ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ವೃತಾಚರಣೆ ಅತ್ಯಂತ ಕಠಿಣ: ಶಿವಲಿಂಗಶ್ರೀ
ಸವದತ್ತಿ 01: ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಕೈಗೊಳ್ಳುತ್ತಿರುವ ವೃತ ಆಚರಣೆಯು ಅತ್ಯಂತ ಕಠಿಣವಾಗಿದ್ದು, ಶಬರಿಮಲೆಯ ಸ್ವಾಮಿಯ ದರ್ಶನಕ್ಕೆ ಹೋಗುವ ಮುಂಚೆ ನಿತ್ಯ ಮಾಡುವಂತ ಆಚರಣೆ ಪದ್ದತಿಗಳು ಮನುಷ್ಯನ ಮೇಲೆ ಉತ್ತಮ ಪ್ರಭಾವವನ್ನು ಬೀರುತ್ತವೆ ಎಂದು ಕಲ್ಮಠದ ಶಿವಲಿಂಗ ಮಹಾಸ್ವಾಮೀಜಿ ಹೇಳಿದರು. ಪಟ್ಟಣದ ಅಯ್ಯಪ್ಪಸ್ವಾಮಿ ನಗರದಲ್ಲಿರುವ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಂಡ ಮಹಾಪೂಜೆ, ಕೆಂಡಸೇವೆ ಮತ್ತು ಪಡಿಪೂಜೆಯ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ತಾಲೂಕಿನಾದ್ಯಂತ ಅನೇಕ ಕಡೆ ಅಯ್ಯಪ್ಪಸ್ವಾಮಿ ಪೂಜೆಗಳು ಪ್ರತಿನಿತ್ಯ ನೆರವೇರುತ್ತಿದ್ದು, ಪಟ್ಟಣದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ಮಹಾಪೂಜೆಯು ವಿಶೇಷ ಮಹತ್ವವನ್ನು ಪಡೆದುಕೊಂಡಿದೆ ಎಂದರು. ಅಯ್ಯಪ್ಪಸ್ವಾಮಿ ಮಹಾಪೂಜೆ ಮತ್ತು ಮಹಾಪ್ರಸಾದಕ್ಕೆ ಸಹಾಯ ಮತ್ತು ಸಹಕಾರ ನೀಡಿದ ವಿರುಪಾಕ್ಷ ಮಾಮನಿ, ಪಂಚನಗೌಡ ದ್ಯಾಮನಗೌಡರ, ವಿಶ್ವಾಸ ವೈದ್ಯ, ಸೌರವ ಚೋಪ್ರಾ, ರತ್ನಕ್ಕ ಮಾಮನಿ, ಬಸವರಾಜ ಪಟ್ಟಣಶೆಟ್ಟಿ, ಮಲ್ಲಿಕಾರ್ಜುನ ಪುರದಗುಡಿ, ಬಸವರಾಜ ಪ್ರಭುನವರ, ಯಲ್ಲಪ್ಪ ರುದ್ರಾಕ್ಷಿ, ಕಿರಣ ಉದುಪುಡಿ ಸೇರಿದಂತೆ ಇತರರನ್ನು ದೇವಸ್ಥಾನ ಸಮಿತಿವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಬೆಳಿಗ್ಗೆ ಅಯ್ಯಪ್ಪಸ್ವಾಮಿಗೆ ಅಭಿಷೇಕದೊಂದಿಗೆ ಪ್ರಾರಂಭಗೊಂಡ ಮಹಾಪೂಜೆಯಲ್ಲಿ ಸಾಯಂಕಾಲ ಕೆಂಡಸೇವೆ, ಪಡಿಪೂಜೆ, ಮಹಾ ಮಂಗಳಾರತಿ ಹಾಗೂ ಮಹಾಪ್ರಸಾದವನ್ನು ಏರಿ್ಡಸಲಾಗಿತ್ತು. ಕಾಂತೂ ಗುರುಸ್ವಾಮಿ, ಆನಂದ ಚಂದರಗಿ, ಬಸವರಾಜ ಪುಟ್ಟಿ, ಮಹಾಂತೇಶ ಅಮ್ಮಿನಭಾವಿ, ವೆಂಕಣ್ಣ ಗೊರವನಕೊಳ್ಳ, ನವೀನ ಸೋಮಣ್ಣವರ, ಪುಂಡಲೀಕ ಬಾಳೋಜಿ, ಕುಮಾರ ಜಕಾತಿ, ಕಲ್ಲಪ್ಪ ಆಯಟ್ಟಿ, ಗಂಗಯ್ಯ ಹಿರೇಮಠ, ರಾಜು ಪತ್ತಾರ ಸೇರಿದಂತೆ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ಸಮಿತಿಯ ಸದಸ್ಯರು ಮತ್ತು ಅಯ್ಯಪ್ಪ ಮಾಲಾಧಾರಿಗಳು ಉಪಸ್ಥಿತರಿದ್ದರು.