ಇತಿಹಾಸದಲ್ಲಿ ಪೂರ್ವಜರ ಜೀವ ಜಲ ಸೇವೆ ಇಂದು ಮಾದರಿಯಾಗಿದೆ: ಮಹಾಂತೇಶ್ವರ ಶ್ರೀಗಳು
ರಾಣೇಬೆನ್ನೂರು 09: ಇತಿಹಾಸದಲ್ಲಿ ನಮ್ಮ ಪೂರ್ವಜರು ತಮ್ಮ ಮನೆತನದ ಸ್ಮರಣೆ ಮತ್ತು ಸವಿ ನೆನಪಿಗಾಗಿ ಆಯಾ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ಉದ್ಧೇಶದಿಂದ ಕೆರೆ, ಕಟ್ಟೆ ಬಾವಿಗಳನ್ನು ಸ್ಥಾಪಿಸುವುದರ ಮೂಲಕ ತಮ್ಮ ಪಾಲಿನ ನೀರು ಧಾನವನ್ನಾಗಿ ತಮ್ಮ ನಿಷ್ಫಲ ಸೇವೆ ಅಳವಡಿಸಿಕೂಂಡು ಮಹಾಧಾನಿಗಳ ರೂಪದಲ್ಲಿ ಧಾರಾಳ ತನವನ್ನು ಮೇರೆದಿದ್ದಾರೆ. ಅಂತಹ ಇತಿಹಾಸದ ಪರಂಪರಾಗತ ಸೇವೆ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ರಾಜ ಮಹರ್ಷಿ ಡಾ. ವಿರೇಂದ್ರ ಹೆಗ್ಗಡೆಜಿ ಅವರು ಮಾಡುತ್ತಿದ್ದಾರೆ. ಅವರ ಈ ಸಾಮಾಜಿಕ ಸೇವಾ ಕಾರ್ಯವು ಅತ್ಯಂತ ಮಾದರಿಯಾಗಿದೆ ಎಂದು ಚಳಗೇರಿ ಗ್ರಾಮದ ಕಟಗಿಹಳ್ಳಿ ಮಠದ ಡಾಽ.ಮಹಾಂತೇಶ್ವರ ಸ್ವಾಮಿಜಿ ನುಡಿದರು.
ಅವರು ತಾಲೂಕಿನ ಚಳಗೇರಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆಯ ಆರ್ಥಿಕ ನೆರವಿನೊಂದಿಗೆ ಗ್ರಾಮ ಪಂಚಾಯತಿ ಸಹಯೋಗದಲ್ಲಿ ಪನರ್ಚೇತನಗೂಂಡ ಗ್ರಾಮದ ಕರ್ಮಕಟ್ಟೆ ಕೆರೆಗೆ ಅರ್ಪಣೆ ಬಾಗಿನ ಸಮರ್ಪಣಾ ಕಾರ್ಯಕ್ರಮದ ದಿವ್ಯಸಾನಿದ್ಯ ವಹಿಸಿ ಮಾತನಾಡಿದರು. ಎಲ್ಲ ಧಾನಗಳಿಗಿಂತಲೂ ಶ್ರೇಷ್ಟವಾದ ಧಾನ ನೀರು ನಮ್ಮ ಹಿರಿಯರು ಊರಿಗೆ ಯಾರೇ ಬಂದರೂ ಮೊದಲು ನೀರು ಕೈಗಿತ್ತು ಸ್ವಾಗತಿಸುವ ಪರಂಪರೆ ನಮ್ಮದು, ಆದರೇ ಇಂದು ಜೀವ ಜಲ ಪಡೆಯಬೇಕಾದರೆ ತಕ್ಕ ಬೆಲೆ ತೆರಬೇಕಾಗಿದೆ. ಆಧುನಿಕ ಜೀವನ ಬದುಕು ಅತ್ಯಂತ ಕಷ್ಟಕರವಾಗುತ್ತಲಿದೆ. ಅದಕ್ಕಾಗಿಯೇ ಭಾರತೀಯ ಪರಂಪರೆ ಧಾನ ಧರ್ಮದಿಂದ ಕೂಡಿತ್ತು ಎಂದು ಇತಿಹಾಸವನ್ನು ವಿಶ್ಲೇಷಿಸಿ ಮಾತನಾಡಿದ ಶ್ರೀಗಳು ನೀರು ಮುಕ್ತವಾಗಿ ದೂರೆಯಬೇಕು, ಅದಕ್ಕಾಗಿ ಕೆರೆ, ಕಟ್ಟೆ, ಬಾವಿಗಳು ನಿರ್ಮಾಣ ಇಂದಿನ ಅಗತ್ಯವಿದೆ ಎಂದರು.
ಶಾಸಕ ಅರುಣಕುಮಾರ ಪೂಜಾರ ಅವರು ಪುನರ್ಚೇತನಗೂಳಿಸಿದ ಕೆರೆಯನ್ನು ಗ್ರಾವಸ್ತರಿಗೆ ಲೋಕಾರೆ್ಣಗೂಳಿಸಿ ಹಸ್ತಾಂತರಿಸಿದರು. ಧಾರವಾಡ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ ಅವರು ಮಾತನಾಡಿ ಪ್ರತಿ ವರ್ಷವು ತಾಲೂಕಿನಲ್ಲಿ ಒಂದು ಕೆರೆಯನ್ನು ಆಯ್ಕೆ ಮಾಡಿಕೂಂಡು ಪುನಶ್ಚೇತನ ಕಾಮಗಾರಿಯನ್ನು ಸ್ಥಳಿಯರ ಸಹಕಾರದೂಂದಿಗೆ ಕೈಗೊಳ್ಳಲಾಗುತ್ತಿದೆ ಇದುವರೆಗೂ 297 ಕೆರೆಗಳ ಪುನಶ್ಚೇತನಗೂಳಿಸಲಾಗಿದೆ ಎಂದ ಅವರು ಜಿಲ್ಲೆಯಲ್ಲಿ 12 ಕೆರೆಗಳ ಕಾಮಗಾರಿಗೆ ಈ ಯೋಜನೆಯಿಂದ(ನಮ್ಮೂರ ನಮ್ಮ ಕೆರೆ) ಆರ್ಥಿಕ ಸಹಕಾರ ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಪ್ರಮಿಳಾ, ಕೆರೆ ಸಮಿತಿ ಅಧ್ಯಕ್ಷ ಕರೆಗೌಡ ದೂಳೆಹೊಳಿ, ಯೋಜನಾ ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ, ಯೋಜನಾ ಅಧಿಕಾರಿ ಸತೀಶ್, ರಮೇಶ್ ಸೇರಿದಂತೆ ಮತ್ತಿತರ ಗಣ್ಯರು ಪಂಚಾಯತಿ ಸದಸ್ಯರು ಗ್ರಾಮಸ್ಥರು ಪಾಲ್ಗೊಂಡಿದ್ದರು.