ಶಿಗ್ಗಾವ್

ಬಿಜೆಪಿ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರಲಿದೆ: ಬೊಮ್ಮಾಯಿ

ಬಿಜೆಪಿ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರಲಿದೆ: ಬೊಮ್ಮಾಯಿ

ಶಿಗ್ಗಾವಿ 08: 2023 ರ ಮೇ 13 ರ ಚುನಾವಣೆ ಫಲಿತಾಂಶದಲ್ಲಿ ಭಾರತೀಯ ಜನತಾ ಪಕ್ಷ ಬಹುಮತವನ್ನು ಪಡೆಯಲಿದೆ ಎಂದು ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ಹೇಳಿದರು. 

ಪಟ್ಟಣದ ಹನುಮಂತಗೌಡ್ರ ಪಾಟೀಲ ಕಲ್ಯಾಣ ಮಂದಿರದ ಆವರಣದಲ್ಲಿ ಕಾಂಗ್ರೇಸ ಮುಖಂಡರು ಮತ್ತು ಕಾರ್ಯಕರ್ತರು ಬಿಜೆಪಿ ಪಕ್ಷ ಸೇರೆ​‍್ಡ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ನನ್ನ ಕ್ಷೇತ್ರದ ಜನ ಒಳ್ಳೆಯದು ಗುರುತಿಸುತ್ತಾರೆ, ಬೆಂಬಲಸತಾರೆ, ನನಗೆ ವಿಶ್ವಾಸವಿರುವುದು ಕಾರ್ಯಕರ್ತರು, ತಾಯಿಂದರು, ಯುವಕರು, ರೈತರು ಮೇಲೆ ಇದು ನನ್ನ ಜನತೆಯ ಮೇಲೆ ಇರುವ ಆತ್ಮವಿಶ್ವಾಸ ಎಂದರು. ನನ್ನ 35 ವರ್ಷದ ಸುದೀರ್ಘ ರಾಜಕೀಯ ಇತಿಹಾಸದಲ್ಲಿ ನನಗೆ ಒಂದಿಲ್ಲ ಒಂದು ರೀತಿಯಲ್ಲಿ ನನಗೆ ಸಹಕರಿಸಿದ ಇವರೇಲ್ಲರಿಗೂ ಹೃದಯ ಪೂರ್ವಕ ಅಭಿನಂದನೆಗಳು ತಿಳಿಸುತ್ತೇನೆ ಅಲ್ಲದೇ ಇವರೆಲ್ಲರೂ ಬಂದಿರುವುದು ಕ್ಷೇತ್ರದ 

ಸಮಗ್ರ ಅಭಿವೃದ್ಧಿ, ಐಕ್ಯತೆಗೆ ಮತ್ತು ಕ್ಷೇತ್ರದ ನೆನೆಗುದಿಗೆ ಬಿದ್ದಿರುವ ಅನೇಕ ಸಮಸ್ಯೆಗಳನ್ನು ಬಗೆಹರಿಸಲು ಕಂಕಣ ಬದ್ದರಾಗಿ ಬಂದಿದ್ದಾರೆ ನಿಮ್ಮ ವಿಶ್ವಾಸಕ್ಕೆ ಚ್ಯುತಿ ಬರದ ಹಾಗೇ ನಿಮ್ಮೆಲ್ಲರಿಗೂ ಬರವಸೆ ನೀಡುತ್ತೇನೆ ಅಲ್ಲದೇ ಕ್ಷೇತ್ರದ ಜನರ ಒಡನಾಟದ ಅನುಭವದ ಮೇರೆಗೆ ರಾಜ್ಯದಲ್ಲಿ ವಿವಿಧ ವಿಶೇಷ ಅನೇಕ ಕಾರ್ಯಕ್ರಮಗಳನ್ನು ಜಾರಿಗೋಳಿಸಿದ್ದೇನೆ ಎಂದರು.  

ಮುಖಂಡ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ ಕಾಂಗ್ರೇಸ ಪಕ್ಷದಲ್ಲಿ ದೇಶದಿಂದ ಹಿಡಿದು ತಾಲೂಕ ಮಟ್ಟದವರೆಗೆ ನಾಯಕತ್ವದ ಕೊರತಿಯಿದ್ದುರ ಕಾರಣ ಕ್ಷೇತ್ರದಲ್ಲಿ ಕಾಂಗ್ರೇಸ ಪಕ್ಷದಲ್ಲಿಯೂ ಸಹಿತ ನಾಯಕತ್ವದ ಮತ್ತು ಬದ್ದತೆಯಿಲ್ಲದ ಕಾರಣ ಮತ್ತು ಕ್ಷೇತ್ರದ ಅಭಿವೃದ್ದಿಗೋಸ್ಕರ ಇಂದು ಶಿಗ್ಗಾವಿ ಮತ್ತು ಸವಣೂರ ತಾಲೂಕಿನ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಭಾಜಪ ಸೇರೆ​‍್ಡಯಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು 50 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಿ ಮತ್ತೋಮ್ಮೆ ಕರ್ನಾಟಕದ ಮುಖ್ಯಮಂತ್ರಿಯಾಗಲು ನಾವು ನಿವೇಲ್ಲರೂ ಬದ್ದರಾಗಬೇಕು ಎಂದರು. 

ಬಸವರಾಜ ಬೊಮ್ಮಾಯಿ, ಶ್ರೀಕಾಂತ ದುಂಡಿಗೌಡ್ರ ನೇತೃತ್ವದಲ್ಲಿ ಎಂ.ಎನ್‌.ವೇಂಕೋಜಿ, ಹನುಮರೆಡ್ಡಿ ನಡುವಿನಮನಿ, ನಾಗಪ್ಪ ತಿಪ್ಪಕ್ಕನವರ, ಕೇದಾರ​‍್ಪ ಬಗಾಡೆ, ಸಂಗಮೇಶ ಕಂಬಾಳಿಮಠ, ಬಸನಗೌಡ ದುಂಡಿಗೌಡ್ರ, ಮೋಹನ ದೇಸಾಯಿ, ಮಜೀದ ಮಾಳಗಿಮನಿ, ಬಾಬಕ್ಕಾ ಬಳ್ಳಾರಿ ಸೇರಿದಂತೆ ನೂರಾರು ಕಾರ್ಯಕರ್ತರು ಭಾಜಫ ಸೇರೆ​‍್ಡಯಾದರು. ಕಾರ್ಯಕ್ರಮದಲ್ಲಿ ಕ್ಷೇತ್ರದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಪ್ರಾಸ್ತಾವಿಕವಾಗಿ ಶಿವಾನಂದ ಮ್ಯಾಗೇರಿ ಮಾತನಾಡಿದರು, ಗಂಗಾಧರ ಬಾಣದ ಸ್ವಾಗತಿಸಿದರು, ರೇಣುಕನಗೌಡ ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು, ಬಸವರಾಜ ನಾರಾಯಣಪೂರ ವಂದಿಸಿದರು. 


ಸುದ್ದಿ ಓದಿ