ಶಿಗ್ಗಾವ್

ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ನೀಡಿದ್ದು ಭಾಜಪ:ನರಹರಿಕಟ್ಟಿ

ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ನೀಡಿದ್ದು ಭಾಜಪ:ನರಹರಿಕಟ್ಟಿ

ಲೋಕದರ್ಶನ ವರದಿ 

ಶಿಗ್ಗಾವಿ 12:  ಬಿಜೆಪಿ ಆಡಳಿತದಲ್ಲಿ ಸರ್ವರಿಗೂ ಸಮ ಬಾಳು ಸರ್ವರಿಗೂ ಸಮಪಾಲು ನೀತಿಯ ಆಡಳಿತವನ್ನು ನೀಡಿದ್ದು ನಾಡಿನ ಸಮಸ್ತ ಜನತೆಗೆ ಮತ್ತು ಬಿಜೆಪಿ ಕಾರ್ಯಕರ್ತರಿಗೆ ಸಂತೋಷ ತಂದಿದೆ ಎಂದು ರಾಜ್ಯಯುವ ಮೋರ್ಚಾ ಸದಸ್ಯ ನರಹರಿಕಟ್ಟಿ ಹೇಳಿದರು. 

ತಾಲೂಕಿನ ಬಂಕಾಪೂರದಲ್ಲಿ ನಡೆದ ಬೂತ ಸಮಿತಿರಚನೆ, ಬೂತ ಸಮಿತಿ ಪರಾಮರ್ಶೆ ಮತ್ತು ಪರೀಶೀಲನೆ ವಿಜಯ ಬೂತ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕೇಂದ್ರ ಮತ್ತುರಾಜ್ಯದಲ್ಲಿ ಸ್ವಚ್ಛ ಮತ್ತು ಸುಭದ್ರ ಆಡಳಿತ ಮಾಡುತ್ತಿದ್ದೇವೆ ಅದೇ ಮಾದರಿಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಗೆಲ್ಲುವಲ್ಲಿ ಮತ್ತೆ ಪ್ರತಿ ಬೂತಗಳು ಸದೃಢವಾಗಿಕೇಂದ್ರ ಮತ್ತುರಾಜ್ಯ ಸರಕಾರಗಳ ಯೋಜನೆ ಮತ್ತು ಮುಂದಾಲೋಚನೆಗಳನ್ನು ಪ್ರತಿಒಬ್ಬರಿಗೂ ಬೂತ್ ಮಟ್ಟದಲ್ಲಿ ಮುಟ್ಟಿಸಬೇಕುಕಟ್ಟಕಡೆ ವ್ಯಕ್ತಿಗೂ ನಮ್ಮ ಕಾರ್ಯಕರ್ತರು ಸರಕಾರದ ಯೋಜನೆ ತಲುಪಿಸುವಲ್ಲಿ ಯಶಸ್ವಿ ಪಾತ್ರವಹಿಸಿ ನಮ್ಮ ಭೂತನಲ್ಲಿ ಮಾಡಿರುವ ನಮ್ಮ ಸರಕಾರದ ಕಾಮಗಾರಿಗಳು ಯೋಜನೆಗಳು ಮನವರಿಕೆ ಮಾಡಿ ಶಾಂತಿ ಸುರಕ್ಷತೆ ಭದ್ರತೆ ಅಭಿವೃದ್ಧಿಯ ಆಡಳಿತವನ್ನು ಪಡೆಯಲು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಲು ಪ್ರತಿಯೊಬ್ಬರು ಪಾತ್ರ ಬಹಳ ಮುಖ್ಯವಾಗಿದೆಎಂದರು. 

ಈ ಸಂದರ್ಭದಲ್ಲಿ ಬಸವರಾಜ ನಾರಾಯಣಪೂರ ಬೂತ್ ಅಧ್ಯಕ್ಷರು ಪದಾಧಿಕಾರಿಗಳು ಪೇಜ್ ಪ್ರಮುಖರು ಹಾಗೂ  ಪಟ್ಟಣದ ಗುರುಹಿರಿಯರು ಯುವಕರು  ಪಾಲ್ಗೊಂಡಿದ್ದರು. 


ಸುದ್ದಿ ಓದಿ