ಚಿಕ್ಕೋಡಿ

ಪಿಕೆಪಿಎಸ್‌ಗೆ ಬಿಡಿಸಿಸಿ ಬ್ಯಾಂಕ ಸಂಪೂರ್ಣ ಸಹಕಾರ: ರಮೇಶ ಕತ್ತಿ

ಪಿಕೆಪಿಎಸ್‌ಗೆ ಬಿಡಿಸಿಸಿ ಬ್ಯಾಂಕ ಸಂಪೂರ್ಣ ಸಹಕಾರ: ರಮೇಶ ಕತ್ತಿ

ಚಿಕ್ಕೋಡಿ 08: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರಿಗೆ ಸಾಲ ನೀಡುವಲ್ಲಿ ಮುಂಚೂಣಿಯಲ್ಲಿವೆ. ದೇಶದ ಅರ್ಥ ವ್ಯವಸ್ಥೆ ಬಲಗೊಳ್ಳುವಲ್ಲಿಯೂ ನೆರವಾಗಿವೆ. ಗ್ರಾಮೀಣ ಪ್ರದೇಶದಲ್ಲಿ ಇರುವ ಪಿಕೆಪಿಎಸ್ ಮೂಲಕ ರೈತರಿಗೆ ಎಲ್ಲ ಸೌಲಭ್ಯ ಮುಟ್ಟಿಸಲು ಬಿಡಿಸಿಸಿ ಬ್ಯಾಂಕ ಸಂಪೂರ್ಣ ಸಹಕಾರ ನೀಡಲಿದೆ ಎಂದು ಬೆಳಗಾವಿ ಬಿಡಿಸಿಸಿ ಬ್ಯಾಂಕ ಅಧ್ಯಕ್ಷರು ಮತ್ತು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು. 

ಶುಕ್ರವಾರ ತಾಲೂಕಿನ ಜೋಡಕುರಳಿ ಗ್ರಾಮದಲ್ಲಿಯ ಬಸವೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರೈತರು ಈ ದೇಶದ ಬೆನ್ನೆಲು, ರೈತರ ಶ್ರೇಯೋಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರಕಾರವು ಹಲವು ಯೋಜನೆ ಜಾರಿ ಮಾಡಿವೆ. ಶೂನ್ಯ ಬಡ್ಡಿ ದರಲ್ಲಿ ಸಾಲ ನೀಡುವ ಏಕೈಕೆ ಸಂಸ್ಥೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು, ಹೀಗಾಗಿ ಗ್ರಾಮದ ಪ್ರತಿಯೊಬ್ಬರು ಸಹಕಾರಿ ಸಂಘದಲ್ಲಿ ಸಾಲ ಪಡೆದುಕೊಂಡು ಸಕಾಲದಲ್ಲಿ ಮರುಪಾವತಿ ಮಾಡಬೇಕು ಎಂದರು. 

ಬೆಳಗಾವಿ ಜಿಲ್ಲೆಯ ರೈತರ ಸಹಕಾರದಿಂದ ಬಿಡಿಸಿಸಿ ಬ್ಯಾಂಕ ರಾಜ್ಯದಲ್ಲಿಯೇ ಮಾದರಿಯಾಗಿದೆ. ರಾಜ್ಯ ಸರಕಾರ ಮನ್ನಾ ಮಾಡಿರುವ ಸಾಲ ಲಾಭ ಹೆಚ್ಚಿಗೆ ಸಿಕ್ಕಿರುವುದು ಬೆಳಗಾವಿ ಜಿಲ್ಲೆಗೆ. ಬಿಡಿಸಿಸಿ ಬ್ಯಾಂಕ ಅಭೂತ್ವ ಪೂರ್ವವಾಗಿ ಬೆಳವಣಿಕೆ ಕಾಣಲು ಬ್ಯಾಂಕಿನ ವ್ಯವಹಾರ ಪಾರದರ್ಶಕವಾಗಿದೆ ಎಂದರು. 

ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಮಾತನಾಡಿ, ಚಿಕ್ಕೋಡಿ-ಸದಲಗಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಜೋಡಕುರಳಿ ಗ್ರಾಮದ ಸಮಗ್ರ ಅಭಿವೃದ್ಧಿ ಪ್ರಯತ್ನ ಮಾಡಿದ್ದೇನೆ. ಈ ಹಿಂದೆ ಸಂಸದರಿದ್ದಾಗ ಗ್ರಾಮದಲ್ಲಿ ಹದಗೆಟ್ಟಿರುವ ರಸ್ತೆ ನಿರ್ಮಾಣ ಮತ್ತು ಕೆರೆಗೆ ನೀರು ತುಂಭಿಸುವುದು ಸೇರಿದಂತೆ ವೈಯಕ್ತಿಕ ರೈತರಿಗೆ ಸಹಾಯ ಸಹಕಾರ ಮಾಡಲಾಗಿದೆ. ಈಗ ಶಾಸಕ ಗಣೇಶ ಹುಕ್ಕೇರಿ ಗ್ರಾಮದ ಅಭಿವೃದ್ಧಿಗೆ ಶ್ರಮೀಸುತ್ತಿದ್ದಾರೆ. ಈ ಪ್ರಾಥಮಿಕ ಕೃಷಿ ಪತ್ತಿನ ಮೂಲಕ ಪ್ರತಿಯೊಬ್ಬ ರೈತರು ಸಾಲ ಪಡೆದುಕೊಂಡು ಪ್ರಾಮಾಣಿಕವಾಗಿ ಮರಳಿ ಸಾಲ ತುಂಭಬೇಕು. ಹೆಚ್ಚಿಗೆ ಸಾಲ ಸೌಲಭ್ಯ ಅವಶ್ಯ ಇದ್ದರೇ ನನ್ನ ಮತ್ತು ಬಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ರಮೇಶ ಕತ್ತಿಯವರ ಗಮನಕ್ಕೆ ತರಬೇಕು ಎಂದರು. 

ವೇದಿಕೆ ಮೇಲೆ ಧುರೀಣ ಮಲ್ಲಿಕಾರ್ಜುನ ಪಾಟೀಲ, ಸಂಸ್ಥೆಯ ಅಧ್ಯಕ್ಷ ಬಸಗೌಡ ಪಾಟೀಲ, ರಾಯಪ್ಪ ಹರಕೆ, ಚಂದ್ರಕಾಂತ ಪೂಜೇರಿ, ಬಿ.ಬಿ.ಪಾಟೀಲ, ಶಿವಾಜಿ ಹರಕೆ, ಭೀಮಸೇನ ವಡ್ಡರ,  ಚಂದರ ಗಡಕರಿ, ಶ್ರೀಮತಿ ಪುಸ್ಪಾ ಪಾಟೀಲ, ಶ್ರೀಮತು ರುಕ್ಷ್ಮೀಣಿ ದುಗ್ಗಾಣಿ, ಗ್ರಾಪಂ ಅಧ್ಯಕ್ಷ ಬಾಳಪ್ಪ ಗಡಕರಿ, ವಿಠ್ಠಲ ಹರಕೆ, ಬಿಡಿಸಿಸಿ ಬ್ಯಾಂಕಿನ ತಾಲೂಕಾ ನಿಯಂತ್ರಣಾಧಿಕಾರಿ ವಿಠ್ಠಲ ಮಾಳಿಂಗೆ, ಬ್ಯಾಂಕ ನೀರೀಕ್ಷಕ ಪಿ.ಡಿ.ನವಲೆ, ಬೀರ​‍್ಪ ಮೆಕ್ಕಳಕ್ಕಿ, ಪ್ರವೀನ ದಾಮನೆ, ಬಸವರಾಜ ಉತ್ತೂರೆ, ಚನ್ನಗೌಡ ಪಾಟೀಲ ಮುಂತಾದವರು ಇದ್ದರು. 


ಸುದ್ದಿ ಓದಿ