ಉಗ್ರರಿಂದ ಗಾಯಗೊಂಡಿದ್ದ ಬಿಜೆಪಿ ಕಾರ್ಯಕರ್ತ ಸಾವು
ಶ್ರೀನಗರ,
ಆಗಸ್ಟ್ 10: ಭಾನುವಾರ
ಬದ್ಗಂನಲ್ಲಿ ಉಗ್ರರ ಗುಂಡೇಟಿನಿಂದ ತೀವ್ರವಾಗಿ
ಗಾಯಗೊಂಡ ಭಾರತೀಯ ಜನತಾ ಪಕ್ಷದ
(ಬಿಜೆಪಿ) ಕಾರ್ಯಕರ್ತ ಸೋಮವಾರ ಬೆಳಿಗ್ಗೆ ಶ್ರೀನಗರ
ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕಾಶ್ಮೀರದ ಬಿಜೆಪಿ ಇನ್‌ಚಾರ್ಜ್ ಮಾಧ್ಯಮ ವಿಭಾಗದ .ಅಬ್ದುಲ್ ಹಮೀದ್ ನಜರ್ ಅವರು ಎಸ್‌ಎಂಎಚ್‌ಎಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ
ನಜಾರ್ ಅವರು ತಮ್ಮ ಮನೆಯ ಸಮೀಪ ವಾಯುವಿಹಾರ ಮಾಡಲು ಹೊರಟಿದ್ದಾಗ ಮಧ್ಯ ಕಾಶ್ಮೀರ ಜಿಲ್ಲೆಯ ಬದ್ಗಂನಲ್ಲಿ ಉಗ್ರರು ಗುಂಡು ಹಾರಿಸಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದರು ಆದಾಗ್ಯೂ, ಅವರನ್ನು ತಕ್ಷಣವೇ ಎಸ್‌ಎಂಎಚ್‌ಎಸ್ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತಾದರೂ ಪ್ರಯೋಜನವಾಗದೆ ಮೃತಪಟಿದ್ದಾರೆ.