ವಿಕಸಿತ ಭಾರತಕ್ಕಾಗಿ ಬಿಜೆಪಿ ಸದಸ್ಯತಾ ಅಭಿಯಾನ : ಅರುಣಕುಮಾರ
ಶಿಗ್ಗಾವಿ,31 : ಭಾರತೀಯ ಜನತಾ ಪಾರ್ಟಿ ಶಿಗ್ಗಾಂವಿ ಮಂಡಲದ ಬಿಜೆಪಿ ಸದಸ್ಯತ್ವ ಅಭಿಯಾನದ ತಾಲೂಕ ಮಟ್ಟದ ಕಾರ್ಯಗಾರವನ್ನು ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಉದ್ಘಾಟಿಸಿ ಮಾತನಾಡಿ ವಿಕಸಿತ ಭಾರತಕ್ಕಾಗಿ ಬಿಜೆಪಿ ಸದಸ್ಯತಾ ಅಭಿಯಾನ ಇದಾಗಿದ್ದು ಹೆಮ್ಮೆಯ ಪ್ರಧಾನಿ ನರೇಂದ್ರ ಮೋದೀಜೀ ಅವರ ನೇತೃತ್ವದಲ್ಲಿ ಜಗತ್ತಿನ ಐದನೇ ಆರ್ಥಿಕ ಸದೃಢ ರಾಷ್ಟ್ರವಾಗಿರುವ ಭಾರತವು ಮತ್ತೊಂದು ಹೆಜ್ಜೆ ಮುಂದಿಟ್ಟು ಮೂರನೇ ಸ್ಥಾನ ಅಲಂಕರಿಸುವತ್ತ ಸಾಗಿದೆ..ಈ ನಿಟ್ಟಿನಲ್ಲಿ ಬಿಜೆಪಿ ಪರ ಜನಸಾಮಾನ್ಯರ ಬೆಂಬಲ ವ್ಯಾಪಕವಾಗಿ ವಿಸ್ತರಿಸುತ್ತಿದೆ ಎಂದರು.
ಸೆಪ್ಟೆಂಬರ್ 2 ರಿಂದ ಆರಂಭವಾಗಲಿರುವ ಸದಸ್ಯತಾ ಅಭಿಯಾನವನ್ನು ದಾಖಲೆಯ ಪ್ರಮಾಣದಲ್ಲಿ ಸದಸ್ಯತ್ವ ನೊಂದಣಿ ಆಗುವ ನಿಟ್ಟಿನಲ್ಲಿ ವಿರಮಿಸದೇ ಶ್ರಮಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶಿಗ್ಗಾವಿ ಮಂಡಲ ಸದಸ್ಯತ್ವ ಅಭಿಯಾನ ಸಂಚಾಲಕ ಸೋಮಶೇಖರಯ್ಯ ಗೌರಿಮಠ , ಬಿಜೆಪಿ ಮಂಡಲದ ಅಧ್ಯಕ್ಷ ವಿಶ್ವನಾಥ ಹರವಿ, ಹಾವೇರಿ ಬಿಜೆಪಿ -ಪ್ರಧಾನ ಕಾರ್ಯದರ್ಶಿ ಸಂತೋಷ ಆಲದಕಟ್ಟಿ, ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಸುಭಾಷ್ ಚವ್ಹಾಣ, ಪುರಸಭೆ ಅಧ್ಯಕ್ಷ ಸಿದ್ದಾರ್ಥ್ಗೌಡ ಪಾಟೀಲ, ಶಿಗ್ಗಾವಿ ಮಂಡಲ, ಸದಸ್ಯತ್ವ ಅಭಿಯಾನ ಉಸ್ತುವಾರಿ ರೇಣುಕನಗೌಡ ಪಾಟೀಲ , ನಿಕಟಪೂರ್ವ ಅಧ್ಯಕ್ಷ ಶಿವಾನಂದ್ ಮ್ಯಾಗೇರಿ, ಹಾವೇರಿ ಬಿಜೆಪಿ ಉಪಾಧ್ಯಕ್ಷ ಸಿದ್ದು ಚಿಕ್ಕಬಿದರಿ ಸೇರಿದಂತೆ ಪಕ್ಷದ ಪ್ರಮುಖರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.