ಮಹಾರಾಷ್ಟ್ರ : ಬಿಜೆಪಿಯಿಂದ ನಾಡಿದ್ದು ರಾಜ್ಯಾದ್ಯಂತ ‘ಘಂಟಾನಾದ’
ಥಾಣೆ, ಆಗಸ್ಟ್ 27 : ರಾಜ್ಯದ ದೇವಾಲಯಗಳನ್ನು ಮತ್ತೆ
ತೆರೆಯಲು ಆಗ್ರಹಿಸಿ ಭಾರತೀಯ ಜನತಾ ಪಕ್ಷ ಶನಿವಾರ ದೇವಾಲಯಗಳ ಮುಂದೆ ರಾಜ್ಯವ್ಯಾಪಿ 'ಘಂಟಾ ನಾದ' ಆಯೋಜಿಸಲಿದೆ.
ಗುರುವಾರ ವಿಡಿಯೋ ಮೂಲಕ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ರವೀಂದ್ರ ಚವಾಣ್, ಲಾಕ್ ಡೌನ್ ನಂತರ ದೇಶಾದ್ಯಂತ ದೇವಾಲಯಗಳಿಗೆ ಹಾಕಿದ್ದ ಬೀಗ ತೆಗೆಯಲಾಗಿದೆ. ಆದರೆ ಮಹಾರಾಷ್ಟ್ರದಲ್ಲಿ ದೇವಾಲಯಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿಲ್ಲ.
ಹೀಗಾಗಿ ಆಗಸ್ಟ್ 29 ರಂದು ‘ಘಂಟಾನಾದ’ ಆಂದೋಲನಕ್ಕೆ ವಿವಿಧ ಸಂಸ್ಥೆಗಳು ಮತ್ತು ದೇವಾಲಯದ ಟ್ರಸ್ಟ್ ಪ್ರತಿನಿಧಿಗಳು ಸೇರಲಿದ್ದಾರೆ ಎಂದು ಹೇಳಿದ್ದಾರೆ.
ಹಾಗೂ ಮದ್ಯದಂಗಡಿಗಳನ್ನು ಮತ್ತೆ ತೆರೆಯಲಾಯಿತು. ಹಾಗಿದ್ದಲ್ಲಿ ದೇವಾಲಯಗಳನ್ನು ಏಕೆ ತೆರೆಯಬಾರದು ಎಂದು ಅವರು ಪ್ರಶ್ನಿಸಿದ್ದಾರೆ.
ರಾಜ್ಯದ ದೇವಾಲಯಗಳು ಮತ್ತೆ ತೆರೆದು ಈ ಸರ್ಕಾರವನ್ನು ಜಾಗೃತಗೊಳಿಸುವಂತೆ ಎಲ್ಲಾ ದೇವಾಲಯಗಳ ಮುಂದೆ ಪ್ರತಿಯೊಂದು ಹಳ್ಳಿಯಲ್ಲೂ ಘಂಟಾನಾದ ಕೈಗೊಳ್ಳಬೇಕೆಂದು ಅವರು ರಾಜ್ಯದ ನಾಗರಿಕರಿಗೆ ಮನವಿ ಮಾಡಿದ್ದಾರೆ.