ಡ್ರಗ್ಸ್ ಪ್ರಕರಣ : ಬಾಲಿವುಡ್ ಮೇಕಪ್ ಕಲಾವಿದ ಸೂರಜ್ ಗೋದಂಬೆ ಬಂಧನ
ಮುಂಬೈ, ಡಿ 10 ;ಬಾಲಿವುಡ್ ನಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಎನ್ಸಿಬಿ ಅಧಿಕಾರಿಗಳು ಕೇಶ ವಿನ್ಯಾಸಕಾರ, ಖ್ಯಾತ ಮೇಕಪ್ ಕಲಾವಿದ ಸೂರಜ್ ಗೋದಂಬೆ ಅವರನ್ನು ಬಂಧಿಸಿದ್ದಾರೆ.
ಕಳೆದ ಎರಡು ತಿಂಗಳಿನಿಂದ ಡ್ರಗ್ಸ್ ಪ್ರಕರಣದಲ್ಲಿ ಹಲವು ನಟ, ನಟಿಯರ ಹೆಸರು ಕೇಳಿ ಬಂದಿದ್ದು, ಖ್ಯಾತನಾಮರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಡ್ರಗ್ಸ್ ಪೆಡ್ಲರ್ಗಳ ಜೊತೆ ಸಂಪರ್ಕದಲ್ಲಿದ್ದವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇದೀಗ, ಮೇಕಪ್ ಕಲಾವಿದ ಸೂರಜ್ ಗೋದಂಬೆ ಅವರನ್ನು ಮುಂಬೈ ನಿವಾಸದಲ್ಲಿ ಕೊಕೇನ್ ಸಮೇತ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಸೂರಜ್ ಗೋದಂಬೆಯವರು 3 ಈಡಿಯಟ್ಸ್ (2009), ಫಿಯರ್ಲೆಸ್ (2010) ಮತ್ತು ತನು ವೆಡ್ಸ್ ಮನು ರಿಟರ್ನ್ಸ್ (2015) ನಂತಹ ಜನಪ್ರಿಯ ಚಿತ್ರಗಳಲ್ಲಿ ಕೇಶ ವಿನ್ಯಾಸಕ ಮತ್ತು ಮೇಕಪ್ ಕಲಾವಿದರಾಗಿ ಕೆಲಸ ಮಾಡಿದ್ದು, ಅನೇಕ ದೊಡ್ಡ ಸಂಸ್ಥೆಗಳೊಂದಿಗೆ ಸಹ ಗುರುತಿಸಿಕೊಂಡಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ವೇಳೆ ಸೂರಜ್ ಬಗ್ಗೆ ಮಾಹಿತಿ ಸಿಕ್ಕಿದ್ದು, ಆ ಬಳಿಕ ಮನೆ ಮೇಲೆ ದಾಳಿ ಮಾಡಲಾಯಿತು. ಗುರುವಾರ ಸಂಜೆ ಅಥವಾ ಶುಕ್ರವಾರ ಬೆಳಗ್ಗೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗುವುದು ಎಂದು ಎನ್ಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.