ಮಗುವಿಗೆ ತಾಯಿ ಎದೆಹಾಲಿನ ಮಹತ್ವದ ಕುರಿತು ಜಾಗೃತಿ
ಜಮಖಂಡಿ,08: ನಗರದ ಬಿ,ಎಲ್,ಡಿ, ಇ ನಸಿಂರ್ಗ್ ಮಹಾವಿದ್ಯಾಲಯ, ಬಿ,ಎಸ್ಸಿ ನಸಿಂರ್ಗ್ ವಿದ್ಯಾರ್ಥಿಗಳಿಂದ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಯಂದಿರಿಗೆ ಹಾಗೂ ಹುಟ್ಟಿದ ಮಗುವಿಗೆ ತಾಯಿ ಎದೆಹಾಲಿನ ಮಹತ್ವದ ಕುರಿತು ಜಾಗೃತಿ ಮೂಡಿಸಿದರು.
ಸ್ತನ್ಯಪಾನದ ಲಾಭಗಳು ಹಾಗೂ ಸ್ತನ್ಯಪಾನದ ಸ್ತಾನಗಳು. ಹಾಲಿನ ಪೂರಕ ಆಹಾರಗಳು, ತಾಯಿ ಮತ್ತು ಮಗುವಿನ ನಡುವಿನ ಬಂಧನ ಮತ್ತು ಕೃತಕ ಪೋಷನಾ ಆಹಾರದ ಬಗ್ಗೆ ತಾಯಂದಿರಿಗೆ ವಿದ್ಯಾರ್ಥಿಗಳಾದ ಸಿಚಿತ್ರಾ, ಕರುಣಾ, ರಾಧಿಕಾ, ರುಕ್ಮೀಣಿ, ಲಕ್ಷ್ಮೀ, ಪೀರದೋಶ ವಿದ್ಯಾರ್ಥಿಗಳು ಜಾಗೃತಿಯನ್ನು ಮೂಡಿಸಿದರು.
ಅದೆ ಪ್ರಕಾರ ಬಿ.ಎಲ್. ಡಿ. ಇ ಸಂಸ್ಥೆಯ ನಸಿಂರ್ಗ್ ಮಹಾವಿದ್ಯಾಲಯವು ಸ್ತನ್ಯಪಾನದ ಕುರಿತು ಪೊಸ್ಟರ್ ಸ್ಪರ್ದೆಯನ್ನು ಆಯೋಜಿಸಿದ್ದು. ಹೃದಯರೋಗ ತಜ್ಞ ಡಾ, ಎಚ್,ಜಿ, ದಡ್ಡಿ ಪೊಸ್ಟರ್ ಸ್ಪರ್ದೆಯನ್ನು ಉದ್ಘಾಟಿಸಿ, ತಾಯಿ ಎದೆ ಹಾಲಿನ ಮಹತ್ವದ ಬಗ್ಗೆ ಮಾತನಾಡಿದರು.
ಪೊಸ್ಟರ್ ಸ್ಪರ್ದೆಯಲ್ಲಿ ಮೊದಲನೆ ಸ್ಥಾನ ಇಬ್ಬರು ವಿದ್ಯಾರ್ಥಿಗಳಾದ ಭಾಗ್ಯಾಶ್ರೀ ಮತ್ತು ರಾಧಿಕಾ, ದ್ವೀತೀಯ ಸ್ಥಾನ ಇಬ್ಬರು ವಿದ್ಯಾರ್ಥಿಗಳಾದ ಸ್ವಾತಿ ಮತ್ತು ವರ್ಷಾ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು. ಪ್ರಾಚಾರ್ಯ ಡಾ,ವೀರಭದ್ರಾ್ಪ ಜಿ ಮೆಂಡಗುದ್ಲಿಯವರು ಪೊಸ್ಟರ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಅಂಭಿನಂದಿಸಿದರು.
ಇದೇ ಸಂದರ್ಭದಲ್ಲಿ ಸಹ ಪ್ರಾಧ್ಯಾಪಕರಾದ ಕವಿತಾ ದಿಂಡವಾರ, ಶಿವಲೀಲಾ ಸಾರವಾಡ, ಸೋಮೇಶ ನಿಕ್ಕಮ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.