ವಿಜಯಾಬ್ಯಾಂಕ್ ತಂತ್ರಜ್ಞಾನ ಸಂಯೋಜನೆ ಪೂರ್ಣಗೊಳಿಸಿದ ಬ್ಯಾಂಕ್ ಆಫ್ ಬರೋಡ, ಅಸೆಂಚರ್
ಮುಂಬೈ, ಅ 19 : ಬ್ಯಾಂಕ್ ಆಫ್ ಬರೋಡದೊಂದಿಗೆ ಹಿಂದಿನ ವಿಜಯಾಬ್ಯಾಂಕ್ ಶಾಖೆಗಳ ತಂತ್ರಜ್ಞಾನ ಸಂಯೋಜನೆಯನ್ನು ಅಸೆಂಚರ್ ಮತ್ತು ಬ್ಯಾಂಕ್ ಆಫ್ ಬರೋಡ ಪೂರ್ಣಗೊಳಿಸಿವೆ. ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಜಯಾ ಬ್ಯಾಂಕ್ ವಿಲೀನಗೊಂಡ ನಂತರ ತಂತ್ರಜ್ಞಾನ ವಿಷಯದಲ್ಲಿ ಇದು ಪ್ರಮುಖ ಭಾಗವಾಗಿತ್ತು. ಬ್ಯಾಂಕ್ ಆಫ್ ಬರೋಡದೊಂದಿಗೆ ವಿಲೀನಗೊಂಡ ಮತ್ತೊಂದು ಮತ್ತೊಂದು ಬ್ಯಾಂಕ್ ಆದ ದೇನಾ ಬ್ಯಾಂಕ್ ನ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಗಳಿಗೂ ಅಸೆಂಚರ್ ನೆರವಾಗುತ್ತಿದೆ.
2019 ರಲ್ಲಿ ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ ಗಳು ಬ್ಯಾಂಕ್ ಆಫ್ ಬರೋಡದೊಂದಿಗೆ ವಿಲೀನಗೊಳ್ಳುವುದರೊಂದಿಗೆ ದೇಶದ ಮೂರನೇ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿ ರೂಪುಗೊಂಡಿತ್ತು. ವಿಲೀನ ನಂತರ, ಸಂಯೋಜಿತ ತಂತ್ರಜ್ಞಾನ ವ್ಯವಸ್ಥೆಯಿಂದ ದೇಶಾದ್ಯಂತ 9,000 ಶಾಖೆಗಳು ಮತ್ತು 12,000 ಕ್ಕೂ ಹೆಚ್ಚು ಎಟಿಎಂಗಳ ವ್ಯವಹಾರ ಕಾರ್ಯಾಚರಣೆ ಜಾಲವನ್ನು ಸುಗಮವಾಗಲಿದೆ.