ಹಸುವಿಗೆ ಸೀಮಂತ: ಮುತೈದೆಯರಿಂದ ವಿಶೇಷ ಪೂಜೆ
ಮಾಂಜರಿ 15: ಚಿಕ್ಕೋಡಿ ತಾಲೂಕಿನ ಹೊಸ ಇಂಗಳಿ ಗ್ರಾಮದ ಅರುಣ ಬಾಮನೆ ಮತ್ತು ಅವರ ಕುಟುಂಬದವರು ಮನೆಯಲ್ಲಿ ಪ್ರೀತಿಯಿಂದ ಸಾಕಿರುವ ಹಸುವಿಗೆ ಸೀಮಂತ ಕಾರ್ಯಕ್ರಮ ಹಮ್ಮಿಕೊಂಡು ವಿಶೇಷತೆ ಮೆರೆದಿದ್ದಾರೆ.
ಕಳೆದ ಮರಾ್ನಲ್ಕು ವರ್ಷಗಳಿಂದ ತಮ್ಮ ಮನೆಯಲ್ಲಿ ಮುದ್ದಿನಿಂದ ಸಾಕಿರುವ ಹಸು ಈಗ ತುಂಬು ಗರ್ಭಿಣಿಯಾಗಿದ್ದು, ಹಿಂದೂ ಸಂಪ್ರದಾಯದಂತೆ ಮನೆಯ ಹೆಣ್ಣು ಮಗಳಿಗೆ ಮಾಡುವ ಸೀಮಂತ ಕಾರ್ಯವನ್ನು ಹಸುವಿಗೆ ಮಾಡಿ, ಗ್ರಾಮದವರ ಮೆಚ್ಚ್ಚುಗೆಗೆ ಪಾತ್ರರಾಗಿದ್ದಾರೆ. ಗ್ರಾಮದ ಎಲ್ಲ ಮುತೈದೆಯರು ಆಗಮಿಸಿ, ಹಸುವಿಗೆ ವಿಶೇಷ ಪೂಜೆ ಸಲ್ಲಿಸಿ, ನೈವೇದ್ಯ ನೀಡಿ ಉಡಿ ತುಂಬಿದ್ದಾರೆ.
ವಿಶೇಷ ಕಾರ್ಯಕ್ರಮಕ್ಕೆ ನೂರಾರು ಗ್ರಾಮಸ್ಥರು ಸಾಕ್ಷಿಯಾಗಿದ್ದು, ಆಗಮಿಸಿದ್ದ ಎಲ್ಲರಿಗೆ ಬಾಮನೆ ಕುಟುಂಬದವರು ಸಿಹಿ ಭೋಜನ ನೀಡಿದ್ದಾರೆ. ಈ ವೇಳೆ ಆಶೋಕ್ ಬಾಮನೆ, ಮೋಹನ್ ಬಾಮನೆ, ಅರುಣ ಬಾಮನೆ, ಭೀಮಾ ಘೋಸರವಾಡೆ, ಮುರಾರಿ ಬಾಮನೆ, ಪೌರಸ್ ಬಾಮನೆ, ಕಿರಣ ಜತ್ರಾಟೆ, ಧನಂಜಯ್ ಬಾಮನೆ, ಯುವರಾಜ್ ಢೋನವಾಡೆ ಸೇರಿದಂತೆ ಅನೇಕ ಮುಖಂಡರು, ಯುವಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.