ಬೈಲಹೊಂಗಲ

ಏ. 13 ರಿಂದ ಬಗಳಾಂಬಾದೇವಿ ಜಾತ್ರಾ ಮಹೋತ್ಸವ

ಏ. 13 ರಿಂದ ಬಗಳಾಂಬಾದೇವಿ ಜಾತ್ರಾ ಮಹೋತ್ಸವ

ಬೈಲಹೊಂಗಲ 12: ಪಟ್ಟಣದ ಹೊಸೂರ ರಸ್ತೆಯಲ್ಲಿರುವ ಬಗಳಾಂಬಾದೇವಿ ಜಾತ್ರಾ ಮಹೋತ್ಸವ ಏ. 13 ಮತ್ತು 14 ರಂದು ಅತಿ ವಿಜ್ರಂಭನೆಯಿಂದ ಜರುಗಲಿದೆ.  

ಶನಿವಾರ ಏ. 13 ರಂದು ಮುಂಜಾನೆ ಶ್ರೀದೇವಿಗೆ ಅಭಿಷೇಕ, ಕುಂಕುಮಾರ್ಚನೆ, ವಿಶೇಷ ಪೂಜೆ ಹಾಗೂ ಪಲ್ಲಕ್ಕಿ ಉತ್ಸವ, ಕುಂಭ ಮೇಳ ಕಾರ್ಯಕ್ರಮ ಜರುಗುತ್ತವೆ. ಮದ್ಯಾಹ್ನ 12 ಕ್ಕೆ ಧರ್ಮಸಭೆ ಮತ್ತು ಸಂಜೆ 6 ಘಂಟೆಗೆ ಮಹಾತ್ಮರಿಂದ ಧರ್ಮಸಭೆ, ರಾತ್ರಿ ಸುತ್ತಮುತ್ತಲಿನ ಗ್ರಾಮಗಳ ಭಕ್ತರಿಂದ ಭಜನಾ ಕಾರ್ಯಕ್ರಮ ಹಾಗೂ ಗೌರಮ್ಮ ಕುಮಾರೆಶ್ವರ ಶರಣರಿಂದ ಸಂಗೀತ ಸೇವೆ ಜರುಗಲಿದೆ. 

ಮುರಗೋಡ ದುರದುಂಡೇಶ್ವರ ಮಠದ ಶ್ರೀ ನೀಲಕಂಠ ಮಹಾಸ್ವಾಮಿಗಳು ಹಾಗೂ ಬೈಲಹೊಂಗಲ ಮೂರೂಸಾವಿರ ಮಠದ ಶ್ರೀ ಪ್ರಭು ನೀಲಕಂಠ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು. ಬಗಳಾಂಬಾದೇವಿ ದೇವಸ್ಥಾನದ ಧರ್ಮಾಧಿಕಾರಿ ಡಾ.ವೇದಮೂರ್ತಿ ವೀರಯ್ಯ ಸ್ವಾಮೀಜಿ ಅದ್ಯಕ್ಷತೆ ವಹಿಸುವರು. 

ರವಿವಾರ ಏ. 14 ರಂದು ಹೂಲಿ ಸಾಂಬಯ್ಯನವರ ಮಠದ ಶ್ರೀ ಉಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ನೇಸರಗಿ ಅಂಬಾದೇವಿ ಮಠದ ಡಾ.ವೀರ​‍್ರಭು ಪಂಡಿತಾರಾಧ್ಯ ಶಿವಾಚಾರ್ಯ ಸಾನಿಧ್ಯ ವಹಿಸುವಹಿಸಲಿದ್ದಾರೆ. ಅಂದು ಮುಂಜಾನೆ ದೇವಿಗೆ ಪೂಜೆ, ದೇವಿ ಪಾರಾಯಣ, ರುದ್ರಗಣಹೋಮ ಜರುಗಲಿವೆ. ಮದ್ಯಾಹ್ನ ಮಾತಾಶ್ರೀ ಬಗಳಾಂಬಾದೇವಿ ಪ್ರಶಸ್ತಿ ವಿತರಣೆ , ಸಾಯಂಕಾಲ ಮಹಾತ್ಮರಿಂದ ಧರ್ಮಸಭೆ ಹಾಗೂ ಉಡಿ ತುಂಬುವ ಕಾರ್ಯಕ್ರಮ ಹಾಗೂ ದೀಪೋತ್ಸವ  ನಡೆಯಲಿದೆ.  

ಶೇಖರ ದಳವಾಯಿ ಹಾಗೂ ಸುನಂದಾ ಸುಭೇದಾರ ಅವರಿಂದ ಪ್ರಸಾದ ಸೇವೆ , ಚಚಡಿ, ಅಸುಂಡಿ, ಸಂಗನಕೇರಿ, ಮುರಕಟ್ನಾಳ ಭಕ್ತರಿಂದ ವಿಶೇಷ ಸೇವೆ ಹಾಗೂ ಬೈಲಹೊಂಗಲ ದೊಡ್ಡಾದೇವರ ಭಜನಾ ಮಂಡಳಿ, ಚಿಕ್ಕೊಪ್ಪ ಪಟ್ಟಿಹಾಳ ಗ್ರಾಮದ ಭಕ್ತರಿಂದ ಭಜನಾ ಸೇವೆ ಜರುಗಲಿದೆ. 


ಸುದ್ದಿ ಓದಿ