ಶಿಗ್ಗಾವ್

ಉಪ ಚುನಾವಣೆಗೆ ಬಿಜೆಪಿಯ ಪ್ರಬಲ ಟಿಕೇಟ ಆಕಾಂಕ್ಷಿ : ಶಶಿಧರ ಯಲಿಗಾರ

ಉಪ ಚುನಾವಣೆಗೆ ಬಿಜೆಪಿಯ ಪ್ರಬಲ ಟಿಕೇಟ ಆಕಾಂಕ್ಷಿ  : ಶಶಿಧರ ಯಲಿಗಾರ

ಶಿಗ್ಗಾವಿ 22 : ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಯಿಯ ಪ್ರಬಲ ಟಿಕೇಟ ಆಕಾಂಕ್ಷಿಯಾಗಿದ್ದು, ಪಕ್ಷದ ವರಿಷ್ಟರು ಅವಕಾಶ ಕಲ್ಪಿಸಿಕೊಟ್ಟರೆ ಬೊಮ್ಮಾಯಿವರ ಅಭಿವೃದ್ದಿ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುವುದಾಗಿ ಸಿಬಿ ಯಲಿಗಾರ ಸೇವಾಸಂಸ್ಥೆಯ ಅಧ್ಯಕ್ಷ ಶಶಿಧರ ಯಲಿಗಾರ ಹೇಳಿದರು. 

ತಾಲೂಕಿನ ಅವರ ಗಂಗೆಬಾವಿ ರೆಸಾರ್ಟನಲ್ಲಿ ನಡೆದ ಪತ್ರಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು, ನಾನು 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ದಿಸಿದಾಗ ಕ್ಷೇತ್ರದ ಜನ ನನ್ನ ಸಮಾಜ ಸೇವೆಯನ್ನು ಮೆಚ್ಚಿ ಸುಮಾರು 12 ಸಾವಿರ ಮತ ನೀಡಿದ್ದರು, ಚುನಾವಣೆಯ ನಂತರ ಬಿಜೆಪಿ ಪಕ್ಷದ ಕ್ಷೇತ್ರದ ನಾಯಕರು ಪಕ್ಷಕ್ಕೆ ಆಹ್ವಾನ ನೀಡಿದ್ದರು, ಅಲ್ಲದೆ ಬಿಜೆಪಿ ಸಿದ್ದಾಂತಗಳನ್ನು ನಂಬಿ ಪಕ್ಷ ಸೇರಿದ್ದು, 2024ರ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಪಕ್ಷದ ಅಭ್ಯರ್ಥಿ ಪ್ರಲ್ಹಾದ ಜೋಶಿ ಅವರ ಪರ ಕೆಲಸಮಾಡಿದ್ದು, ಜೋಶಿಯವರು ಪ್ರಶಂಸೆ ವ್ಯಕ್ತಪಡಿಸಿ ನಿಮ್ಮಂತವರು ನಮ್ಮ ಪಕ್ಷಕ್ಕೆ ಬೇಕು ಎಂದು ಹೇಳಿದ್ದರು.  

ಮಾಜಿ ಮುಖ್ಯಮಂತ್ರಿ ಸಂಸದ ಬಸವರಾಜ ಬೊಮ್ಮಾಯಿವರು ಹಾವೇರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ದಿಸಿ ಗೆದ್ದಿರುವುದರಿಂದ ಅನೀರೀಕ್ಷಿತವಾಗಿ ಎದುರಾಗಿರುವ ಈ ಚುನಾವಣೆಯಲ್ಲಿ ಪಕ್ಷದಿಂದ ಸ್ಪರ್ದಿಸಲು ಪಕ್ಷದ ವರಿಷ್ಠರು ಅವಕಾಶ ಮಾಡಿಕೊಡುವ ನಂಬಿಕೆ ಇದ್ದು, ಪಕ್ಷದ ವರೀಷ್ಟರ ನಿರ್ದಾರಕ್ಕೆ ಬದ್ದವಾಗಿದ್ದು, ಪಕ್ಷ ಯಾರಿಗೇ ಅವಕಾಶ ಕೊಟ್ಟರೂ ಅವರನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದರು. ಉಮೇಶ ಅಂಗಡಿ, ಸೋಮಶೇಖರ ಗೌರಿಮಠ, ರಾಜು ಬಡ್ಡಿ, ಬಸವರಾಜ ಕುರಗೋಡಿ ಇತರರಿದ್ದರು. 


ಸುದ್ದಿ ಓದಿ