ವಾಟ್ಸಾಪ್ ಮೇಲೆ ಬಿಜೆಪಿ ‘ಹಿಡಿತ’ ಬಿಗಿಗೊಳ್ಳುತ್ತಿದೆ ; ರಾಹುಲ್ ಗಾಂಧಿ
ನವದೆಹಲಿ, ಆಗಸ್ಟ್ ೨೯: ಭಾರತದಲ್ಲಿ ಕೋಟ್ಯಾಂತರ ಮಂದಿ ಬಳಸುತ್ತಿರುವ
ಸಾಮಾಜಿಕ ಮಾಧ್ಯಮ ‘ವಾಟ್ಸಾಪ್’ ಮೇಲೆ ಬಿಜೆಪಿ ಹಿಡಿತ
ಬಿಗಿಗೊಳಿಸಿದೆ ಎಂದು ಕಾಂಗ್ರೆಸ್
ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಅಮೆರಿಕಾದ ನಿಯತಕಾಲಿಕ ಪ್ರಕಟಿಸಿರುವ ಲೇಖನ ಉಲ್ಲೇಖಿಸಿ ಈ ಆರೋಪ ಮಾಡಿದ್ದಾರೆ. ಭಾರತದಲ್ಲಿ ಪಾವತಿ ಸೇವೆಗಳನ್ನು ಪ್ರಾರಂಭಿಸಲು ವಾಟ್ಸಾಪ್ ತಯಾರಿ ನಡೆಸುತ್ತಿದೆ, ಇದಕ್ಕೆ ಕೇಂದ್ರ ಸರ್ಕಾರ ತನ್ನ ಅನುಮೋದನೆಯನ್ನು ನೀಡಬೇಕಿದೆ ಎಂದು ಅವರು ಹೇಳಿದ್ದಾರೆ.
ರಾಹುಲ್ ಗಾಂಧಿ ಶನಿವಾರ ಮಾಡಿರುವ ಟ್ವೀಟ್ ನಲ್ಲಿ "ವಾಟ್ಸಾಪ್-ಬಿಜೆಪಿ ನಡುವಣ ಬಾಂಧವ್ಯ” ವನ್ನು ಅಮೆರಿಕಾದ ‘ಟೈಮ್’ ನಿಯತಕಾಲಿಕೆ ಬಹಿರಂಗಪಡಿಸಿದೆ. ೪೦ ಕೋಟಿ ಭಾರತೀಯರು ಬಳಸುವ ವಾಟ್ಸಾಪ್ ... ಪಾವತಿ ಸೇವೆಗಳನ್ನು ಆರಂಭಿಸಲು ಉದ್ದೇಶಿಸಿದೆ. ಇದಕ್ಕೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅನುಮತಿ ಅಗತ್ಯವಿದೆ. ಆ ಮೂಲಕ ವಾಟ್ಸಾಪ್ ಮೇಲೆ ಬಿಜೆಪಿಗೆ ಹಿಡಿತವಿದೆ ಎಂದು ದೂರಿದ್ದಾರೆ.
ಪೇಸ್ ಬುಕ್ ಮಾಲಿಕತ್ವ ವಾಟ್ಸಾಪ್ ಅನ್ನು ನಿರ್ವಹಿಸುತ್ತಿದ್ದು. ದೇಶದಲ್ಲಿ ಈ ಎರಡೂ ಸಾಮಾಜಿಕ ಮಾಧ್ಯಮಗಳ ಮೇಲೆ ಬಿಜೆಪಿ, ಆರ್ ಎಸ್ ಎಸ್ ನಿಯಂತ್ರಣ ಹೊಂದಿವೆ ಎಂದು ರಾಹುಲ್ ಗಾಂಧಿ ಈ ತಿಂಗಳ ೧೬ ರಂದು ಆರೋಪಿಸಿದ್ದರು. ಮತದಾರರ ಮೇಲೆ ಪ್ರಭಾವ ಬೀರಲು, ದ್ವೇಷ ಪೂರಿತ ಸುದ್ದಿಗಳನ್ನು ಹರಡುತ್ತಿವೆ ಎಂದು ದೂರಿದ್ದರು. ಫೇಸ್ ಬುಕ್ ನಿಜಸ್ವರೂಪವನ್ನು ಅಮೆರಿಕಾ ಮಾಧ್ಯಮಗಳು ಬಹಿರಂಗಪಡಿಸಿವೆ ಎಂದು ಅವರು ಹೇಳಿದ್ದರು.