ಶಿಗ್ಗಾವ್

ಸುಜ್ಞಾನ ನಿಧಿ ಶಿಷ್ಯವೇತನ

ಸುಜ್ಞಾನ ನಿಧಿ ಶಿಷ್ಯವೇತನ

ಶಿಗ್ಗಾವಿ : ಪಟ್ಟಣದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾ ಕಛೇರಿಯಲ್ಲಿ ಮಕ್ಕಳಿಗೆ ಇರುವ ಸುಜ್ಞಾನ ನಿಧಿ ಶಿಷ್ಯವೇತನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತ್ತು. 

ವೃತ್ತಿಪರ ಶಿಕ್ಷಣ ಕಲಿಯುವ ಮಕ್ಕಳಿಗೆ ಮಂಜೂರಾದ ಶಿಷ್ಯವೇತನ ವನ್ನು ಹಾಗೂ ಅರೋಗ್ಯ ರಕ್ತ ಕಾರ್ಡ್‌ ಕಾರ್ಯಕ್ರಮ ಅಡಿಯಲ್ಲಿ ಅನಾರೋಗ್ಯ ದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿರುವ ರೋಗಿಗಳಿಗೆ ಚಿಕಿತ್ಸಾ ವೆಚ್ಚ ಮಂಜೂರಾಗಿ ಬಂದಿರುವ ಚಿಕಿತ್ಸೆ ವೆಚ್ಚವನ್ನು ಚೆಕ್ ಮೂಲಕ  ಸಂಘದ ಸದಸ್ಯರಿಗೆ ವಿತರಣೆ ಹಾಗೂ ಸುಜ್ಞಾನ ನಿಧಿ ಶಿಷ್ಯವೇತನ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಮಂಜೂರಾತಿ ಪತ್ರ ವಿತರಣೆ ಮಾಡಲಾಯಿತು  

ಕಾರ್ಯಕ್ರಮದಲ್ಲಿ ತಾಲ್ಲೂಕಿನ ಆರೋಗ್ಯ ಇಲಾಖೆಯ ಆಡಳಿತಾಧಿಕಾರಿ ಡಾ. ಹನುಮಂತಪ್ಪ ಪಿ ಎಚ್, ಮಹಿಳಾ ಸಾತ್ವಂನ ಇಲಾಖೆಯ ಶೈಲಜಾ  ಹಾಗೂ ತಾಲ್ಲೂಕಿನ ಯೋಜನಾ ಅಧಿಕಾರಿ ಉಮಾ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಲಲಿತಾ, ವಲಯ ಮೇಲ್ವಿಚಾರಕಾರದ ಚಂದ್ರು ಸೇರಿದಂತೆ ಸಂಘದ ಎಲ್ಲಾ ಫಲಾನುಭವಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ