ಅಥಣಿ

ಸಿದ್ಧರಾಮಯ್ಯನವರನ್ನು ವೈಚಾರಿಕವಾಗಿ ಸೋಲಿಸಲಾಗದ ಬಿಜೆಪಿ ದುಷ್ಕೃತ್ಯ: ಮಂಗಸೂಳಿ

ಸಿದ್ಧರಾಮಯ್ಯನವರನ್ನು ವೈಚಾರಿಕವಾಗಿ ಸೋಲಿಸಲಾಗದ ಬಿಜೆಪಿ ದುಷ್ಕೃತ್ಯ: ಮಂಗಸೂಳಿ

ಲೋಕದರ್ಶನ ವರದಿ 


ಅಥಣಿ 24: ಮುಖ್ಯಮಂತ್ರಿಗಳಷ್ಟೇ ಮಹತ್ವದ ಸ್ಥಾನ, ಮಾನ ಹೊಂದಿರುವ ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ವೈಚಾರಿಕವಾಗಿ ಸೋಲಿಸಲು ಸಾಧ್ಯವಾಗದ ಬಿಜೆಪಿ ಸಿದ್ಧರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆಯುವ ಮೂಲಕ ತನ್ನ ನಿಜವಾದ ಬಣ್ಣ ಬಯಲು ಮಾಡಿಕೊಂಡಿದೆ ಎಂದು ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಹೇಳಿದರು.  

ಅವರು ಅಥಣಿ ಕಾಂಗ್ರೆಸ್ ಬಿಜೆಪಿ ಧೋರಣೆ ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.  

     ಸಿದ್ಧರಾಮೋತ್ಸವದ ಶಿಸ್ತಿನ ಆಯೋಜನೆ ಹಾಗೂ ಸೇರಿದ 10 ಲಕ್ಷಕ್ಕೂ ಹೆಚ್ಚು ಜನ ನೋಡಿ ಬಿಜೆಪಿ ಸೋಲಿನ ಭಯದಿಂದ ಗಾಬರಿಗೊಂಡು ಸಿದ್ಧರಾಮಯ್ಯ ನವರ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ ತಮ್ಮ ಕಾರ್ಯಕರ್ತರ ಮೂಲಕ ಮೊಟ್ಟೆ ಎಸೆಯುವುದು, ಘೇರಾವ ಹಾಕುವತಹ ದುಷ್ಕೃತ್ಯಗಳನ್ನು ಎಸಗುತ್ತಿದ್ದು, ಬಿಜೆಪಿ ಯಾವುದೇ ತಂತ್ರ ರೂಪಿಸಿದರೂ ಕೂಡ ಮುಂಬರುವ ಚುನಾವಣೆಯಲ್ಲಿ ನಿಶ್ಚಿತವಾಗಿಯೂ ಸೋಲುವುದು ಖಚಿತ ಎಂದ ಅವರು ಸಿದ್ಧರಾಮಯ್ಯ ಸಾವರಕರ ಕುರಿತು ಹೇಳಿಕೆ ನೀಡಿರುವುದರಲ್ಲಿ ತಪ್ಪೇನಿದೆ. ಅವರು ಸತ್ಯವಾದುದನ್ನೇ ಹೇಳಿದ್ದಾರೆ ಇದಕ್ಕೆ ಸಂವಿಧಾನ ವಿರೋಧಿ ಪ್ರತಿಭಟನೆ ಬೇಕಿತ್ತಾ ಎಂದು ಪ್ರಶ್ನಿಸಿದರು.  

     ಅಥಣಿ ಬ್ಲಾಕ್ ಅಧ್ಯಕ್ಷ ಸಿದ್ಧಾರ್ಥ ಸಿಂಗೆ ಮಾತನಾಡಿ, ರಾಜ್ಯ ಬಿಜೆಪಿ ಸರಕಾರ ಪ್ರಾಯೋಜಕತ್ವದಲ್ಲಿಯೇ ಕೊಡಗಿನಲ್ಲಿ ಬಿಜೆಪಿ ಗುಂಡಾಗಳು ಸಿದ್ಧರಾಮಯ್ಯನವರ ಮೇಲೆ ಮೊಟ್ಟೆ ಒಗೆದು ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿದ ಅವರು ಸಿದ್ಧರಾಮಯ್ಯ ರಾಜ್ಯದಲ್ಲಿ ಅತ್ಯಂತ ಹೆಚ್ಚು ಜನಪ್ರಿಯ ನಾಯಕ ಇಂತಹ ಜನಪ್ರಿಯ ನಾಯಕರಾ​‍್ಯರೂ ಬಿಜೆಪಿಯಲ್ಲಿ ಇಲ್ಲ ಇದೇ ಕಾರಣಕ್ಕೆ ಸಿದ್ಧರಾಮಯ್ಯನವರ ವರ್ಚಸ್ಸು ಹಾಳು ಮಾಡಲು ಬಿಜೆಪಿ ಮುಂದಾಗುತ್ತಿರುವುದು ವಿಷಾದದ ಸಂಗತಿಯಾಗಿದೆ. ಬಿಜೆಪಿ ವಿರುದ್ಧ ಮುಂದಿನ ದಿನಗಳಲ್ಲಿ ಇಡೀ ರಾಜ್ಯದಲ್ಲಿ ನಿರಂತರವಾಗಿ ಹೋರಾಟ ಮಾಡುತ್ತೇವೆ ಬಿಜಿಪಿಗೆ ತಾಕತ್ತಿದ್ದರೆ ತಡೆಯಲಿ ನೋಡೋಣ ಎಂದರು.  

     ಕಾಂಗ್ರೆಸ್ ಮುಖಂಡ ನ್ಯಾಯವಾದಿ ಸುನೀಲ ಸಂಕ ಮಾತನಾಡಿ, ಬಿಜೆಪಿ ಸರಕಾರ ಎಲ್ಲ ರಂಗಗಳಲ್ಲಿಯೂ ವಿಫಲವಾಗಿದ್ದು, ರಾಜ್ಯದಲ್ಲಿ ಸರಕಾರದ ಧೋರಣೆ ಕುರಿತು ಚರ್ಚೆ ಆಗಬಾರದು ಎನ್ನುವ ಏಕೈಕ ಕಾರಣದಿಂದ ಮತ್ತು ರಾಜ್ಯದ ಗಮನ ಬೇರೆಡೆ ಸೆಳೆಯುವ ಉದ್ದೇಶದಿಂದ ಬಿಜೆಪಿ ಅಭಿವೃದ್ಧಿಯ ಹರಿಕಾರ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ವಿರುದ್ಧ ಪ್ರತಿಭಟನೆಗೆ ಮುಂದಾಗುತ್ತಿದೆ ಎಂದರು.  

      ಪ್ರತಿಭಟನೆಯ ನಂತರ ಬಿಜೆಪಿ ಧೋರಣೆ ಖಂಡಿಸಿ ಕಾಂಗ್ರೆಸ್ ತಹಶೀಲ್ದಾರ ಸುರೇರ್ಶ ಮುಂಜೆ ಇವರಿಗೆ ಮನವಿ ಸಲ್ಲಿಸಿದರು.  ಪ್ರತಿಭಟನೆಯಲ್ಲಿ ಮಾಜಿ ಶಾಸಕ ಮೋಹನ ಶಹಾ ಮಾತನಾಡಿದರು. ಕಾಂಗ್ರೆಸ್ ಮುಖಂಡ ಎಸ್‌.ಕೆ.ಬುಟಾಳಿ, ಸತ್ಯಪ್ಪಾ ಬಾಗೆನ್ನವರ, ಅಸ್ಲಂ ನಾಲಬಂದ, ಬಸವರಾಜ ಬುಟಾಳಿ, ಶಿವು ಗುಡ್ಡಾಪುರ, ಸೈಯ್ಯದಮೀನ್ ಗದ್ಯಾಳ, ಹೊಳೆಪ್ಪ ಪೂಜಾರಿ, ರಾಜು ಮದಭಾವಿ, ಸುನೀತಾ ಐಹೊಳೆ, ರೇಖಾ ಪಾಟೀಲ, ಕಲಾವತಿ ಕಿತ್ತೂರ, ವೀಲೀನ ಯಳಮಲ್ಲೆ, ಸೈಯ್ಯದ ಗಡ್ಡೇಕರ ಸೇರಿದಂತೆ ನೂರಾರು ಕಾರ್ಯಕರ್ತರು ಮುಖಂಡರು ಪಾಲ್ಗೊಂಡಿದ್ದರು. 


ಸುದ್ದಿ ಓದಿ