ಬೂತ್ ವಿಜಯ ಅಭಿಯಾನದಿಂದ ಬಿಜೆಪಿಗೆ ಅಧಿಕಾರ ನಿಶ್ಚಿತ: ಮ್ಯಾಗೇರಿ
ಶಿಗ್ಗಾವಿ 12: ಬೂತ್ ವಿಜಯ ಅಭಿಯಾನದಿಂದ ಬಿಜೆಪಿಗೆ ಅಧಿಕಾರ ನಿಶ್ಚಿತ ಎಂದು ಬಿಜೆಪಿ ತಾಲೂಕ ಅಧ್ಯಕ್ಷರ ಶಿವಾನಂದ ಮ್ಯಾಗೇರಿ ಹೇಳಿದರು. ತಾಲೂಕಿನ ಹನುಮರಹಳ್ಳಿಯ ಬೂತ್ನಲ್ಲಿ ವಿಜಯಬೂತ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಬೂತ್ ವಿಜಯಅ ಭಿಯಾನದಲ್ಲಿ ಬೂತ್ಅಧ್ಯಕ್ಷರು ಹಾಗೂ ಸಮಿತಿ ಪದಾಧಿಕಾರಿಗಳು ಪೇಜ್ ಪ್ರಮುಖರುಗ್ರಾಮ ಪಂಚಾಯತಿಯ ಪ್ರತಿನಿಧಿಗಳು ಹಿರಿಯರುಯುವಕರು ಮಹಿಳೆಯರು ಪೇಜ್ ಪ್ರಮುಖರ ನಿಯೋಜನೆ ವಾಟ್ಸಪ್ಗ್ರೂಪ್ರಚನೆ, ಮನ್ ಕಿ ಬಾತ್ಕಾರ್ಯಕ್ರಮ ಹಾಗೂ ಮನೆ ಮನೆ ಮೇಲೆ ಬಿಜೆಪಿ ಧ್ವಜಾರೋಹಣ ಮಾಡಿ ಬಿಜೆಪಿಯತತ್ವ ಸಿದ್ಧಾಂತಗಳನ್ನು ತಿಳಿಸಿ ಅಂತ್ಯೋದಯದ ಪರಿಕಲ್ಪನೆಗೆ ಸಾಕಾರ ನೀಡಿಕೇಂದ್ರದ ಸರಕಾರದ ಪ್ರಧಾನಿ ನರೇಂದ್ರಮೋದಿಯವರು ಹಾಗೂ ರಾಜ್ಯದ ಸರಕಾರದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಅವರ ಬಿಜೆಪಿ ಆಡಳಿತದಲ್ಲಿ ಸರ್ವರಿಗೂ ಸಮ ಬಾಳು ಸರ್ವರಿಗೂ ಸಮಪಾಲು ನೀತಿಯ ಆಡಳಿತವನ್ನು ನೀಡಿದ್ದು ನಾಡಿನ ಸಮಸ್ತ ಜನತೆಗೆ ಮತ್ತು ಬಿಜೆಪಿ ಕಾರ್ಯಕರ್ತರಿಗೆ ಸಂತೋಷತಂದಿದೆಎಂದರು.
ಕೆಎಂಎಫ್ ನಿರ್ದೇಶಕ ಬಸನಗೌಡ ಮೇಲಿನಮನಿ ಮಾತನಾಡಿ ಕಾರ್ಯಕರ್ತರು ಪಕ್ಷದ ಬೆನ್ನೆಲುಬುಅವರ ನಿರಂತರ ಪಕ್ಷದ ಚಟುವಟಿಕೆಯಿಂದ ಕೇಂದ್ರ ಮತ್ತುರಾಜ್ಯದಲ್ಲಿ ಸ್ವಚ್ಛ ಮತ್ತು ಸುಭದ್ರ ಆಡಳಿತ ಮಾಡುತ್ತಿದ್ದೇವೆ ಅದೇ ಮಾದರಿಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆಲ್ಲುವಲ್ಲಿ ಮತ್ತೆ ಪ್ರತಿ ಬೂತಗಳು ಸದೃಢವಾಗಿಕೇಂದ್ರ ಮತ್ತುರಾಜ್ಯ ಸರಕಾರಗಳ ಯೋಜನೆ ಮತ್ತು ಮುಂದಾಲೋಚನೆಗಳನ್ನು ಪ್ರತಿ ಒಬ್ಬರಿಗೂ ಬೂತ್ ಮಟ್ಟದಲ್ಲಿ ಮುಟ್ಟಿಸಬೇಕು ಕಟ್ಟಕಡೆ ವ್ಯಕ್ತಿಗೂ ನಮ್ಮ ಕಾರ್ಯಕರ್ತರು ಸರಕಾರದ ಯೋಜನೆ ತಲುಪಿಸುವಲ್ಲಿ ಯಶಸ್ವಿ ಪಾತ್ರವಹಿಸಬೇಕುಎಂದರು.
ರೇಣುಕನಗೌಡ ಪಾಟೀಲ್ ಮಾತನಾಡಿ ಪ್ರತಿ ಬೂತ್ನಲ್ಲಿರುವ ಪದಾಧಿಕಾರಿಗಳು ಪ್ರತಿಯೊಂದು ಮನೆ ಮನೆ ತೆರಳಿ ಯೋಜನೆಗಳನ್ನು ತಿಳಿಸಬೇಕು ನಮ್ಮ ಭೂತನಲ್ಲಿ ಮಾಡಿರುವ ನಮ್ಮ ಸರಕಾರದ ಕಾಮಗಾರಿಗಳು ಯೋಜನೆಗಳು ಉಜ್ವಲ ಯೋಜನೆ ಜನಧನ್ಖಾತೆ ಮುಖಾಂತರ ನೇರವಾಗಿ ಫಲಾನುಭವಿಗಳಿಗೆ ಸಹಾಯಧನ. ಕುಡಿಯುವ ನೀರು ಬೆಳಕು ರಸ್ತೆ ಸ್ವಚ್ಛತೆ ಆರೋಗ್ಯ ಮೂಲಭೂತ ಸೌಕರ್ಯ ಮತ್ತು ಮಠ ಮಂದಿರಗುಡಿ ಮಸೀದಿ ಬಡವರಿಗೆ ಮತ್ತು ನಿರಾಶ್ರಿತರಿಗೆ ಮನೆಗಳ ನಿರ್ಮಾಣ ರೈತರಿಗೆ ಬೆಳೆ ಹಾನಿ ಬೆಳೆ ವಿಮೆ ಅಂಗವಿಕಲರಿಗೆ ವಿಧವಯರಿಗೆ ಪಿಂಚಣಿ ಯೋಜನೆ ಸಹಾಯಧನದ ಯೋಜನೆಗಳು ನೇರ ಸಾಲ ಯೋಜನೆ .ಗಂಗಾ ಕಲ್ಯಾಣ ಪಶುಭಾಗ್ಯ . ಸಹಾಯಧನದ ಕೃಷಿ ಉಪಕರಣಗಳು ಬೀಜಗೊಬ್ಬರ ಸೇರಿ ಹತ್ತು ಹಲವಾರು ಯೋಜನೆಗಳನ್ನು ಒಂದಿಲ್ಲಾಒಂದು ಸಹಾಯವನ್ನು ಪ್ರತಿಯೊಬ್ಬರು ಪಡೆದಿದ್ದೇವೆ ಎಂಬುದನ್ನು ಮನವರಿಕೆ ಮಾಡಿ ಶಾಂತಿ ಸುರಕ್ಷತೆ ಭದ್ರತೆ ಅಭಿವೃದ್ಧಿಯ ಆಡಳಿತವನ್ನು ಪಡೆಯಲು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಲು ಪ್ರತಿಯೊಬ್ಬರು ಪಾತ್ರ ಬಹಳ ಮುಖ್ಯವಾಗಿದೆಎಂದರು.
ಈ ಸಂದರ್ಭದಲ್ಲಿ ಬಸನಗೌಡ ರಾಮನಗೌಡ್ರ, ಮಲ್ಲಿಕಾರ್ಜುನ ಹಡಪದ, ರವಿ ಬಿಶೆಟ್ಟಿ, ಶೇಖಣ್ಣ ನೀರಲಗಿ, ಶಿವಪ್ಪ ಆಡಿನ, ಶಿದ್ದು ಆಡಿನ,ರಾಜೇಶ್ದೊಡ್ಡಮನಿ, ಫಕ್ಕೀರಗೌಡ್ರ ಗುಡ್ಡನಗೌಡರ, ಪರಶುರಾಮ ಕಡೆಮನಿ, ನಿಂಗಪ್ಪ ಎಲಿವಾಳ್, ರಮೇಶ್ ಕುರಿಗಾರ, ಬೂತ್ ಅಧ್ಯಕ್ಷರು ಪದಾಧಿಕಾರಿಗಳು ಪೇಜ್ ಪ್ರಮುಖರು ಹಾಗೂ ಗ್ರಾಮದ ಗುರುಹಿರಿಯರು ಯುವಕರು ಪಾಲ್ಗೊಂಡಿದ್ದರು.