ಜಮಖಂಡಿ

ಆಯುರ್ವೇದ ಎಂದರೆ ದೀರ್ಘಾಯುಷ್ಯ ತಿಳಿಸಿಕೊಡುವ ಸಾಧನೆ: ರಾಜೂರ

ಆಯುರ್ವೇದ ಎಂದರೆ ದೀರ್ಘಾಯುಷ್ಯ ತಿಳಿಸಿಕೊಡುವ ಸಾಧನೆ: ರಾಜೂರ

ಜಮಖಂಡಿ11: ಆಯುರ್ವೇದ ಎಂದರೆ ದೀರ್ಘಾಯುಷ್ಯ ತಿಳಿಸಿಕೊಡುವ ಸಾಧನ. ರೋಗ ಬರದಂತೆ ಬದುಕುವ ರೀತಿ ಕಲಿಸಿಕೊಡುವ ವಿಜ್ಞಾನವಾಗಿದೆ ಎಂದು ತೇರದಾಳ ಗ್ರಾಮೀಣ ಆಯುರ್ವೇದ ವೈದ್ಯಕೀಯ ವಿದ್ಯಾಲಯದ ಪ್ರಾಧ್ಯಾಪಕಿ ಡಾ.ಶಿವಲೀಲಾ ರಾಜೂರ ಹೇಳಿದರು. ನಗರದ ಬಸವಜ್ಯೋತಿ ಪದವಿಪೂರ್ವ ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೊಡಲು ಸಮಾರಂಭದಲ್ಲಿ ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಆರೋಗ್ಯದ ಮಹತ್ವ ಕುರಿತು ನಡೆದ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು. 

ಆರೋಗ್ಯವಂತರನ್ನು ಆರೋಗ್ಯವಾಗಿಡುವುದು ಹಾಗೂ ಅನಾರೋಗ್ಯ ಪೀಡಿತರನ್ನು ಆರೋಗ್ಯವಂತರನ್ನಾಗಿ ಮಾಡುವುದು ಆಯುರ್ವೇದದ ಗುರಿಯಾಗಿದೆ ನಮ್ಮ ಹಿರಿಯರು ತಿನ್ನುವ ಆಹಾರ ಪದ್ಧತಿಯನ್ನೆ ನಾವು ಅನುಸರಿ  ಸಬೇಕು. ಸ್ಥಳೀಯವಾಗಿ ದೊರೆಯುವ ಆಹಾರ ಧಾನ್ಯ, ಹಣ್ಣು-ಹಂಪಲಗಳನ್ನು ಮಾತ್ರ ಸೇವಿಸಬೇಕು. ಬೇಕರಿ ಪದಾರ್ಥಗಳನ್ನು ತಿನ್ನಬಾರದು. ರಾತ್ರಿ ವೇಳೆಯಲ್ಲಿ ನಿದ್ರೆ ಮಾಡಿದರೆ ಆರೋಗ್ಯವಂತರಾಗಿರುತ್ತೇವೆ. ಹಗಲು ವೇಳೆ ನಿದ್ರೆ ಮಾಡಿದರೆ ಅನಾರೋಗ್ಯವಾಗುತ್ತದೆ. ವ್ಯಾಯಾಮ, ಯೋಗ, ಪ್ರಾಣಾಯಾಮ, ಧ್ಯಾನ ಮಾಡಬೇಕು ಎಂದರು. 

ಆಡಳಿತಾಧಿಕಾರಿ ಪ್ರೊ.ಬಸವರಾಜ ಕಡ್ಡಿ ಮಾತನಾಡಿ, ಜ್ಞಾನಾರ್ಜನೆಗೆ ಅಧ್ಯಯನ ಬಿಟ್ಟು ಪರಾ​‍್ಯಯ ಮಾರ್ಗವಿಲ್ಲ. ಮನಸ್ಸನ್ನು ಏಕಾಗ್ರಗೊಳಿಸಿ ಅಧ್ಯಯನದಲ್ಲಿ ತೊಡಗಬೇಕು ಎಂದರು. 

ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಅಧ್ಯಕ್ಷತೆ ವಹಿಸಿದ್ದರು. ಪೂಜಾ ಭಜಂತ್ರಿ, ಶ್ರುತಿ ಕೋನೆಗೋಳ ಪ್ರಾರ್ಥಿಸಿದರು. ಸಂಸ್ಥೆಯ ಅಧ್ಯಕ್ಷ ಡಾ.ಗೀರೀಶ ಕಡ್ಡಿ ಸ್ವಾಗತಿಸಿದರು. ಪವನ ಕುಲಕರ್ಣಿ ಅತಿಥಿಗಳನ್ನು ಪರಿಚಯಿಸಿದರು. ಲಕ್ಷ್ಮೀ ಭೂತಾಳಿ, ಸುಕನ್ಯಾ ಸುತಗುಂಡಿ ನಿರೂಪಿಸಿದರು. ರಮೇಶ ಜಮಖಂಡಿ ವಂದಿಸಿದರು. ಜಮಖಂಡಿ ನಗರದ ಬಸವಜ್ಯೋತಿ ಪದವಿಪೂರ್ವ ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೊಡಲು ಸಮಾರಂಭದಲ್ಲಿ ವಿಶೇಷ ಉಪನ್ಯಾಸದಲ್ಲಿ ಆಯುರ್ವೇದ ವೈದ್ಯಕೀಯ ವಿದ್ಯಾಲಯದ ಡಾ.ಶಿವಲೀಲಾ ರಾಜೂರ ಮಾತನಾಡಿದರು. 


ಸುದ್ದಿ ಓದಿ