ಬೈಲಹೊಂಗಲ

ಬೈಲಹೊಂಗಲ ಶಾಸಕರಿಗೂ ಕೊರೊನಾ ಪಾಸಿಟಿವ್

ಬೈಲಹೊಂಗಲ ಶಾಸಕರಿಗೂ ಕೊರೊನಾ ಪಾಸಿಟಿವ್

ಬೈಲಹೊಂಗಲ, ಜುಲೈ 18: ಬೈಲಹೊಂಗಲ ಕಾಂಗ್ರೆಸ್ ಶಾಸಕ ಹಾಗೂ ಕೆಎಲ್ಇ ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕೌಜಲಗಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಕೊರೊನಾ ಸೋಂಕು ತಗುಲಿರುವುದನ್ನು ಶಾಸಕ ಮಹಾಂತೇಶ ಕೌಜಲಗಿ ಅವರು ದೃಢಪಡಿಸಿದ್ದಾರೆ.

 ಬೈಲಹೊಂಗಲದ ತಮ್ಮ ನಿವಾಸದಲ್ಲಿ ಹೋಮ್ ಕ್ವಾರಂಟೈನ್ ಆಗಿದ್ದು, ಅಗತ್ಯ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.

ಕಳೆದ ವಾರ ಬೆಳಗಾವಿಯ ಉತ್ತರ ವಿಧಾನಸಭೆ ಕ್ಷೇತ್ರದ ಶಾಸಕ ಅನಿಲ್ ಬೆನಕೆ ಅವರಿಗೂ ಸೋಂಕು ತಗುಲಿತ್ತು. ಇದೀಗ ಜಿಲ್ಲೆಯ ಮತ್ತೋರ್ವ ಶಾಸಕರಿಗೆ ಸೋಂಕು ತಗುಲಿದೆ.

ಸುದ್ದಿ ಓದಿ