ರಾಷ್ಟ್ರೀಯ

ಚೆಕ್ ಬೌನ್ಸ್ ಪ್ರಕರಣದಲ್ಲಿ ಬಿಜೆಪಿ ನಾಯಕನಿಗೆ ಎರಡು ವರ್ಷ ಜೈಲು, 3 ಕೋಟಿ ದಂಡ...!

ಚೆಕ್ ಬೌನ್ಸ್ ಪ್ರಕರಣದಲ್ಲಿ   ಬಿಜೆಪಿ ನಾಯಕನಿಗೆ  ಎರಡು ವರ್ಷ ಜೈಲು, 3 ಕೋಟಿ ದಂಡ...!

ಅಹ್ಮದಾಬಾದ್, ಅಕ್ಟೋಬರ್ 3: ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ  ಬಿಜೆಪಿಯ  ಮಾಜಿ ಸಂಸದ ದೇವ್ ಜಿ  ಫತೇಫರಾಕಿ  ಅವರಿಗೆ ಎರಡು ವರ್ಷ ಜೈಲು ಶಿಕ್ಷೆ  ಹಾಗೂ  2.97 ಕೋಟಿ  ದಂಡ ವಿಧಿಸಿ  ಗುಜರಾತ್  ನ್ಯಾಯಾಲಯ ಸಂಚಲನ ತೀರ್ಪು  ನೀಡಿದೆ.  

ರೂ 2.97 ಕೋಟಿ   ದಂಡ ಪಾವತಿಸಿದ್ದರೆ  ಹೆಚ್ಚುವರಿಯಾಗಿ  ಇನ್ನೂ ಮೂರು ತಿಂಗಳು  ಜೈಲು ಅನುಭವಿಸಬೇಕಾಗುತ್ತದೆ ಎಂದು  ಕಲೋಲ್  ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಎಸ್.  ಠಾಗೂರ್   ತೀರ್ಪು   ನೀಡಿದ್ದಾರೆ. 

ದಂಡದ ಹಣವನ್ನು  ಪಿರ್ಯಾದುದಾರೆ ಪ್ರಭಾ ಸಿನ್ಹ  ಠಾಗೂರ್‌  ಅವರಿಗೆ  ಪಾವತಿಸಲು ನ್ಯಾಯಾಧೀಶರು ಆದೇಶಿಸಿದ್ದಾರೆ.

2018 ರಲ್ಲಿ ಭೂಮಿ  ಖರೀದಿಗೆ ಸಂಬಂಧಿಸಿದಂತೆ ಠಾಗೂರ್ಬ ಳಿ ಪಡೆದು ಕೊಂಡಿದ್ದ 1,48,50,00 ಕೋಟಿ ರೂಪಾಯಿಗೆ  ಫತೇಫರಾಕಿ   ಚೆಕ್  ನೀಡಿದ್ದರು.  ಆದರೆ, ಚೆಕ್  ಬ್ಯಾಂಕ್ ನಲ್ಲಿ  ಮಾನ್ಯವಾಗಿಲ್ಲ. ನಂತರ ಫತೇಫರಾಕಿ   ಅವರಿಂದ ಯಾವುದೇ  ಉತ್ತರವೂ  ಬಾರದ ಕಾರಣ ಠಾಗೂರ್  ನ್ಯಾಯಾಲಯದ ಮೊರೆ ಹೋಗಿದ್ದರು.  2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಫತೇಫರಾಕಿ  ಗುಜರಾತ್‌ ಸುರೇಂದರ್ನ ಗರ ಲೋಕಸಭಾ ಕ್ಷೇತ್ರದಿಂದ  ಸಂಸದರಾಗಿ ಆಯ್ಕೆಯಾಗಿದ್ದರು.  ಆದರೆ, 2019 ರ  ಸಾರ್ವತ್ರಿಕ  ಚುನಾವಣೆಯಲ್ಲಿ ಬಿಜೆಪಿ ಅವರಿಗೆ ಟಿಕೆಟ್ ನೀಡಿರಲಿಲ್ಲ.

ಸುದ್ದಿ ಓದಿ