ರಾಷ್ಟ್ರೀಯ

ಅಯೋಧ್ಯೆ ದೀಪೋತ್ಸವ : ಕೋವಿಡ್-19 ಹಿನ್ನೆಲೆಯಲ್ಲಿ ಪ್ರದರ್ಶನ ಒಂದು ದಿನಕ್ಕೆ ಸೀಮಿತ

ಅಯೋಧ್ಯೆ ದೀಪೋತ್ಸವ : ಕೋವಿಡ್-19 ಹಿನ್ನೆಲೆಯಲ್ಲಿ ಪ್ರದರ್ಶನ ಒಂದು ದಿನಕ್ಕೆ ಸೀಮಿತ

ಅಯೋಧ್ಯೆ, ನವೆಂಬರ್ 11: ರಾವಣನನ್ನು ಸೋಲಿಸಿದ ನಂತರ ಶ್ರೀರಾಮ ವಿಜಯಿಯಾಗಿ ವಾಪ್ಸಾಗಿದ್ದರ ನೆನಪಿನಲ್ಲಿ ಅಯೋಧ್ಯೆಯಲ್ಲಿ ಆಚರಿಸಲಾಗುವ ಬಹುನಿರೀಕ್ಷಿತ ದೀಪೋತ್ಸವ ಕಾರ್ಯಕ್ರಮವನ್ನು ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಕೇವಲ ಒಂದು ದಿನಕ್ಕೆ ಸೀಮಿತಗೊಳಿಸಲಾಗಿದೆ.

ಇಂದಿನಿಂದ 3 ದಿನಗಳ ಕಾಲ ಕಾರ್ಯಕ್ರಮ ನಡೆಯುತ್ತದೆ ಎಂದು ಬುಧವಾರ ಅಧಿಕಾರಿಗಳು ಹೇಳಿದ್ದರು. ಆದರೆ ಈಗ ಕೋವಿಡ್‍ -19 ಸಾಂಕ್ರಾಮಿಕವನ್ನು ಪರಿಗಣಿಸಿ ಕೇವಲ ಒಂದು ದಿನಕ್ಕೆ ಕಾರ್ಯಕ್ರಮ ಮೊಟಕುಗೊಳಿಸಲಾಗಿದೆ. ನ 13 ರಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪುಷ್ಪಕ ವಿಮಾನದ ಮೂಲಕ ಆಗಮಿಸುವ ಶ್ರೀರಾಮ, ಸೀತಾಮಾತೆ, ಲಕ್ಷ್ಮಣರನ್ನು  ಸಾಂಕೇತಿಕವಾಗಿ ಸ್ವಾಗತಿಸಲಿದ್ದಾರೆ.

ಕೋವಿಡ್-19 ನಿರ್ಬಂಧಗಳಿಂದಾಗಿ ಇಂದಿನ ಮತ್ತು ನಾಳೆಯ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ  ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಗೊಳ್ಳುತ್ತಿರುವ ಸಂದರ್ಭದಲ್ಲಿ ಈ ಬಾರಿಯ ದೀಪಾವಳಿಯನ್ನು ಬೃಹತ್ ಕಾರ್ಯಕ್ರಮವನ್ನಾಗಿಸಲು ಯೋಜಿಸಲಾಗಿತ್ತು. ಆದರೆ, ಕೋವಿಡ್‍19ರಿಂದಾಗಿ ಇದು ಸಾಧ್ಯವಾಗುತ್ತಿಲ್ಲ. ಕೋವಿಡ್-19 ನಿರ್ಬಂಧಗಳಿಂದಾಗಿ  2 ದಿನಗಳ ರಾಮ್‌ಲೀಲಾ ಕಾರ್ಯಕ್ರಮವನ್ನು ಸಹ ರದ್ದುಗೊಳಿಸಲಾಗಿದೆ.  ನ 13 ಸಂಜೆ ದೀಪೋತ್ಸವ ಕಾರ್ಯಕ್ರಮ ನಡೆಯಲಿದ್ದು, ಸರಯು ನದಿಯ ಘಾಟ್‌ನಲ್ಲಿ ಮತ್ತು ದೇವಾಲಯಗಳಲ್ಲಿ ಸುಮಾರು 6 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸುವುದರ ಮೂಲಕ ವಿಶ್ವ ದಾಖಲೆ ನಿರ್ಮಿಸುವ ಪ್ರಯತ್ನ ನಡೆಯುತ್ತಿದೆ.

ದೀಪಾವಳಿ ಸಂದರ್ಭದಲ್ಲಿ ಯಾವುದೇ ರೀತಿಯ ಪಟಾಕಿ ಸುಡುವುದನ್ನು ನಿರ್ಬಂಧಿಸಲಾಗಿದೆ. 

ಸುದ್ದಿ ಓದಿ