ಶಿಗ್ಗಾವ್

ಉಪಚುನಾವಣೆ 24 ರ ಬಿಜೆಪಿ ಟಿಕೆಟ್ ಆಕಾಂಕ್ಷಿ : ಶಿವಾನಂದ ಮ್ಯಾಗೇರಿ

ಉಪಚುನಾವಣೆ 24 ರ ಬಿಜೆಪಿ ಟಿಕೆಟ್ ಆಕಾಂಕ್ಷಿ  : ಶಿವಾನಂದ ಮ್ಯಾಗೇರಿ

ಶಿಗ್ಗಾವಿ:22:  ವರ್ಷದಿಂದ ಬಿಜೆಪಿ ಸೈದ್ಧಾಂತಿಕ ಚಟುವಟಿಕೆ ಮಾಡುತ್ತಾ ಬಸವರಾಜ ಬೊಮ್ಮಾಯಿ ನಿಕಟ ಪೂರ್ವ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಮಾರ್ಗದರ್ಶನದಲ್ಲಿ ಹಾಗೂ ಪಕ್ಷದ ವರಿಷ್ಠರು ಮತ್ತು ರಾಜ್ಯ ಜಿಲ್ಲೆಯ ಅಧ್ಯಕ್ಷರ ನಿರ್ದೇಶನದಲ್ಲಿ  ಪಕ್ಷ ನೀಡಿದ ಜವಾಬ್ದಾರಿಯನ್ನು ನಿಯತ್ತಾಗಿ ನಿಭಾಯಿಸಿದ್ದೇನೆ ಎಂದು ಶಿಗ್ಗಾವಿ ಸವಣೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬಿಜೆಪಿ ಟಿಕೆಟ್ ಆಕಾಂಕ್ಷಿ ಶಿಗ್ಗಾವಿ ಮಂಡಲದ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು.  

ತಾಲೂಕಿನ ಹನುಮನಹಳ್ಳಿ ಗ್ರಾಮದ ಗುರು ಹಿರಿಯರು ಹಾಗೂ ಪಕ್ಷದ ಮುಖಂಡರೊಂದಿಗೆ ಮಾತನಾಡಿದ ಅವರು  ನಮ್ಮ ಗುರುಗಳಾದ  ಬಸವರಾಜ ಬೊಮ್ಮಾಯಿ ಅವರು ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಭೇಟಿಯಾಗಿ  ನಾನು ಕೂಡ ಆಕಾಂಕ್ಷಿಯಾಗಿದ್ದೇನೆ ನನಗೆ ಟಿಕೆಟ್ ತಾವು ನೀಡಬೇಕು ಎಂದು ಕೇಳಿದಾಗ ಒಳ್ಳೆಯದಾಯ್ತು ನೀನು ಕೂಡ ಪಕ್ಷದಲ್ಲಿ 20 ವರ್ಷ ಸೇವೆ ಸಲ್ಲಿಸಿದ್ದೀಯಾ ಎಂದು ಬೆಂಬಲದ ಮಾತುಗಳನ್ನು ಹೇಳಿದ್ದಾರೆ ಎಂದರು. 

ಪಕ್ಷದಲ್ಲಿ ನಾನು  ಮಂಡಲ ಕಾರ್ಯದರ್ಶಿಯಾಗಿ, ಮಂಡಲ ಪ್ರಧಾನ ಕಾರ್ಯದರ್ಶಿಯಾಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, 2020 ರಿಂದ ಇಲ್ಲಿವರೆಗೂ ಎರಡು ಅವಧಿಯ ತಾಲೂಕ ಅಧ್ಯಕ್ಷನಾಗಿ  ಪ್ರತಿಯೊಂದು  ಬೂತ್ಗಳನ್ನು ಸಶಕ್ತಿಕರಣಗೊಳಿಸಿ  ನಾಲ್ಕು ವಿಧಾನಸಭೆ ಹಾಗೂ ನಾಲ್ಕು  ಲೋಕಸಭೆ ಚುನಾವಣೆಯಲ್ಲಿ ಮುಂದಾಳತ್ವದ ಜವಾಬ್ದಾರಿವಹಿಸಿ ಜಯ ತರುವಲ್ಲಿ ಶ್ರಮಿಸಿದ್ದೇನೆ ಶಿಗ್ಗಾವಿ ಸವಣೂರು ಹಿಂದುಳಿದ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ ಬಸವರಾಜ ಬೊಮ್ಮಾಯಿ ಅವರ ಬಲಗೈ ಬಂಟನಾಗಿ ಸೇವೆ ಸಲ್ಲಿಸಿದ್ದೇನೆ.   ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿದ್ದೇನೆ  ಗ್ರಾಮದಕ್ಷೇತ್ರದ ಪ್ರತಿಯೊಂದು ಹಳ್ಳಿ ಭೂತ ಕಾರ್ಯಕರ್ತರು ಜನಪ್ರತಿನಿಧಿಗಳು ಗುರು ಹಿರಿಯರು ಸಂಘ ಸಂಸ್ಥೆಗಳು ಹೋರಾಟಗಾರರು ಹಾಗೂ ಜನರೊಂದಿಗೆ ಅವಿನಾಭಾವ ಸಂಬಂಧವಿದೆ  ಶಿಗ್ಗಾವಿ ತಾಲೂಕ ಬಿಜೆಪಿ ಅಧ್ಯಕ್ಷನಾಗಿ 5 ವರ್ಷದಲ್ಲಿ ಭೂತ್ ಮಟ್ಟದಿಂದ ಬಿಜೆಪಿ ಸಂಘಟನೆ ಮಾಡಿ  ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಶಿಗ್ಗಾವಿ ತಾಲೂಕನ್ನು  ಮುಂಚೂಣಿಯಲ್ಲಿ ತರುವಲ್ಲಿ ಶ್ರಮಿಸಿದ್ದೇನೆ. ಸರ್ವ ಸಮುದಾಯದ ಹಿರಿಯರಿಗೆ ಯುವಕರಿಗೆ ಮಹಿಳೆಯರಿಗೆ ಪಕ್ಷದ ಪದಾಧಿಕಾರಿಗಳಿಗೆ ಸ್ಥಾನ ನೀಡಿ ಜವಾಬ್ದಾರಿ ಮತ್ತು ನಾಯಕತ್ವ ನೀಡಿದ್ದೇನೆ ಅನೇಕ ಪದಾಧಿಕಾರಿಗಳನ್ನು ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಗೆಲ್ಲಿಸಿ ಜನಪ್ರತಿನಿಧಿಗಳನ್ನಾಗಿ ಮಾಡಿದ್ದೇನೆ ಪಕ್ಷ ನೀಡಿದ ತಾಲೂಕು ಜಿಲ್ಲೆ ಮತ್ತು ವಿಭಾಗದ ಸರ್ವ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ ಎಂದರು. 

ಇದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ನಿವೃತ್ತ ಮುಖ್ಯೋಪಾಧ್ಯಯ ಎನ್ ಆರ್ ಸೋಮನಕಟ್ಟಿ ಗುರುಗಳು ಮಾತನಾಡಿ  ಶಿವಾನಂದ್ ಮ್ಯಾಗೇರಿ ಅವರು ಎಲ್ಲರಿಗೂ ಚಿರಪರಿಚಿತರು  ಬಸವರಾಜ ಬೊಮ್ಮಾಯಿ ಅವರಿಗೆ ಮತ್ತು ಪ್ರಹ್ಲಾದ್ ಜೋಶಿ ಅವರಿಗೆ ನಾವೆಲ್ಲರೂ ಭೇಟಿಯಾಗಿ  ಶಿವಾನಂದ ಮ್ಯಾಗೇರಿ ಅವರಿಗೆ ಟಿಕೆಟ್ ನೀಡಿರಿ ನಿಮ್ಮ ಪ್ರೋತ್ಸಾಹ ಸಹಕಾರ ಮಾರ್ಗದರ್ಶನದಲ್ಲಿ ನಾವು ಗೆಲ್ಲಿಸುತ್ತೇವೆಂದು ಹೇಳುತ್ತೇವೆ ಎಂದರು. 

ಈ ಸಂದರ್ಭದಲ್ಲಿ ಕೆಎಂಎಫ್ ಉಪಾಧ್ಯಕ್ಷ ಬಸನಗೌಡ ಮೇಲಿನಮನಿ  ರಾಜು ದೊಡ್ಡಮನಿ, ಸಿದ್ದು ಆಡೀನ ಗ್ರಾಮ ಪಂಚಾಯಿತಿ ಸದಸ್ಯ ಶೇಕಪ್ಪ ನೀರಲಗಿ. ಮಾರುತಿ ಕಬ್ಬೇರ. ಲಿಂಬನಗೌಡ ಪಾಟೀಲ, ನಾಗಪ್ಪ ತುಪ್ಪದ. ರೇಣುಕನಗೌಡ ಪುಟ್ಟನಗೌಡ್ರು. ಇನ್ನೂ ಅನೇಕ ಮುಖಂಡರು ಪಾಲ್ಗೊಂಡಿದ್ದರು. 


ಸುದ್ದಿ ಓದಿ