“ವಿಶ್ವ ಮಧುಮೇಹ ದಿನಾಚರಣೆ” ಕುರಿತು ಅರಿವು ಕಾರ್ಯಕ್ರಮ
ಧಾರವಾಡ 24: “ವಿಶ್ವ ಮಧುಮೇಹ ದಿನಾಚರಣೆ” ಅಂಗವಾಗಿ ಕೆ. ಎಲ್. ಇ ನರ್ಸಿಂಗ ಕಾಲೇಜ, ಹುಬ್ಬಳ್ಳಿ ಇಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕರಿಗಳ ಕಛೇರಿ, ಜಿಲ್ಲಾ ಎನ್.ಸಿ.ಡಿ ಘಟಕ, ಜಿಲ್ಲಾ ಎನ್.ಸಿ.ಡಿ ಕ್ಲಿನಿಕ್, ಜಿಲ್ಲಾ ಆಸ್ಪತ್ರೆ, ಧಾರವಾಡ ವತಿಯಿಂದ ನರ್ಸಿಂಗ ವಿದ್ಯಾರ್ಥಿಗಳಿಗೆ ಮಧುಮೇಹ ಕುರಿತು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸದರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಆಶಾ ಭಟಖಂಡೆ, ಪ್ರಾಂಶುಪಾಲರು, ಕೆ. ಎಲ್. ಇ ನರ್ಸಿಂಗ ಕಾಲೇಜ, ಹುಬ್ಬಳ್ಳಿ ಇವರು ವಹಿಸಿಕೊಂಡಿದ್ದರು.
ಪ್ರಾರ್ಥನೆಯನ್ನು ವಿದ್ಯಾರ್ಥಿನಿ ಆಸ್ಪಿಯಾ ಹಾಗೂ ತಂಡದವರು ನಡಸಿಕೊಟ್ಟರು. ಶ್ರೀಮತಿ ವಾಣಿ. ಕೆ, ಪ್ರೋಫೆಸರ್ ಹಾಗೂ ಎಚ್.ಓ.ಡಿ, ಡಿಪಾರ್ಟಮೆಂಟ ಆಫ ಕಮ್ಯೂನಿಟಿ ಹೆಲ್ತ ನರ್ಸಿಂಗ ಇವರು ಎಲ್ಲರನ್ನು ಸ್ವಾಗತಿಸಿದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾನ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಡಾ. ಪರಶುರಾಮ ಎಫ್. ಕೆ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು ಹಾಗೂ ಮಧುಮೇಹ ಕಾಯಿಲೆ ಕುರಿತಾಗಿ ವಿವರವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಸಮೀಕ್ಷಣಾಧಿಕಾರಿಗಳಾದ ಡಾ. ಮಹೇಶ ಚಿತ್ತರಗಿ ಇವರು ಮಧುಮೇಹ ಕಾಯಿಲೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ವಿವೇಕಾನಂದ ಕಾಮತ, ಜನರಲ್ ಫಿಜಿಸಿಯನ, ಎನ್.ಪಿ.ಪಿ.ಸಿ ವಿಭಾಗ, ಜಿಲ್ಲಾ ಆಸ್ಪತ್ರೆ, ಧಾರವಾಡ ವಿದ್ಯಾರ್ಥಿಗಳಿಗೆ ಮಧುಮೇಹ ಕಾಯಿಲೆ ಕುರಿತು ಉಪನ್ಯಾಸ ನೀಡಿದರು. ಶ್ರೀ ಮಂಜುನಾಥ ಜಿ. ಎಸ್, ಪ್ರೋಫೆಸರ್ ಹಾಗೂ ಎಚ್.ಓ.ಡಿ, ಡಿಪಾರ್ಟಮೆಂಟ ಆಫ ಮೆಡಿಕಲ್ ಹಾಗೂ ಸರ್ಜಿಕಲ್ ನರ್ಸಿಂಗ ಇವರು ವಂದನಾರೆ್ನ ಮಾಡಿದರು.
ವಿದ್ಯಾರ್ಥಿನಿ ಇವಾಂಜಲಿನ ನಿರೂಪಣೆ ಮಾಡಿದರು. ಈ ವೇಳೆ ಶ್ರೀ ಬಿ. ಆರ್ ಪಾತ್ರೋಟ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು, ಡಾ. ವ್ಹಿ ಎನ್. ಹಿರೇಮಠ, ಜಿಲ್ಲಾ ಕಾರ್ಯಕ್ರಮ ಸಂಯೋಜಕರು, ಶ್ರೀಮತಿ ಎಸ್. ಎಸ್. ತಿವಾರಿ, ಶ್ರೀಮತಿ ರೇಖಾ ಬಾದಗಿ (ಆರೋಗ್ಯ ಶಿಕ್ಷಣಾಧಿಕಾರಿಗಳು), ಶ್ರೀಮತಿ ಮೊನಿಕ (ಬಿ.ಪಿ.ಎಮ್) ಹಾಗೂ ಜಿಲ್ಲಾ ಎನ್.ಸಿ.ಡಿ ಕ್ಲಿನಿಕ್ ಸಿಬ್ಬಂದಿಯವರು ಹಾಜರಿದ್ದರು.