೆ ಭರವಸೆ ಇಟ್ಟು ನಿರ್ಮಾಣಕ್ಕೆ ಮುಂದಾಗಿದ್ದಾಗಿ ಪೂಜಾ ವಸಂತಕುಮಾರ್ ತಿಳಿಸಿದರು.
 
ವಿಜಯರಂಗ ಸಂಕಲನವಿದೆ. ಚಿತ್ರದಲ್ಲಿ ತಂತ್ರಜ್ಞರದೇ ಕಾರುಬಾರು ಎಂಬ ವಿವರ ಕೊಟ್ಟರು ನಿರ್ದೇಶಕ ಶ್ರೀ ಗಣೇಶ್ ಪರುಶುರಾಮ್. ಆನಂದ್ ಆಡಿಯೋ ಮನೀಶ್ ಹಾಗೂ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಸುದ್ದಿ ಓದಿ