ಕೊರೋನ ಸೋಂಕಿಗೆ ರಾಜಸ್ತಾನದ ಬಿಜೆಪಿ ಶಾಸಕಿ ಬಲಿ
ಜೈಪುರ,
ನವೆಂಬರ್ 30: ಕೊರೋನ ಸೋಂಕಿಗೆ ರಾಜಸ್ತಾನದ
ಬಿಜೆಪಿ ನಾಯಕಿ ಮತ್ತು ಶಾಸಕಿ ಕಿರಣ್ ಮಹೇಶ್ವರಿ ಮೃತಪಟ್ಟಿದ್ದಾರೆ. ಕೋವಿಡ್ ಪಾಸಿಟಿವ್ ಬಂದ ಬಳಿಕ
ಅವರು ಹರಿಯಾಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ರಾಜಸ್ತಾನದ ರಾಜ್ಸಮಂಧ್ ಕ್ಷೇತ್ರದ ಬಿಜೆಪಿ ಶಾಸಕಿ ಕಿರಣ್ ಮಹೇಶ್ವರಿ
ಸೋಮವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಗುರುಗಾಂವ್ ಸಮೀಪದ ಮೇದಾಂತ ಆಸ್ಪತ್ರೆಗೆ
ಅವರನ್ನು ದಾಖಲು ಮಾಡಲಾಗಿತ್ತು.
ಕಿರಣ್ ಮಹೇಶ್ವರಿ 2018ರ ಚುನಾವಣೆಯಲ್ಲಿ ತಮ್ಮ ಎದುರಾಳಿ, ಕಾಂಗ್ರೆಸ್ ನ ನಾರಾಯಣ್ ಸಿಂಗ್ ಅವರನ್ನು ಪರಾಭವಗೊಳಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದರು.
ರಾಜಸ್ತಾನದಲ್ಲಿ ಇದುವರೆಗೂ ಕೊರೋನದಿಂದಾಗಿ ಮೃತಪಟ್ಟವರ ಸಂಖ್ಯೆ 2,292ಕ್ಕೆ ಏರಿಕೆಯಾಗಿದೆ . ಭಾನುವಾರ ರಾಜ್ಯದಲ್ಲಿ 2,581 ಹೊಸ ಕೊರೋನ ಪ್ರಕರಣ ದಾಖಲಾಗಿದ್ದು, 18 ಜನರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.