ಮನೆ, ಮಳಿಗೆಗಳಿಗೆ ತೆರಳಿ ಬಿಜೆಪಿ ಸದಸ್ಯತ್ವ ನೋಂದಣಿ
ಸಿಂದಗಿ 27: ಬಿಜೆಪಿ ಬಲಿಷ್ಟಗೊಳಿಸಲು ಸದಸ್ಯತಾ ಅಭಿಯಾನ ಅಂಗವಾಗಿ ಸಿಂದಗಿ ವಿಧಾನಸಭಾ ಕ್ಷೇತ್ರದ ಸುಂಗಠಾಣ ಗ್ರಾಮದಲ್ಲಿ ಗುರುವಾರ ಬಿಜೆಪಿ ಯುವ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಾ ಅವರು ಮನೆ ಮನೆಗೆ ತೆರಳಿ ಮತದಾರರನ್ನು ಮತ್ತು ಅಂಗಡಿಗಳಿಗೆ ತೆರಳಿ ಮಾಲೀಕರನ್ನು ಭೇಟಿಯಾಗಿ ಬಿಜೆಪಿ ಸದಸ್ಯತ್ವ ನೋಂದಣಿ ಮಾಡಿಸಲಾಯಿತು.
ನಂತರ ಅವರು ಮಾತನಾಡಿ, ದೇಶಾದ್ಯಂತ ಸ್ವಂತ ವ್ಯಾಪಾರ ಮಾಡುವವರಿಗೆ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ ಕೊಡುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟಿರುವ ಪ್ರಧಾನಿ ನರೇಂದ್ರ ಮೋದೀಜೀ ಅವರಿಗೆ ಬೆಂಬಲ ನೀಡಲು ತಮ್ಮ ಕುಟುಂಬ ಸದಸ್ಯರೆಲ್ಲರೂ ಬಿಜೆಪಿ ಸದಸ್ಯತ್ವ ಪಡೆಯುವಂತೆ ಮನವಿ ಮಾಡಲಾಯಿತು.
ಜಿಪಂ ಮಾಜಿ ಸದಸ್ಯ ಯಶವಂತ್ರಾಯಗೌಡ ರೂಗಿ, ಪಕ್ಷದ ಹಿರಿಯರಾದ ಮಡಿವಾಳಪ್ಪಗೌಡ ಪಾಟೀಲ, ರಾಮಚಂದ್ರ ಕಲ್ಲೂರ, ರುದ್ರುಗೌಡ ಬಿರಾದಾರ, ಮಂಡಲ ಸಂಚಾಲಕರಾದ ಸಿದ್ದರಾಮ್ ಆನಗೋಂಡ, ಸಹ ಸಂಚಾಲಕರಾದ ಎಸ್.ಆರ್. ಪಾಟೀಲ, ರವಿಗೌಡ ಬಿರಾದಾರ, ದೌವಲತರಾಯಗೌಡ ಬಿರಾದಾರ, ಭೀಮಾಶಂಕರ ಮಜ್ಜಗಿ, ಯುವ ಮಿತ್ರರಾದ ಸುನಿಲ ಪಾಟೀಲ, ಸುನೀಲ ಮಜ್ಜಿಗಿ, ಈರಣ್ಣ ಬಾಸಗಿ, ಕಲ್ಲಪ್ಪ ಬಶಟ್ಟಿ ಹಾಗೂ ಪಕ್ಷದ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.