ಎಂಇಎಸ್ ನಿಷೇಧಿಸದಿದ್ದರೆ 21ರಂದು ಬಂದ್
ರಾಜ್ಯ ರೈತ ಸಂಘದ ರವೀಂದ್ರಗೌಡ ಪಾಟೀಲ ಎಚ್ಚರಿಕೆ
ರಾಣೇಬೆನ್ನೂರು 01: ಸರಕಾರ ನಿನ್ನೆ ದಿವಸ ಕನ್ನಡಪರ, ರೈತಪರ, ಸಂಘಟನೆಗಳ ರಾಜ್ಯ ಮುಖಂಡರೊಂದಿಗೆ ಇಂದಿನ ಕರ್ನಾಟಕ ಬಂದ್ ವಿಷಯದ ಸಂಬಂಧ ಸಭೆ ನಡೆಸಿ 20 ರ ಒಳಗೆ ಎಂ.ಇ.ಎಸ್. ನಿಷೇಧಿಸುವ ಬಗ್ಗೆ ಭರವಸೆಯನ್ನು ನೀಡಿದ ಹಿನ್ನೆಲೆಯಲ್ಲಿ ಹಾಗೂ ಕೊರೊನಾ ಮತ್ತು ಓಮಿಕ್ರಾನ್ ಸಂಕಷ್ಟದ ನೈಟ್ಕರ್ೂ ಸಂದರ್ಭದಲ್ಲಿ ಜನಸಾಮಾನ್ಯರಿಗೆ, ವ್ಯಾಪಾರಸ್ಥರಿಗೆ, ಹೊಟೇಲ್ ಉದ್ಯಮದಾರರಿಗೆ, ರೈತರಿಗೆ, ಕೃಷಿ ಕಾರ್ಮಿಕರಿಗೆ, ಬೀದಿ ಬದಿ ವ್ಯಾಪಾರಸ್ಥರಿಗೆ ತೊಂದರೆಯಾಗಬಾರದೆಂಬ ಸದುದ್ದೇಶದಿಂದ ಇಂದಿನ ಬಂದ್ನ್ನು ಮರಳಿ ಪಡೆದಿದ್ದು ಮುಖ್ಯಮಂತ್ರಿಗಳು ನೀಡಿದ ಭರವಸೆಯಂತೆ ಜನವರಿ 20 ರ ಒಳಗಾಗಿ ಎಂಇಎಸ್ನ್ನು ಕಾನೂನಾತ್ಮಕವಾಗಿ ನಿಷೇಧಿಸದಿದ್ದರೆಜನವರಿ 21 ಕ್ಕೆ ರಾಜ್ಯಾದ್ಯಂತ ಕರ್ನಾಟಕ ಬಂದ್ ಮಾಡುವುದರ ಜೊತೆಗೆ ಉಗ್ರ ಸ್ವರೂಪದ ಹೋರಾಟ ಮಾಡಲಾಗುವುದೆಂದು ಕರ್ನಾಟಕರಾಜ್ಯರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ರವೀಂದ್ರಗೌಡಎಫ್. ಪಾಟೀಲ ಎಚ್ಚರಿಸಿದರು.
ರವೀಂದ್ರಗೌಡಎಫ್. ಪಾಟೀಲ ಅವರ ನೇತೃತ್ವದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಉತ್ತರ ಕರ್ನಾಟಕದ ಹೆಬ್ಬಾಗಿಲು ರಾಣೇಬೆನ್ನೂರಿನ ಕೆಎಸ್ಆರ್ಟಿಸಿ ಬಸ್ಸ್ಟ್ಯಾಂಡ್ ಹತ್ತಿರ ಕನ್ನಡಪರ, ರೈತಪರ, ದಿನಗೂಲಿ ನೌಕರರ ಸಂಘಟನೆಗಳ ಸಹಯೋಗದಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು ಇಂದು ಬಂದ್ ಕರೆ ವಾಪಸ್ಸ ಪಡೆದಿರುವುದು ಕನ್ನಡದ ಅಭಿಮಾನದ ಕೊರತೆಯಿಂದಲ್ಲಾ ಎಂದು ಹೇಳಿದರು. ಕರ್ನಾಟಕ ಸ್ವಾಭಿಮಾನಿ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ನಿತ್ಯನಂದ ಕುಂದಾಪೂರ ಅವರು ಮಾತನಾಡಿ ನಮ್ಮಕನ್ನಡ ನಾಡಿನ ಜಲ, ಭಾಷೆ, ಗಡಿಯಾವುದೇ ವಿಚಾರಕ್ಕಾದರೂ ಧಕ್ಕೆ ಬಂದರೆ ನಾವೆಲ ಕನ್ನಡಿಗರು ಸುಮ್ಮನೆಕೂರಲು ಸಾಧ್ಯವಿಲ್ಲವೆಂದು ಎಚ್ಚರಿಕೆ ಸಂದೇಶ ನೀಡಿದರು.ಯುವ ನ್ಯಾಯವಾದಿ ಎನ್.ಕೆ.ಕುಡಪಲಿ, ಎಸ್.ಡಿ. ಹಿರೇಮಠ, ದಿನಗೂಲಿ ನೌಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಕೊಂಗಿಯವರ, ಯುವ ಮುಖಂಡ ಚಂದ್ರಣ್ಣ ಬೇಡರ, ಶಿವಕುಮಾರ ಜಾದವ, ವೀರಕಂಠೀರವ ಕಟ್ಟಡ ಕಾರ್ಮಿಕರ ಸಂಘದ ಮಹಿಳಾ ಮುಖಂಡರಾದ ರೇಣುಕಾ ಲಮಾಣಿ, ಕೊಟ್ರೇಶಪ್ಪ ಎಮ್ಮಿ ಮಾತನಾಡಿದರು.
ಒಂದು ತಾಸಿಗೂ ಹೆಚ್ಚು ಕಾಲ ರಸ್ತೆತಡೆ ಮಾಡಿದ ಪ್ರತಿಭಟನಾ ಸ್ಥಳಕ್ಕೆ ಉಪತಹಶೀಲ್ದಾರ ಹಾದಿಮನಿಯವರು ಬಂದು ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ದಿಳ್ಳೆಪ್ಪ ಸತ್ಯಪ್ಪನವರ, ಹರಿಹರಗೌಡ ಪಾಟೀಲ, ನಾಗರಾಜ ಸುರರ್ವೆ, ಗದಿಗೆಪ್ಪ ನೇಕಾರ, ಗೋವಿಂದರೆಡ್ಡಿ ಚಳಗೇರಿ, ತಮ್ಮಣ್ಣ ಮುದಕಣ್ಣನವರ, ಅನೀಲ ಮುಷ್ಠುರ ನಾಯ್ಕ, ಮುಂತಾದವರು ಭಾಗವಹಿಸಿದ್ದರು. ಪೊಲೀಸರು ಸೂಕ್ತ ಬಂದೋಬಸ್ತ್ ಒದಗಿಸಿದ್ದರು.