ಚಿಕ್ಕೋಡಿ

ಪಂಜಾಬ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

ಪಂಜಾಬ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

ಚಿಕ್ಕೋಡಿ 07: ಪ್ರಧಾನಿ ನರೇಂದ್ರ ಮೋದಿ ಭದ್ರತಾ ವೈಪಲ್ಯ ಖಂಡಿಸಿ ಚಿಕ್ಕೋಡಿ ಜಿಲ್ಲೆಯ ಬಿಜೆಪಿ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿ ಪಂಜಾಬ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಪ್ರಧಾನಿ ನರೇಂದ್ರ ಮೋದಿಗೆ ಭದ್ರತೆ ಒದಗಿಸುವಲ್ಲಿ ಪಂಜಾಬ್ ಕಾಂಗ್ರೆಸ್ ಸರ್ಕಾರ ವಿಫಲವಾಗಿದ್ದು, ಪಂಜಾಬ್‌ದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಬೇಕು ಎಂದು ಆಗ್ರಹಿಸಿದರು. 

ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ರಾಜೇಶ್ ನೇರ್ಲಿ ಮಾತನಾಡಿ, ದೇಶದ ಪ್ರಧಾನಿ ನರೇಂದ್ರ ಮೋದಿಯವರು ನಿಗದಿತ ಸರಕಾರಿ ಕಾರ್ಯಕ್ರಮಕ್ಕೆ ತೆರಳುತ್ತಿರುವ  ದಾರಿಯಲ್ಲಿ ಸೂಕ್ತ ರಕ್ಷಣಾ ವ್ಯವಸ್ಥೆ ಮಾಡದೇ ಬೇಜವಾಬ್ದಾರಿಯಿಂದ ನಡೆದುಕೊಂಡ ಪಂಜಾಬ ಸರಕಾರವನ್ನು ತಕ್ಷಣ ವಜಾ ಮಾಡಬೇಕು ಎಂದರು.  

 ದೇಶದ ಅತ್ಯುನ್ನತ ಹುದ್ದೆಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ 2 ವರ್ಷಗಳ ನಂತರ ಇದೇ ಮೊದಲ ಬಾರಿ ಜನಪರ ಯೋಜನೆಗಳ ಅನುಷ್ಠಾನಗೊಳಿಸುವ ಕಾರ್ಯಕ್ರಮಕ್ಕೆ ತೆರಳಬೇಕಿತ್ತು ಆದರೆ ಹವಾಮಾನ ವೈಪರಿತ್ಯದ ಪರಿಣಾಮ ರಸ್ತೆ ಮಾರ್ಗದ ಮೂಲಕ ತೆರಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಯವರ ಸುರಕ್ಷತೆಯ ಜವಾಬ್ದಾರಿ ಪಂಜಾಬ ಸರಕಾರದ್ದಾಗಿದ್ದರೂ ಕೂಡ ದಾರಿ ಮಧ್ಯದಲ್ಲಿಯೇ ಅನಿವಾರ್ಯ ವಾಗಿ 15 ನಿಮಿಷಗಳ ಗಳ ಕಾಲ  ಪಾಕಿಸ್ತಾನ ಬಾರ್ಡರಗೆ ಅತೀ ಹತ್ತಿರದಲ್ಲಿರುವ ಫ್ಲೈ ಓವರ ಮೇಲೆ ನಿಲ್ಲಬೇಕಾಯಿತು ಆದರೆ ಅಷ್ಟು ಸಮಯದ ವರೆಗೂ ಪಂಜಾಬ ಸರಕಾರದ ಯಾರೋಬ್ಬರು ಪ್ರತಿನಿಧಿ ಅಲ್ಲಿಗೆ ಆಗಮಿಸದೇ ಇದ್ದುದು ಪ್ರಧಾನಿಯವರ ಜೀವಕ್ಕೆ ಅಪಾಯ ತಂದೊಡ್ಡುವ ಒಳಸಂಚು ಇರಬಹುದು ಎನ್ನುವ ಸಂಶಯ ಎಲ್ಲರಲ್ಲೂ ಮೂಡಿದೆ ಹೀಗಾಗಿಯೇ ಪ್ರಧಾನಿ ಮೋದಿಯವರು ಏರಪೋರ್ಟ ಅಧಿಕಾರಿಗೆ ನಾನು ಜೀವ ಸಹಿತ ವಾಪಸ್ಸಾಗಿದ್ದೇನೆ ಎಂದು ಹೇಳಿರುವುದು ಪುಷ್ಟಿ ನೀಡುತ್ತದೆ ಎಂದರು. 

ಪ್ರಧಾನಿಯಂತಹ ವ್ಯಕ್ತಿಗೆ ಸುರಕ್ಷತೆ ನೀಡುವಲ್ಲಿ ವಿಫಲವಾಗಿರುವ ಪಂಜಾಬ ಸರಕಾರ ಸಾಮಾನ್ಯ ವ್ಯಕ್ತಿಯನ್ನು ರಕ್ಷಿಸಲು ಸಾಧ್ಯ ಇಲ್ಲ ಇಂತಹ ಸರಕಾರವನ್ನು ತಕ್ಷಣ ವಜಾ ಗೊಳಿಸಬೇಕು ಮತ್ತು ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿ ಪಂಜಾಬನ ಜನರನ್ನು ರಕ್ಷಿಸಬೇಕು ಎಂದು ರಾಷ್ಟ್ರಪತಿಗಳನ್ನು ಆಗ್ರಹಿಸಿದ್ದಾರೆ. 

 ದೀಪಕ ಪಾಟೀಲ, ಮಲ್ಲಿಕಾರ್ಜುನ ಹಾಲಭಾವಿ, ರಾಹನ ಮಠಪತಿ, ಸತೀಶ ಅಪ್ಪಾಜಿಗೋಳ, ಶಾಂಭವಿ ಆಶ್ವಥಪೂರ, ಸದಾಶಿವ ಹುಂಜ್ಯಾಗೋಳ, ಪ್ರಸಾದ ಪಚಂಡಿ, ಮಹಾಂತೇಶ ಬಸ್ತವಾಡ, ಶಕುಂತಲಾ ಡೋಣವಾಡೆ, ಬಾಬು ಮಿರ್ಜೆ, ಸಂತೋಷ ಪಾಟೋಲ, ದುಂಡಪ್ಪ ಮೂಡಲಗಿ, ಸೂರಜ್ ಬಾಡಗೆ ಮುಂತಾದವರು ಇದ್ದರು. 


ಸುದ್ದಿ ಓದಿ