ಕಾಂಗ್ರೆಸ್ ಸರಕಾರದಲ್ಲಿ ದಲಿತರ ಹಣ ಬೇರೆ ಯೋಜನೆಗೆ ಬಳಸಿದ್ದು ಪ್ರಶ್ನೆ ಮಾಡಿಲ್ಲ: ಜಿಗಜಿಣಗಿ
ಸಿಂದಗಿ 06: ಕಾಂಗ್ರೆಸ್ ಪಕ್ಷದವರು ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಮಾತನಾಡದೇ ಬರೀ ರಮೇಶ ಜಿಗಜೀಣಗಿ ಟೀಕಿಸುವುದರಲ್ಲಿ ಕಾಲಹಣರಣ ಮಾಡಲು ಮುಂದಾಗಿದ್ದಾರೆ. ರಾಜ್ಯ ಸರಕಾರದಲ್ಲಿ ದಲಿತರಿಗೆ ಬಳಕೆ ಮಾಡಲಾಗುತ್ತಿರುವ ಎಸ್ಸಿಪಿ ಟಿಎಸ್ಪಿ ಅನುದಾನ ಅಂದಾಜು 25 ಸಾವಿರ ಕೋಟಿ ಬೇರೆ ಯೋಜನೆಗೆ ಬಳಕೆ ಮಾಡಿದ್ದು ಪ್ರಶ್ನೆ ಮಾಡದಿರುವುದು ದಲಿತರಿಗೆ ಮಾಡಿದ ದೊಡ್ಡ ದುರಂತವಾಗಿದೆ ಎಂದು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜೀಣಗಿ ಚಾಟಿ ಬಿಸಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ 10 ವರ್ಷದ ಅವಧಿಯಲ್ಲಿ ಸಾಕಷ್ಠು ಅನುದಾನ ತಂದು ಅಭಿವೃದ್ಧಿ ಪಡಿಸಿದ್ದೇನೆ ಅದು ಪ್ರಚಾರಕ್ಕೆ ತಂದಿಲ್ಲ. ಸಧ್ಯದ ಲೋಕಸಭಾ ಚುನಾವಣಾ ಪ್ರಚಾರವು ಹೋರ್ತಿ ರೇವಣಸಿದ್ದೇಶ್ವರ ಆಶ್ರಮದಿಂದ ಪ್ರಾರಂಭಿಸಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅಲೆ ಇಡೀ ದೇಶ್ಯಾಧ್ಯಂತ ಪ್ರಾರಂಭವಾಗಿದ್ದು ಇದು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಇದೇ ನಾನು ಸಮಾಜ ಕಲ್ಯಾಣ ಸಚಿವರಿದ್ದ ಸಂದರ್ಭದಲ್ಲಿ ದಲಿತರಿಗೆ ಬಳಸಬೇಕಾದ ಅನುದಾನ ಬೇರೆ ಯೋಜನೆಗೆ ವರ್ಗಾವಣೆ ಮಾಡುತ್ತೇವೆ ಎಂದು ಚರ್ಚೆ ನಡೆದರೆ ಅಂದು ನನ್ನ ಸಚಿವ ಸ್ಥಾನಕ್ಕೆ ರಾಜೆನಾಮೆ ಸಲ್ಲಿಸಲು ಮುಂದಾದಾಗ ಆ ಅನುದಾನ ದಲಿತರ ಬಳಕೆ ನೀಡುತ್ತೇನೆ ಎಂದಾಗ ರಾಜಾನಾಮೆ ಹೀಂಪಡೆದಿದ್ದೇವೆ ಇಂದು ದಲಿತ ಎನಿಸಿಕೊಂಡ ಎಚ್.ಸಿ.ಮಹದೇವಪ್ಪ ಅವರೇ ಸಮಾಜ ಕಲ್ಯಾಣ ಸಚಿವರಿದ್ದಾರೆ. ಎಸ್ಸಿಪಿ ಅನುದಾನದ ಬಗ್ಗೆ ಏಕೆ ಚರ್ಚೆ ನಡೆಸದೇ ದಲಿತರಿಗೆ ಅನ್ಯಾಯ ವೆಸಗುತ್ತಿದ್ದಾರೆ ಇದನ್ನು ದಲಿತರ ಬಗ್ಗೆ ಚಿಂತನೆ ನಡೆಸದವರು ಹೇಗೆ ನ್ಯಾಯ ಒದಗಿಸಿಕೊಡುತ್ತಾರೆ. ಟೀಕೆ ಮಾಡುವುದನ್ನು ಬಿಟ್ಟು ನಿಮ್ಮ ಸರಕಾರದ ಸಾಧನೆ ತಿಳಿಸಿ ಎಂದು ಎದುರುತ್ತರ ನೀಡಿದರು.
ಮಾಜಿ ವಿಧಾನ ಪರಿಷತ್ತ ಸದಸ್ಯ ಅರುಣ ಶಹಾಪುರ ಮಾತನಾಡಿ, ಕಾಂಗ್ರೆಸ್ರಿಗೆ ಯಾವುದೇ ಅಭಿವೃದ್ಧಿ ಮಾತನಾಡಲು ವಿಷಯವಿಲ್ಲ ಅದಕ್ಕೆ ಅನಗತ್ಯವಾಗಿ ಜಿಗಜಿಗಣಗಿಯವರನ್ನು ಹಿಯಾಳೀಸುವ ಟೀಕೆ ಟಿಪ್ಪಣೆ ಮಾಡುವ ಮೂಲಕ ಅವಮಾನಿಸುತ್ತಿದ್ದಾರೆ. ಅವರ 10 ವರ್ಷದ ಅವಧಿಯಲ್ಲಿ ಈ ಜಿಲ್ಲೆಯ ಅಭಿವೃಧ್ಧಿಗೆ 1 ಲಕ್ಷ ಕೋಟಿ ಅನುದಾನ ತಂದಿದ್ದಾರೆ ಇದರ ಬಗ್ಗೆ ಪುಸ್ತಕ ರೂಪದಲ್ಲಿ ಕೈಪಿಡಿ ಹೊರ ತಂದಿದ್ದಾರೆ ಅದರ ಸತ್ಯಾಸತ್ತತೆಯನ್ನು ಅವಲೋಕನ ಮಾಡಿ ವಿನಾಕಾರಣ ಚರ್ಚೆ ಬೇಡ. 10 ವರ್ಷದ ಅವಧಿಯಲ್ಲಿ ಯಾವ ಕ್ಷೇತ್ರ ನೋಡಿಲ್ಲ ಅನ್ನುವವರು ಒಂದು ಪಕ್ಷದ ಜಿಲ್ಲಾಧ್ಯಕ್ಷನಾಗಿ 8 ಕ್ಷೇತ್ರಗಳನ್ನು ಒಂದು ಬಾರಿಯಾದವರು ನೋಡಿದ್ದಾರಾ ಎಂದು ಪ್ರಶ್ನೆ ಎಸೆದರು. ಬೇರೆಯವರ ಮೇಲೆ ಕೆಸರು ಎರಚುವುದನ್ನು ಬಿಟ್ಟು ನಿಮ್ಮ ಸಾಧನೆ ಬಗ್ಗೆ ಹೇಳಿ. ಈ ಬಾರಿಯ ಚುನಾವಣೆಯಲ್ಲಿ ಜಿಗಜೀಣಗಿ ಆಗುವಲ್ಲಿ ಯಾರಿಂದಲೂ ತಪ್ಪಿಸಲು ಆಗದು ಅಲ್ಲದೆ ದೇಶದ ಪ್ರಧಾನಿ ಮೋದಿ ಅವರು ಆಗುವುದು ಶತಸಿದ್ಧ ಎಂದು ಭವಿಷ್ಯ ನುಡಿದರು.
ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ಬಂಜಾರ ಸಮೂದಾಯಕ್ಕೆ ತುಚ್ಯವಾಗಿ ಮಾತನಾಡಿದ್ದಾರೆ ಎಂದು ವಿನಾಕಾರಣ ಗೊಂದಲ ಸೃಷ್ಠಿಸಿದ್ದಾರೆ ನಮ್ಮ ಪಕ್ಷದಿಂದ ಬಂಜಾರ ಸಮೂದಾಯಕ್ಕೆ ಯಾವುದೇ ಅನ್ಯಾಯವಾಗಿಲ್ಲ. ಕಾಂಗ್ರೆಸ್ನವರು ರಾಜ್ಯದಲ್ಲಿ ಒಬ್ಬರಿಗೂ ಟಿಕೇಟ ನೀಡಿಲ್ಲ ಆದರೆ ಬಿಜೆಪಿಯಲ್ಲಿ ಎಲ್ಲ ಸಮೂದಾಯಕ್ಕೆ ನ್ಯಾಯ ಕೊಟ್ಟಂತೆ ಕಲಬುರ್ಗಿಗೆ ಬಂಜಾರ ಸಮೂದಾಯ ಟಿಕೇಟ ನೀಡಿ ನ್ಯಾಯ ಒದಗಿಸಿಕೊಟ್ಟಿದೆ. ವಿನಾಕಾರಣ ಟೀಕೆ ಟಿಪ್ಪಣೆ ಬಿಟ್ಟು ಚುನಾವಣೆ ಎದುರಿಸಿ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಜೋಗುರ, ಸಿದ್ದು ಬುಳ್ಳಾ, ಸಿದ್ದಸಲಿಂಗಯ್ಯ ಹಿರೇಮಠ ಇದ್ದರು.