ಚಿಕ್ಕೋಡಿ

ರಾಜ್ಯದಲ್ಲಿ ಬಿಜೆಪಿ ಎಸ್‌ಸಿ ಮೋರ್ಚಾದಿಂದ ನಾಳೆಯಿಂದ ಸಂವಿಧಾನ ಗೌರವ ಅಭಿಯಾನ: ಪಿ.ರಾಜೀವ

ರಾಜ್ಯದಲ್ಲಿ ಬಿಜೆಪಿ ಎಸ್‌ಸಿ ಮೋರ್ಚಾದಿಂದ  ನಾಳೆಯಿಂದ ಸಂವಿಧಾನ ಗೌರವ ಅಭಿಯಾನ: ಪಿ.ರಾಜೀವ

ಲೋಕದರ್ಶನ ವರದಿ 


ಚಿಕ್ಕೋಡಿ 24: ಬಿಜೆಪಿ ಎಸ್‌ಸಿ ಮೋರ್ಚಾ ಘಟಕದಿಂದ ರಾಜ್ಯದ 37 ಸಂಘಟನಾತ್ಮಕ ಜಿಲ್ಲೆಗಳಲ್ಲಿ ನ,26 ರಿಂದ ಡಿ.6ರವರೆಗೆ ಸಂವಿಧಾನ ಗೌರವ ಅಭಿಯಾನ ನಡೆಯಲಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಹಾಗೂ ಕುಡಚಿ ಶಾಸಕ ಪಿ.ರಾಜೀವ ತಿಳಿಸಿದರು. 

ಚಿಕ್ಕೋಡಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಅಂಗವಾಗಿ ಡಾ, ಬಿ.ಆರ್‌.ಅಂಬೇಡ್ಕರ ಬರೆದ ಸಂವಿಧಾನದ ಪೀಠಿಕೆಯನ್ನು ಜನ ಓದುವ ಹಿನ್ನಲ್ಲೆಯಲ್ಲಿ ಬಿಜೆಪಿ ಎಸ್‌ಸಿ ಮೋರ್ಚಾ ಘಟಕದಿಂದ ಕರ್ನಾಟಕದಲ್ಲಿ ಅಭೂತ್ವ ಪೂರ್ವ ಸಂವಿಧಾನ ಗೌರವ ಅಭಿಯಾನ ನಡೆಯಲಿದೆ ಎಂದು ತಿಳಿಸಿದರು. 

ನ.26 ರಂದು ಬಿಜೆಪಿಯ ಎಲ್ಲ 37 ಸಂಘಟನಾತ್ಮಕ ಜಿಲ್ಲೆಗಳಲ್ಲಿ ಸಂವಿಧಾನ ಗೌರವ ಅಭಿಯಾನದ ಉದ್ಘಾಟನೆ ನಡೆಯಲಿದೆ. ಅಂದು ರೋಡ್ ಶೋ, ಪಾದಯಾತ್ರೆ ಮತ್ತು ಸಭೆಗಳನ್ನು ಹಮ್ಮಿಕೊಳ್ಳಲಾಗಿದೆ. ನ.26 ರಿಂದ ಡಿ.6ರ ತನಕ 310 ಸಂಘಟನಾತ್ಮಕ ಮಂಡಲಗಳಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸಮಾಜ ಸೇವಕ, ಸಾಧಕರನ್ನು ಗುರ್ತಿಸಿ ಸನ್ಮಾನ ಕಾರ್ಯಕ್ರಮ ನಡೆಯುತ್ತದೆ. ನ,28ರಿಂದ ಡಿ.4ರ ತನಕ ರಾಜ್ಯದ  ಮೈಸೂರು, ಶಿವಮೋಗ್ಗ, ಹುಬ್ಬಳ್ಳಿ, ಕಲಬುರಗಿ ಮತ್ತು ಬೆಂಗಳೂರು ಪ್ರಮುಖ ಕೇಂದ್ರಗಳಲ್ಲಿ ಸಾರ್ವಜನಿಕ ಸಭೆ ನಡೆಯುತ್ತದೆ ಎಂದರು. 

ನ,26ರಿಂದ 28ರವರೆಗೆ 3 ದಿನಗಳ ಕಾಲ ಎಲ್ಲ ಮಂಡಲ, ಜಿಲ್ಲೆಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರನ್ನು ಗುರುತಿಸಿ ಕೇಂದ್ರ ಮತ್ತು ರಾಜ್ಯದ ಯೋಜನೆಗಳ ತಿಳಿಸಲಾಗುತ್ತದೆ. ಡಿ.6 ರಂದು ಡಾ,ಅಂಬೇಡ್ಕರ ಪರಿನಿರ್ವಹಣಾ ದಿನ ಮತ್ತು ಸಂವಿಧಾನ ಗೌರವ ದಿವಸದ ಸಮಾರೋಪ ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯ ಅಧ್ಯಕ್ಷರು ಮತ್ತು ಸಂಸದರು ಮತ್ತು ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ ಎಂದು ಪಿ.ರಾಜೀವ ತಿಳಿಸಿದರು. 

 ಬಿಜೆಪಿ ಜಿಲ್ಲಾಧ್ಯಕ್ಷ ಡಾ,ರಾಜೇಶ ನೇರ್ಲಿ, ಪ್ರಧಾನ ಕಾರ್ಯದರ್ಶಿ ಸತೀಶ ಅಪ್ಪಾಜಿಗೋಳ, ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಸದಾಶಿವ ಹುಂಜ್ಯಾಗೋಳ, ಪುರಸಭೆ ಉಪಾಧ್ಯಕ್ಷ ಸಂಜು ಕವಟಗಿಮಠ ಮುಂತಾದವರು ಇದ್ದರು. 


ಸುದ್ದಿ ಓದಿ