ರಜನಿಕಾಂತ್ ರಾಜಕೀಯಪಕ್ಷ ಸ್ಥಾಪನೆ ಹಿಂದೆ ಬಿಜೆಪಿ, ಆರ್ ಎಸ್ ಎಸ್ ಕೈವಾಡ; ತಿರುಮಾವಳವನ್ ಆರೋಪ
ಚೆನ್ನೈ,
ಡಿ 7: ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್
ರಾಜಕೀಯ ಪಕ್ಷ ಆರಂಭಿಸುವುದರ
ಹಿಂದೆ ಬಿಜೆಪಿ, ಆರ್ಎಸ್ಎಸ್ ಗಳ ಕೈವಾಡವಿದೆ ಎಂದು ವಿಸಿಕೆ ನಾಯಕ ತಿರುಮಾವಳವನ್ ಆರೋಪಿಸಿದ್ದಾರೆ.
ಭಾನುವಾರ
ಮಾಧ್ಯಮಗಳೊಂದಿಗೆ ಮಾತನಾಡಿದ ತಿರುಮಾವಳವನ್, ರಜನಿಕಾಂತ್ ಅವರು ಪಕ್ಷ ಆರಂಭಿಸುವ ಬಗ್ಗೆ ಸ್ವತಂತ್ರ
ನಿರ್ಧಾರ ತೆಗೆದುಕೊಂಡಂತೆ ಕಾಣುತ್ತಿಲ್ಲ. ರಾಜಕೀಯ
ಪಕ್ಷ ಆರಂಭಿಸಬೇಕೆಂಬ ಲಕ್ಷಣಗಳು ಅವರಲ್ಲಿ
ಮೊದಲು ಕಂಡುಬರುತ್ತಿರಲಿಲ್ಲ ಎಂಬ ಶಂಕೆ
ವ್ಯಕ್ತಪಡಿಸಿದ್ದಾರೆ.
ರಜನಿಕಾಂತ್ ಯಾರಿಗೋ ಭಯಪಟ್ಟು, ಒತ್ತಡಗಳಿಗೆ ಒಳಗಾಗಿ ರಾಜಕೀಯ ಪಕ್ಷ ಆರಂಭಿಸುವ ಹೇಳಿಕೆ
ನೀಡಿದಂತಿದೆ ಎಂದು ಅವರು ಹೇಳಿದ್ದಾರೆ. ಒತ್ತಡಗಳಿಗೆ ಒಳಗಾಗಿ ರಾಜಕೀಯಕ್ಕೆ ಬರುವ ಪರಿಸ್ಥಿತಿ
ರಜನಿಕಾಂತ್ ಅವರಿಗೆ ಒದಗಿರುವುದು ತಮಗೆ ವಿಸ್ಮಯ ಉಂಟುಮಾಡಿದೆ ಎಂದಿದ್ದಾರೆ.
ಸಿಪಿಎಂ ಮುಖಂಡ ಬಾಲಕೃಷ್ಣನ್ ಮಾತನಾಡಿ.. ರಜನಿ ಕಾಂತ್ ಹಗಲು ಗನಸು ಕಾಣುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಪಕ್ಷ ಆರಂಭಿಸಿ, ಚುನಾವಣೆ ಎದುರಿಸುವುದು ಯಾವುದೋ ಸಿನಿಮಾ ಚಿತ್ರೀಕರಣ ಎಂಬಂತೆ ಅವರು ಭಾವಿಸಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ಯಾರು ಬೇಕಾದರೂ ರಾಜಕೀಯಕ್ಕೆ ಬರಬಹುದು.. ಆದರೆ ಅದಕ್ಕೆ ತಕ್ಕಂತೆ ಶ್ರಮಿಸಬೇಕು ಎಂದು ಸಲಹೆ ನೀಡಿದ್ದಾರೆ.
ನಾಮ್ ತಮಿಳರ್ ಕಚ್ಚಿ ನಾಯಕ ಸೀಮನ್ ಮಾತನಾಡಿ... ತಮ್ಮ ಮಕ್ಕಲ್ ಮಂಡ್ರದಲ್ಲಿ ಮೂರು ವರ್ಷಗಳಿಂದ ಕೆಲಸ ಮಾಡುತ್ತಿರುವವರಲ್ಲಿ ಯಾವುದೇ ಸಮರ್ಥ ನಾಯಕರು ಅವರಿಗೆ ಕಾಣಲಿಲ್ಲವೇ ..? ಎಂದು ಪ್ರಶ್ನಿಸಿದರು. ಬಿಜೆಪಿಯಿಂದ ಬಂದ ಅರ್ಜುನ್ ಮೂರ್ತಿ, ಎಲ್ಲಾ ಪಕ್ಷಗಳನ್ನೂ ನೋಡಿ ಬಂದ ತಮಿಳರವಿ ಮಣಿವಣ್ಣನ್ ಅವರಿಗೆ ಮಹತ್ವದ ಸ್ಥಾನ ನೀಡಿರುವುದನ್ನು ನೋಡಿದರೆ ರಜನಿಕಾಂತ್ ಅವರಿಗೆ ರಾಜಕೀಯದ ಮೇಲೆ ಅವರಿಗೆ ಎಷ್ಟು ಹಿಡಿತವಿದೆ ಎಂಬುದು ಅರ್ಥವಾಗುತ್ತದೆ ಎಂದು ವ್ಯಂಗ್ಯವಾಡಿದರು. ತಮ್ಮನ್ನು ನಂಬಿಕೊಂಡವರನ್ನು ಕಡೆಗಣಿಸಿ ಹೊರಗಿನವರಿಗೆ ಮಹತ್ವದ ಸ್ಥಾನಗಳಲ್ಲಿ ಕೂರಿಸಿರುವುದನ್ನು ಅವರ ಅಭಿಮಾನಿಗಳೇ ತೀವ್ರವಾಗಿ ವಿರೋಧಿಸುತ್ತಾರೆ ಎಂದರು.