ರಾಜ್ಯದಲ್ಲಿ ಬಿಜೆಪಿ ಸರಕಾರ ಮತ್ತೆ ಆಡಳಿತಕ್ಕೆ ಬರಲಿದೆ : ಶ್ರೀಕಾಂತ ದುಂಡಿಗೌಡ್ರ
ಶಿಗ್ಗಾವಿ 30: ರಾಜ್ಯದಲ್ಲಿ ಬಿಜೆಪಿ ಸರಕಾರ ಮತ್ತೆ ಆಡಳಿತಕ್ಕೆ ಬರಲಿದ್ದು, ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು ಪಕ್ಷದ ಬಲರ್ವಧನೆಗಾಗಿ ಒಗ್ಗಟಿನ ಬೆಂಬಲ ಅವಶ್ಯವಾಗಿದೆ ಎಂದು ಬಿಜೆಪಿ ಮುಖಂಡ ಶ್ರೀಕಾಂತ ದುಂಡಿಗೌಡ್ರ ಹೇಳಿದರು.
ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ನಡೆದ ತಾಲೂಕ ಬಿಜೆಪಿ ಸಂಘಟನಾ ಸಭೆಯಲ್ಲಿ ಮಾತನಾಡಿದ ಅವರು ಸಂಸದ ಬಸವರಾಜ ಬೊಮ್ಮಾಯಿ ಅವರು ತಮ್ಮ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಹಿಂದುಳಿದ ತಾಲೂಕಿನ ಹಣೆಪಟ್ಟಿ ತೆಗೆದು ಹಾಕಿದ್ದಾರೆ. ಪಟ್ಟಣದ ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜಗೆ ಏರಿಸುವ ಮೂಲಕ ಜನರಿಗೆ ಆರೋಗ್ಯಕರ ವಾತಾವರಣ ಮೂಡಿದ್ದಾರೆ. ಮಹಿಳಾ ಗಾರ್ಮೆಂಟಗಳನ್ನು ಸ್ಥಾಪಿಸುವ ಜತೆಗೆ ಮಹಿಳೆಯರಿಗೆ, ಯುವಕರಿಗೆ ಉದ್ಯೋಗ ಕಲ್ಪಿಸಿದ್ದಾರೆ. ಹೀಗೆ ಹತ್ತಾರು ಯೋಜನೆಗಳನ್ನು ಂಜುರಾತಿ ಮಾಡುವ ಮೂಲಕ ಅಭಿವೃದ್ಧಿಪರ ಕಾರ್ಯಗಳಿಗೆ ಆಧ್ಯತೆ ನೀಡಿದ್ದಾರೆ ಎಂದರು.
ಪಕ್ಷದ ಮುಖಂಡರು ಉಪಚುನಾವಣೆಗೆ ಟಿಕೆಟ್ ನೀಡಲಿದ್ದಾರೆ ಎಂಬ ವಿಶ್ವಾಸವಿದೆ. ಅದಕ್ಕೆ ತಮ್ಮೆಲ್ಲರ ಆಶೀವಾದವು ಸಹ ಮುಖ್ಯವಾಗಿದೆ. ಸಂಸದ ಬಸವರಾಜ ಬೊಮ್ಮಾಯಿ ಅವರ ಮಾರ್ಗದರ್ಶನಂದಂತೆ ಮುಂದೆ ಪ್ರತಿಯೊಂದು ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುತ್ತೇನೆ.
ಈಗಾಗಲೆ ಅವರು ನುಡಿದ, ತೋರಿಸಿದ ಮಾರ್ಗದಲ್ಲಿ ಸಾಗಿ ಬಂದಿದ್ದೇನೆ. ಪಕ್ಷದ ಬೆಳವಣಿಗೆಗೆ ಶ್ರಮಿಸಿದ್ದಾನೆ. ತಮ್ಮ ಭರತ ಸೇವಾ ಸಂಸ್ಥೆ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಸುಧಾರಣೆ, ಕೆರೆಗಳ ಹೋಳೆತ್ತುವುದು ಮತ್ತು ವಿವಿಧ ಗ್ರಾಮಗಳಲ್ಲಿನ ಕುಡಿಯುವ ನೀರ, ಸ್ವಚ್ಚತೆ, ರಸ್ತೆ ಸೇರಿದಂತೆ ಅನೇಕ ಅಭಿವೃದ್ದೀಪರ ಕಾರ್ಯಗಳನ್ನು ಮಾಡುವ ಮೂಲಕ ಜನಮನಕ್ಕೆ ಹತ್ತಿರವಾಗಿದ್ದೇನೆ. ನಿಮ್ಮಪ್ರೀತಿ ವಿಶ್ವಾಸದಂತೆ ನಡೆಯುತ್ತೇನೆ. ಸ್ಥಳೀಯ ಅಭ್ಯರ್ಥಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಮುಖಂಡ ಮಲ್ಲೇಶಪ್ಪ ಹರಿಜನ ಮಾತನಾಡಿ, ಕಾಂಗ್ರೆಸ್ ಸರಕಾರ ಮಂಜುರಾತಿ ನೀಡಿದ ಗ್ಯಾರಂಟಿ ಯೋಜನೆಗಳಿಗೆ ಸರಿಯಾದ ಗ್ಯಾರಂಟಿ ಸಿಗದಂತಾಗಿದೆ. ಈ ಯೋಜನೆಗಳಿಂದ ಕುಟುಂಬದಲ್ಲಿನ ಸದಸ್ಯರ ನಡುಗೆ ಕದನ ಮೂಡಿದಂತಾಗಿದೆ. ಹೀಗಾಗಿ ಜನ ಇವುಗಳ ವಿರುದ್ಧ ಬೇಸರ ವ್ಯಕ್ತ ಪಡಿಸುತ್ತಿದ್ದಾರೆ. ಹೀಗಾಗಿ ಮುಂಬರುವ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬೆಂಬಲಿಸಲು ಮತದಾರರು ಮುಂದಾಗಿದ್ದಾರೆ. ಹೀಗಾಗಿ ಬಿಜೆಪಿ ಮತ್ತೆ ಆಡಳಿತಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಹಿರಿಯ ಮುಖಂಡ ಎಂ.ಎನ್.ವೆಂಕೋಜಿ ಮಾತನಾಡಿ, ಸಮಾಜಮುಖಿ ಕಾರ್ಯದಲ್ಲಿ ಶ್ರೀಕಾಂತ ದುಂಡಿಗೌಡ್ರ ಕಾರ್ಯ ನಿರತರಾಗಿದ್ದು, ಸಾಕಷ್ಟು ಜನಪರ ಯೋಜನೆಗಳಿಗೆ ಬೆಂಬಲಿಸಿದ್ದಾರೆ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಪ್ರತಿ ಗ್ರಾಮಗಳ ಜನರಿಗೆ ನೆರವಾಗಿದ್ದಾರೆ. ಹೀಗಾಗಿ ಈ ಬಾರಿ ಅವರಿಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ತಮ್ಮ ಬೆಂಬಲ ಮುಖ್ಯವಾಗಿದೆ ಎಂದರು.
ಮುಖಂಡ ಎಂ.ಎನ್.ಕೋಟಿ, ವೀರಭದ್ರ್ಪ ಮೆಳ್ಳಿ, ನಾಗರಾಜ ಕೋಟಿ, ಮಾತನಾಡಿದರು.ಮುಖಂಡರಾದ ಬಿ.ಡಿ.ಇನಾಮತಿಗೌಡ್ರ, ದೇವಣ್ಣ ಚಾಕಲಬ್ಬಿ, ತಿಪ್ಪಣ್ಣ ಸಾತಣ್ಣವರ, ಫಕ್ಕೀರ್ಪ ಕುಂದೂರ, ಷಣ್ಮುಖಪ್ಪ ಮೇಣಸಿನಕಾಯಿ, ಈರಣ್ಣ ಮೇಟಿ, ರುದ್ರ್ಪ ಉಳ್ಳಾಗಡ್ಡಿ, ಬಸವರಾಜ ಮೇಟಿ, ಸಿದ್ದಪ್ಪ ಹಕಾರಿ, ವಿರೂಪಾಕ್ಷಪ್ಪ ಉಳ್ಳಾಗಡ್ಡಿ, ಯಲ್ಲಪ್ಪ ಕಮಡೋಳ್ಳಿ, ನಿಂಗಪ್ಪ ಉಳ್ಳಾಗಡ್ಡಿ, ರಮೇಶ ಸಾತಣ್ಣವರ, ಈಶ್ವಗೌಡ ಪಾಟೀಲ, ಚಂದ್ರಣ್ಣ ಹೆಬ್ಬಳ್ಳಿ, ಶಿವಾನದ ವಡವಟ್ಟಿ, ಬಸವರಾಜ ಲಂಗೋಟಿ ಸೇರಿದಂತೆ ಅನೇಕ ಮುಖಂಡರು ಇದ್ದರು.