ರಾಷ್ಟ್ರೀಯ

ಬಹರೇನ್ ಪ್ರಧಾನಿ ಷೇಕ್ ಖಲೀಫಾ ಇನ್ನಿಲ್ಲ

ಬಹರೇನ್  ಪ್ರಧಾನಿ ಷೇಕ್ ಖಲೀಫಾ  ಇನ್ನಿಲ್ಲ

ಮನಾಮ,ನವೆಂಬರ್ 11: ಬಹ್ರೇನ್ ಪ್ರಧಾನಿ ಶೇಖ್ ಖಲೀಫಾ ಬಿನ್ ಸಲ್ಮಾನ್ ಅಲ್ ಖಲೀಫಾ ನಿಧನ ಹೊಂದಿದ್ದಾರೆ  ಎಂದು  ಆ  ದೇಶ ರಾಜ ಭವನ   ತನ್ನ ಅಧಿಕೃತ  ಟ್ವಿಟ್ಟರ್  ನಲ್ಲಿ ತಿಳಿಸಿದೆ. 

ಅವರಿಗೆ 84 ವರ್ಷ ವಯಸ್ಸಾಗಿತ್ತು.  ಬುಧವಾರ ಬೆಳಿಗ್ಗೆ ಅಮೆರಿಕಾದ   ಮಯೋ   ಆಸ್ಪತ್ರೆಯಲ್ಲಿ   ಶೇಖ್ ಖಲೀಫಾ ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.

ಖಲೀಫಾ ಅವರ ಪಾರ್ಥಿವ ಶರೀರ  ಬಹರೇನ್  ತಂದ ನಂತರ ಅಂತ್ಯಕ್ರಿಯೆಯನ್ನು ಸರ್ಕಾರಿ ವಿಧಿ ವಿಧಾನಗಳೊಂದಿಗೆ ನಡೆಸಲಾಗುವುದು ಎಂದು ದೇಶದ ಅಧಿಕೃತ ಮಾಧ್ಯಮ  ತಿಳಿಸಿದೆ.  ಒಂದು  ವಾರ ಕಾಲ   ದೇಶದಲ್ಲಿ ಶೋಕಾಚರಣೆ ಘೋಷಿಸಲಾಗಿದೆ.   1970ರಿಂದ ಶೇಖ್ ಖಲೀಫಾ ಬಹ್ರೇನ್‌ ದೇಶದ  ಪ್ರಧಾನ ಮಂತ್ರಿಯಾಗಿದ್ದಾರೆ. 1971ರ ಆಗಸ್ಟ್  15 ರಂದು   ಆ ದೇಶ ಸ್ವಾತಂತ್ರ್ಯ ಗಳಿಸಿತು.  ಜಗತ್ತಿನ ಅತ್ಯಂತ  ದೀರ್ಘಾವಧಿಯ ಪ್ರಧಾನ ಮಂತ್ರಿ  ಎಂಬ ದಾಖಲೆಯನ್ನು ಬಿನ್ ಸಲ್ಮಾನ್ ಖಲೀಫಾ ಹೊಂದಿದ್ದಾರೆ. 2011 ರ ಅರಬ್ ಕ್ರಾಂತಿಯ ಸಂದರ್ಭದಲ್ಲಿ ಅವರು ತಮ್ಮ ಸರ್ಕಾರ ಉಳಿಸಿಕೊಳ್ಳುವಲ್ಲಿ  ಸಮರ್ಥರಾಗಿದ್ದರು.

ಸುದ್ದಿ ಓದಿ